Miss Shetty Mr Polishetty Trailer: ತಾಯಿಯಾಗೋಕೆ ಗರ್ಭಿಣಿ ಆದ್ರೆ ಸಾಕು.. ಮದ್ವೆ ಯಾಕೆ ಬೇಕು?

ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ'. ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ರಿಲೀಸ್‌ರೆ ರೆಡಿಯಾಗಿದೆ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸಿದೆ. ಖ್ಯಾತ ನಟಿ ಹಾಗೂ ಯುವ ನಟ ಜೊತೆಯಾಗಿ ನಟಿಸಿರುವ ಕಾರಣಕ್ಕೆ ಸಿನಿಮಾ ಕುತೂಹಲ ಮೂಡಿಸಿದೆ.

ಈಗಾಗಲೇ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಟೀಸರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿತ್ತು. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಕಾಮಿಡಿಯನ್ನು ಹೈಲೆಟ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದೆ. ಅನುಷ್ಕಾ ಶೆಟ್ಟಿಗಾಗಿ ನವೀನ್ ಪೋಲಿಶೆಟ್ಟಿ ತರಲೆ, ಮೋಜು, ಮಸ್ತಿ ಹಾಡುಗಳು, ಒಬ್ಬರ ಮುಗ್ಧ ನಟನೆ ಹೀಗೆ ಟ್ರೈಲರ್ ಸಾಗುತ್ತದೆ.

Anushka Shetty, Naveen Polishetty starrer Miss Shetty Mr Polishetty Trailer Released

ಇಂಜಿನಿಯರಿಂಗ್ ಮಾಡಿ ಸ್ಟ್ಯಾಂಡ್ ಅಪ್ ಕಾಮಿಡಿ ಯಾಕೆ ಎಂದು ಅನುಷ್ಕಾ ಕೇಳೋದು, ಅದಕ್ಕೆ ಪ್ರತಿಯಾಗಿ ನೀವು ಶೆಫ್ ಆಗಬೇಕೆಂದು ನಿರ್ಧಿರಿಸಿದ ಬಳಿಕ ಇಂಜಿನಿಯರಿಂಗ್ ಮಾಡಲಿಲ್ಲವೇ ಎಂದು ನವೀನ್ ಕೇಳುವುದು ಇಂಟ್ರೆಸ್ಟಿಂಗ್ ಎನಿಸುತ್ತದೆ. ಮತ್ತೊಂದು ಸನ್ನಿವೇಶದಲ್ಲಿ "ತಾಯಿಯಾಗೋಕೆ ಗರ್ಭಿಣಿ ಆದ್ರೆ ಸಾಕು.. ಮದ್ವೆ ಯಾಕೆ ಬೇಕು?" ಎನ್ನುವ ಸ್ವೀಟಿ ಡೈಲಾಗ್ ಹೈಲೆಟ್ ಆಗಿದೆ.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ಸ್ವೀಟಿ ಶೆಫ್ ಆಗಿ ನಟಿಸಿದ್ದರೆ ನವೀನ್ ಸ್ಟ್ಯಾಂಡಪ್ ಕಾಮೆಡಿಯನ್ ಆಗಿ ಮಿಂಚಿದ್ದಾರೆ. ಲವ್, ರಿಲೇಷನ್‌ಶಿಪ್, ಸಂಬಂಧಗಳು ಹಾಗೂ ಮದುವೆಯಲ್ಲಿ ಆಸಕ್ತಿ ಇಲ್ಲದ ಅನ್ವಿತಾ ರವಳಿ ಶೆಟ್ಟಿಯಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಅಂತಹ ಹುಡುಗಿ ನಾಯಕನನ್ನು ಇಷ್ಟಪಡುತ್ತಾಳೆ. ಆದರೆ ಮದುವೆಯಾಗಲು ಅಲ್ಲ. ಬದಲಿಗೆ ತಾನು ಗರ್ಭಿಣಿಯಾಗಲು ಸಹಾಯ ಕೇಳುತ್ತಾಳೆ. ಇದನ್ನು ಅರ್ಥಮಾಡಿಕೊಳ್ಳದೇ, ನಾಯಕ ಗೊಂದಲಕ್ಕೆ ಪರಿಸ್ಥಿತಿಗೆ ಬೀಳುತ್ತಾನೆ. ಇದನ್ನೇ ಟ್ರೇಲರ್‌ನಲ್ಲಿ ಕುತೂಹಲಭರಿತವಾಗಿ ಹೇಳಲಾಗಿದೆ.

Anushka Shetty, Naveen Polishetty starrer Miss Shetty Mr Polishetty Trailer Released

ಹೊಸ ನಿರ್ದೇಶಕ ಮಹೇಶ್ ಬಾಬು ವಿಭಿನ್ನ ಪ್ರೇಮಕಥೆಯನ್ನು ಮನರಂಜನೆ ಮತ್ತು ಭಾವನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಟ್ರೈಲರ್ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಮೂಡಿಸಿದೆ.

'ಬಾಹುಬಲಿ'- 1 ಬಳಿಕ ಅನುಷ್ಕಾ ಶೆಟ್ಟಿ 'ಸೈಜ್ ಜೀರೋ' ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವ ಸಾಹಸ ಮಾಡಿದ್ದರು. ಆದರೆ ಬಳಿಕ ಆ ತೂಕ ಇಳಿಸಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಮೊದಲಿನ ಪಿಜಿಕ್ ಮರಳಿ ವಾಪಸ್ ಬರಲಿಲ್ಲ. ಆದರೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. 'ಬಾಹುಬಲಿ'- 2 ಚಿತ್ರದಲ್ಲಿ ಗ್ರಾಫಿಕ್ಸ್‌ನಲ್ಲಿ ಆಕೆಯನ್ನು ಸಣ್ಣಗೆ ತೋರಿಸುವ ಪ್ರಯತ್ನ ನಡೀತು.

'ಬಾಹುಬಲಿ' ಸರಣಿ ಬಳಿಕ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಸ್ವೀಟಿ ಕಾಣಿಸಿಕೊಂಡಿದ್ದರು. ಆಕೆಯ 'ನಿಶಬ್ಧಂ' ಸಿನಿಮಾ ಹೀನಾಯವಾಗಿ ಸೋತಿತ್ತು. ಬಳಿಕ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಸ್ವೀಟಿ ಸಿನಿಕರಿಯರ್ ಮುಗಿದೇ ಹೋಯಿತು ಎನ್ನುವ ಸಮಯದಲ್ಲಿ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಒಪ್ಪಿಕೊಂಡಿದ್ದರು. ಚಿತ್ರದಲ್ಲಿ ತಮ್ಮ ವಯಸ್ಸಿಗೆ ತಕ್ಕ ಪಾತ್ರದಲ್ಲಿ ನಟಿಸಿದ್ದಾರೆ.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಅನುಷ್ಕಾ ಶೆಟ್ಟಿ ನಟಿಸುವ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಗುಡ್‌ಬೈ ಹೇಳಲು ಮನಸ್ಸು ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತಿದೆ. ಇನ್ನು ಈ ಚಿತ್ರಕ್ಕಾಗಿ ಸ್ವೀಟಿ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಸಾಮಾನ್ಯವಾಗಿ ಅನುಷ್ಕಾ ಚಿತ್ರವೊಂದಕ್ಕೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸಿರುವುದರಿಂದ ಹೆಚ್ಚು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Anushka Shetty's Miss Shetty Mr Polishetty Trailer out now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X