For Quick Alerts
  ALLOW NOTIFICATIONS  
  For Daily Alerts

  ಮಹಾನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಅನುಷ್ಕಾ ಶೆಟ್ಟಿ

  |

  ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಧಾರ್ಮಿಕ ಹಾಗೂ ಸಂಪ್ರದಾಯದ ಮೇಲೆ ಹೆಚ್ಚು ನಂಬಿಕೆ ಹೊಂದಿರುವ ಕಲಾವಿದೆ. ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡುತ್ತಲೇ ಇರ್ತಾರೆ. ಇದೀಗ, ಆಂಧ್ರ ಪ್ರದೇಶದ ಪೋಲವರಂನಲ್ಲಿರುವ ಮಹಾನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

  ತನ್ನ ಆಪ್ತ ಗೆಳತಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಅನುಷ್ಕಾ ಶೆಟ್ಟಿ ಬಹಳ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಮುಖಕ್ಕೆ ಬಟ್ಟೆ ಅಡ್ಡವಾಗಿ ಇಟ್ಟುಕೊಂಡು ದೋಣಿಯಲ್ಲಿ ಹೋಗುತ್ತಿರುವ ಅನುಷ್ಕಾ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿ

  ಅನುಷ್ಕಾ, ಸ್ನೇಹಿತೆ ಪ್ರಶಾಂತಿ ಹಾಗೂ ಇತರೆ ಮೂರು ಜನರೊಂದಿಗೆ ಪೂಜೆ ಸಾಮಾಗ್ರಿಗಳು ಸಹ ದೋಣಿಯಲ್ಲಿದೆ. ಅನುಷ್ಕಾ ದೋಣಿಯಲ್ಲಿ ಹೋಗುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ. ದೇವರ ದರ್ಶನದ ಬಳಿಕ ಅನುಷ್ಕಾ ಮತ್ತು ಸ್ನೇಹಿತೆ ಹೈದರಾಬಾದ್‌ಗೆ ವಾಪಸ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಅಂದ್ಹಾಗೆ, ಆರ್ ಮಾಧವನ್ ನಟನೆಯ ನಿಶ್ಯಬ್ದಂ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹೇಮಂತ್ ಮಧುರ್ಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅಂಜಲಿ, ಶಾಲಿನಿ ಪಾಂಡೆ, ಆರ್ರ ಮಾಧವನ್ ಹಾಗೂ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ನಟಿಸಿದ್ದರು.

  ದಸರಾ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿದಸರಾ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ

  ಬಯಲಾಯ್ತು ನಟಿ Chaitra ಸಾವಿನ ಹಿಂದಿನ ರಹಸ್ಯ??? | Filmibeat Kannada

  ಮದುವೆ ವಿಚಾರಕ್ಕೆ ಆಗಾಗ ಸುದ್ದಿಯಲ್ಲಿರುವ ನಟಿ ಅನುಷ್ಕಾ ಶೆಟ್ಟಿ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳಿಗೂ ಸಹಿ ಹಾಕಿಲ್ಲ ಎಂದು ಹೇಳಲಾಗಿದೆ.

  English summary
  South indian actress Anushka Shetty Performs Special Pooja at 'Mahanandiswara' Temple In Polavaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X