ಕಾಣೆಯಾಗಿದ್ದ ಅನುಷ್ಕಾ ಶೆಟ್ಟಿ ಒಡಿಶಾದಲ್ಲಿ ಕದ್ದುಮುಚ್ಚಿ ಓಡಾಟ; ಕ್ಯಾಮರಾ ಕಂಡು ಓಡಿದ್ದೇಕೆ?

ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ್ದ ಚೆಲುವೆ ಈಗ ಸೈಲೆಂಟ್ ಆಗಿಬಿಟ್ಟಿದ್ದಾರೆ. ಆದರೆ ಸ್ವೀಟಿ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಕೆಲ ವರ್ಷಗಳಿಂದ ಅನುಷ್ಕಾ ಶೆಟ್ಟಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ಕೊನೆಯದಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ವಿಭಿನ್ನ ಪ್ರಯತ್ನದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲಲಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ವೀಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. 'ಸೈಜ್ ಜೀರೊ' ಸಿನಿಮಾ ಮಾಡಲು ಹೋಗಿ ಮಾಡಿಕೊಂಡ ಎಡವಟ್ಟು ಇದಕ್ಕೆ ಕಾರಣ ಎನ್ನುವವರು ಇದ್ದಾರೆ. 'ನಿಶಬ್ಧಂ' ಪ್ರಮೋಷನ್ ಬಳಿಕ ಅನುಷ್ಕಾ ಶೆಟ್ಟಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಕೆಲ ದಿನಗಳ ಹಿಂದೆ ಹುಟ್ಟೂರಿನಲ್ಲಿ ಭೂತಕೋಲದಲ್ಲಿ ಭಾಗವಹಿಸಿದ್ದ ಫೋಟೊಗಳು ಮಾತ್ರ ವೈರಲ್ ಆಗಿತ್ತು.

Anushka Shetty made a public appearance after a long time

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರೀಕರಣದ ವೇಳೆಯೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅನುಷ್ಕಾ ಶೆಟ್ಟಿ ಇತ್ತೀಚೆಗೆ ಹೆಚ್ಚು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಹೊರಗಡೆ ಬಂದರೂ ಮಾಸ್ಕ್ ಧರಿಸಿ ಮುಖ ಕಾಣದಂತೆ ಎಚ್ಚರ ವಹಿಸುತ್ತಾರೆ. ಸದ್ಯ ಒಡಿಶಾದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಸ್ವೀಟಿ ಬ್ಯುಸಿಯಾಗಿದ್ದಾರೆ ಎನ್ನಲಾಗ್ತಿದೆ.

ಒಡಿಶಾದ ಜೇಪೋರ್‌ನಲ್ಲಿ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಅನುಷ್ಕಾ ಶೆಟ್ಟಿ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ವೀಟಿ ನಟನೆಯ ಯಾವುದೇ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ಕ್ರಿಶ್ ನಿರ್ದೇಶನದ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ರಮ್ಯಾಕೃಷ್ಣ ಕೂಡ ಸಾಥ್ ಕೊಡುತ್ತಿದ್ದಾರೆ.

ಒಡಿಶಾದ ಕೋರಾಪುಟ್ ಜಿಲ್ಲೆಯ ಡಿಯೋಮಾಲಿ ಬೆಟ್ಟದಲ್ಲಿ ಚಿತ್ರೀಕರಣ ಆರಂಭಿಸಿರುವ ಈ ಚಿತ್ರವು ಜೇಪೋರ್ ಪಟ್ಟಣದ ಮುಖ್ಯ ರಸ್ತೆ, ಸೂರ್ಯ ಮಹಲ್ ಮತ್ತು ಜಯನಗರ ಪ್ರದೇಶದಲ್ಲಿ ಜಗನ್ನಾಥ ಸಾಗರ್ ಬಳಿಯ ಉದ್ಯಾನವನದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಡಿಯೋಮಾಲಿಯಲ್ಲಿ ಕೂಡ ಚಿತ್ರೀಕರಣ ನಡೆಸುವ ಸಾಧ್ಯತೆಯಿದೆ. 8 ದಿನಗಳ ಕಾಲ ಸ್ವೀಟಿ ಹಾಗೂ ರಮ್ಯಾ ಕೃಷ್ಣ ಅಲ್ಲೇ ಸ್ಥಳೀಯ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಅನುಷ್ಕಾ ಶೆಟ್ಟಿ ಒಡಿಶಾದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಶೂಟಿಂಗ್ ಸೆಟ್‌ನಲ್ಲಿ ಆಕೆಯನ್ನು ನೋಡಲು ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಅದೇ ಕಾರಣಕ್ಕೆ ಚಿತ್ರತಂಡ ಬಹಳ ಭದ್ರತೆ ನಡುವೆ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತದೆ. ಅಷ್ಟೆಲ್ಲಾ ಭದ್ರತಡ ನಡುವೆಯೂ ಅನುಷ್ಕಾ ಮಾಸ್ಕ್ ಧರಿಸಿ ಓಡಾಡುತ್ತಿರುವ ಸಣ್ಣ ವೀಡಿಯೋ ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದಹಾಗೆ ಫೆಬ್ರವರಿ 14 ರವರೆಗೆ ಇನ್ನು ಹೆಸರಿಡದ ಈ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್ ಚಿತ್ರಕೂಟ್ ಹಾಗೂ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು.

'ಸೈಜ್ ಜೀರೊ' ಚಿತ್ರದ ಪಾತ್ರಕ್ಕಾಗಿ ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡು ನಟಿಸುವ ಸಾಹಸ ಮಾಡಿದ್ದರು. ಆದರೆ ಒಮ್ಮೆ ಹೆಚ್ಚಿಸಿಕೊಂಡ ತೂಕವನ್ನು ಮತ್ತೆ ಇಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಒಂದು ಹಂತಕ್ಕೆ ಸಣ್ಣ ಆಗಿದ್ದರೂ ಮೊದಲಿನ ಪಿಜಿಕ್ ಮರಳಿ ಬರಲಿಲ್ಲ, ಅದೇ ಕಾರಣಕ್ಕೆ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸ್ವೀಟಿ ಬೇಕಂತಲೇ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದಾಗಿ ಹೇಳಿದ್ದರು.

More from Filmibeat

English summary
Anushka shetty's new film being shot on a secret note in Odisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X