3 ವರ್ಷಗಳ ನಂತರ ವಾಪಸ್ ಬಂದ ಸ್ವೀಟಿ: ಮಜವಾಗಿದೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಟೀಸರ್
3 ವರ್ಷಗಳ ನಂತರ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ರಿಲೀಸ್‌ಗೆ ರೆಡಿ ಆಗ್ತಿದೆ. ಸದ್ಯ ಸಣ್ಣ ಟೀಸರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ ಚಿತ್ರತಂಡ. ಚಿತ್ರದಲ್ಲಿ ಕರಾವಳಿ ಚೆಲುವೆ ಜೊತೆ ನವೀನ್ ಪೊಲಿಶೆಟ್ಟಿ ಬಣ್ಣ ಹಚ್ಚಿದ್ದಾರೆ. ಸ್ವೀಟಿ ಶೆಫ್ ಆಗಿ ಕಾಣಿಸಿಕೊಂಡಿದ್ದು ನವೀನ್ ಸ್ಟ್ಯಾಂಡಪ್ ಕಮೆಡಿಯನ್ ಆಗಿ ಮಿಂಚಿದ್ದಾರೆ.
ಮಹೇಶ್ ಬಾಬು .ಪಿ ಎಂಬುವವರು ಈ ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಬಾಹುಬಲಿ- 2' ನಂತರ ಅನುಷ್ಕಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ದೇಹದ ತೂಕ ಹೆಚ್ಚಾಗಿದ್ದೇ ಇದ್ದಕ್ಕೆ ಕಾರಣ ಎನ್ನುವವರು ಇದ್ದಾರೆ. 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ವಯಸ್ಸಿಗೆ ತಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ಮೊದಲ ನೋಟದಲ್ಲೇ ನೋಡುಗರ ಗಮನ ಸೆಳೆದಿದೆ. ಚಿತ್ರವನ್ನು ಕನ್ನಡ ಸೇರಿದಂತೆ 4 ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.

ೊಂದು ಕಡೆ ಹೋಟೆಲ್ ಶೆಫ್ ರವಳಿ ಶೆಟ್ಟಿ. ಆಕೆಗೆ ಮದುವೆ ಅಂದ್ರೆ ಇಷ್ಟ ಇರಲ್ಲ, ಆ ವಿಷಯದಲ್ಲಿ ಫ್ಯಾಮಿಲಿ ಸಪೋರ್ಟ್ ಕೂಡ ಇರುತ್ತದೆ. ಮತ್ತೊಂದು ಕಡೆ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಸ್ಟ್ಯಾಂಡಪ್ ಕಾಮೆಡಿಯನ್ ಆಗಬೇಕು ಎನ್ನುವ ಕನಸು ಕಾಣುವ ಯುವಕ. ಆಕಸ್ಮಿಕವಾಗಿ ಇವರಿಬ್ಬರ ನಡುವೆ ಪರಿಚಯ ಆಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಮುಂದೆ ಆ ಸ್ನೇಹ ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದನ್ನು ತೆರೆಮೇಲೆಯೇ ನೋಡಬೇಕು. ಇಬ್ಬರ ನಡುವಿನ ದೃಶ್ಯಗಳು ತುಂಬಾ ಫ್ರೆಶ್ ಆಗಿವೆ. ವಿಶೇಷವಾಗಿ ರವಳಿ ಶೆಟ್ಟಿ, ಪೊಲಿಶೆಟ್ಟಿನ ಸಂದರ್ಶನ ಮಾಡುವ ಸನ್ನಿವೇಶ ಮಜವಾಗಿದೆ.
ನವೀನ್‌ನ ನಿನ್ನ ಸ್ಟ್ರೆಂತ್ ಏನು ಎಂದು ಆಕೆ ಕೇಳಿದಾಗ "ಅವಕಾಶ ಸಿಕ್ಕಾಗಲೆಲ್ಲಾ ಕಾಮಿಡಿ ಮಾಡ್ತೀನಿ" ಅಂತಾನೆ. ವೀಕ್‌ನೆಸ್ ಏನು ಅಂದ್ರೆ "ಸಿಚ್ಯುವೇಷನ್‌ಗೆ ಸಂಬಂಧ ಇಲ್ಲದೇ ಕಾಮಿಡಿ ಮಾಡ್ತಿರ್ತೀನಿ" ಅಂತ ಉತ್ತರ ಕೊಡುತ್ತಾನೆ. ಇನ್ನು ಕೊನೆಗೆ ನಿನ್ನ ಟೈಮಿಂಗ್ ಯಾವಾಗಲೂ ಹೀಗೇನಾ ? ಎನ್ನುವ ಪ್ರಶ್ನೆಗೆ "ಕಾಮಿಡಿ ಟೈಮಿಂಗ್ ಮಾತ್ರ ಪರ್ಫೆಕ್ಟ್ ಆಗಿ ಇರುತ್ತೆ" ಎನ್ನುತ್ತಾನೆ.
ಟೀಸರ್ ನೋಡಿದ್ಮೇಲೆ ಇದು ಪಕ್ಕಾ ಕಾಮೆಡಿ ಎಂಟರ್‌ಟೈನರ್ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ಟೀಸರ್ ಹೊಸ ಫೀಲ್ ಕೊಡುವಂತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ನಿಶಬ್ಧಂ' ಸಿನಿಮಾ ನಂತರ ಅನುಷ್ಕಾ ಶೆಟ್ಟಿ ಈ ಕಥೆ ಕೇಳಿ ಒಪ್ಪಿಕೊಂಡಿದ್ದರು. ಅಭಿಮಾನಿಗಳು ಕೂಡ ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ತೂಕ ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎನ್ನುವ ಗುಸುಗುಸು ಕೇಳಿಬಂದಿತ್ತು. 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದ ಟೀಸರ್ ನೋಡಿದ್ರೆ ಸ್ವೀಟಿ ಅಷ್ಟೇನು ಸಣ್ಣ ಆಗಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಕೊಂಚ ತೂಕ ಇಳಿಸಿದ್ದರು ಮೊದಲಿನ ಪಿಜಿಕ್ ಮರಳಿ ಪಡೆಯಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಈ ಕಾಮಿಡಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











