ಅನುಷ್ಕಾ-ಪ್ರಭಾಸ್ ಮದುವೆ ಫೋಟೋ ವೈರಲ್: ಹೃದಯಕ್ಕೆ ಹತ್ತಿರವಾದ ಚಿತ್ರದ ಬಗ್ಗೆ ಸ್ವೀಟಿ ಹೇಳಿದ್ದೇನು?
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವಿನ ಡೇಟಿಂಗ್, ಮದುವೆ ವದಂತಿ ಇವತ್ತು ನಿನ್ನೆಯದಲ್ಲ. ಮದುವೆ ವಿಚಾರವಾಗಿ ಇಬ್ಬರೂ ಸದಾ ಸುದ್ದಿಯಲ್ಲಿರುವ ಸ್ಟಾರ್ಸ್. ಪ್ರಭಾಸ್ ಮತ್ತು ಅನುಷ್ಕಾ ನಡುವೆ ಪ್ರೀತಿ ಇದೆ, ಇಬ್ಬರು ಡೇಟಿಂಗ್ ನಲ್ಲಿದ್ದಾರೆ, ಮದುವೆಯಾಗುತ್ತಾರೆ ಎನ್ನುವ ಸುದ್ದಿ ಆಗಾಗ ಹರಿದಾಡುತ್ತಲೇ ಇದೆ. ಆದರೆ ಇಬ್ಬರು ಈ ವಿಚಾರವನ್ನು ಇಬ್ಬರು ತಳ್ಳಿ ಹಾಕಿ, ಉತ್ತಮ ಸ್ನೇಹಿತರು ಎನ್ನುತ್ತಿದ್ದಾರೆ.
ಅಂದ್ಹಾಗೆ ಇತ್ತೀಚಿಗೆ ಅನುಷ್ಕಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿದಿದ್ದರು. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಅನುಷ್ಕಾಗೆ ಹರಿದುಬಂದಿವೆ. ಅಭಿಮಾನಿಯೊಬ್ಬ 'ಮಿರ್ಚಿ' ಸಿನಿಮಾದ ಮದುವೆ ಫೋಟೋ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಇಬ್ಬರು ಹಸೆಮಣೆ ಮೇಲೆ ಕುಳಿತಿರುವ ಫೋಟೋ ಇದಾಗಿದೆ. ಈ ಫೋಟೋ ಬಗ್ಗೆ ಹೇಳಿ ಎಂದು ಅಭಿಮಾನಿಯೊಬ್ಬ ಕೇಳಿಕೊಂಡಿದ್ದಾನೆ. ಅಭಿಮಾನಿಯ ಕೋರಿಕೆಗೆ ಅನುಷ್ಕಾ ಉತ್ತರ ನೀಡಿದ್ದಾರೆ. ಮುಂದೆ ಓದಿ..

7 ವರ್ಷಗಳ ಹಿಂದಿನ ಫೋಟೋ
ಇತ್ತೀಚಿಗೆ ಅನುಷ್ಕಾ ಮತ್ತು ನಟ ಪ್ರಭಾಸ್ ಅಭಿನಯದ ಮಿರ್ಚಿ ಸಿನಿಮಾದ ಫೋಟೋವೊಂದು ವೈರಲ್ ಆಗಿದೆ. ಸಿನಿಮಾದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಇಬ್ಬರ ಮದುವೆ ಫೋಟೋ ಇದಾಗಿದೆ. ಇಬ್ಬರು ಹಸೆಮಣೆ ಮೇಲೆ ಕುಳಿತು ನಗುತ್ತಾ ಮಾತನಾಡುತ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಾರು 7 ವರ್ಷದ ಹಿಂದಿನ ಫೋಟೋ ಈಗ ಮತ್ತೆ ಹರಿದಾಡುತ್ತಿದೆ. ಈ ಫೋಟೋ ಕ್ಲಿಕ್ಕಿಸಿದ ಹಿಂದಿನ ಕಥೆಯನ್ನು ರಿವೀಲ್ ಮಾಡಿದ್ದಾರೆ.

ಹೃದಯಕ್ಕೆ ಹತ್ತಿರವಾದ ಸಿನಿಮಾ
ಅನುಷ್ಕಾ ಈ ಫೋಟೋ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ. 'ಮಿರ್ಚಿ ಸಿನಿಮಾ ಸೆಟ್ ನಲ್ಲಿ ಫೋಟೋಗ್ರಾಫರ್ ಕ್ಲಿಕ್ಕಿಸಿದ ಕ್ಯಾಂಡಿಡ್ ಫೋಟೋವಿದು. ಇದು ಚಿತ್ರದ ಚಿತ್ರೀಕರಣದ ಭಾಗವಾಗಿಲ್ಲ. ಚಿತ್ರದ ಪೋಸ್ಟರ್ ಗಾಗಿ ಈ ಫೋಟೋವನ್ನು ಬಳಸಿದ್ದಾರೆ. ಈ ಸಿನಿಮಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರ' ಎಂದು ಹೇಳಿದ್ದಾರೆ.
ಆದಿಪುರುಷ್: ಪ್ರಭಾಸ್ ಜೊತೆ ನಟಿಸುತ್ತಿಲ್ಲವೆಂದ ಅನುಷ್ಕಾ ಶೆಟ್ಟಿ

2013ರಲ್ಲಿ ರಿಲೀಸ್ ಆದ ಸಿನಿಮಾ
ಪ್ರಭಾಸ್ ಮತ್ತು ಅನುಷ್ಕಾ ಅಭಿನಯದ ಸೂಪರ್ ಹಿಟ್ ಸಿನಿಮಾಗಳ್ಲಲಿ ಇದು ಒಂದು. 2013ರಲ್ಲಿ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಯುವಿ ಕ್ರಿಯೇಶನ್ಸ್ ನಲ್ಲಿ ನಿರ್ಮಾಣವಾದ ಸಿನಿಮಾವಿದು. ಈ ಬ್ಯಾನರ್ ನಲ್ಲಿ ಅನುಷ್ಕಾ ಅಭಿನಯದ ಮೊದಲ ಸಿನಿಮಾವಾಗಿದೆ. ಈ ಸಿನಿಮಾ ಅನುಷ್ಕಾ ಮತ್ತು ಪ್ರಭಾಸ್ ಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟಿತು.

'ನಿಶಬ್ದಂ' ಸಿನಿಮಾ ಒಟಿಟಿಯಲ್ಲಿ ರಿಲೀಸ್
ಅನುಷ್ಕಾ ಶೆಟ್ಟಿ ನಿಶಬ್ದಂ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಮಾದವಾನ್ ಅಭಿನಯಿಸಿದ್ದಾರೆ. ನಿಶಬ್ದಂ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ಉತ್ಸುಕರಾಗಿದ್ದರು. ಆದರೆ ಲಾಕ್ ಡೌನ್ ನಿಂದ ನಿಶಬ್ದಂ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಭಾಸ್ ರಾಧೆ ಶ್ಯಾಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಮತ್ತೆಡರು ಸಿನಿಮಾಗಳು ಅನೌನ್ಸ್ ಆಗಿವೆ.


Click it and Unblock the Notifications











