ಲೇಡಿ ಸೂಪರ್ ಸ್ಟಾರ್ ಪಟ್ಟ ಕಳೆದುಕೊಂಡ ಅನುಷ್ಕಾ ಶೆಟ್ಟಿ; 'ಘಾಟಿ' ಚಿತ್ರಕ್ಕೆ ಆಕೆ ಸಂಭಾವನೆ ಎಷ್ಟು?
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾ ತೆರೆಕಂಡು ಸದ್ದು ಮಾಡ್ತಿದೆ. ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಸ್ವೀಟಿ ಮಿಂಚಿದ್ದಾರೆ. ಆಕೆಯ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ಅನುಷ್ಕಾ ಶೆಟ್ಟಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. 'ಘಾಟಿ' ಚಿತ್ರಕ್ಕೆ ಆಕೆಯ ಸಂಭಾವನೆ ಎಷ್ಟು ಎನ್ನುವ ಚರ್ಚೆ ನಡೀತಿದೆ.
ಒಂದ್ಕಾಲದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅನುಷ್ಕಾ ಶೆಟ್ಟಿ ಹೆಸರು ಕೇಳಿಬರ್ತಿತ್ತು. ಬಾಲಿವುಡ್ ಸಿನಿಮಾಗಳ ಅವಕಾಶ ಅರಸಿ ಬಂದಿತ್ತು. ಆದರೆ ಅದನ್ನೆಲ್ಲಾ ಸ್ವೀಟಿ ಮಿಸ್ ಮಾಡಿಕೊಂಡಿದ್ದರು. 'ಬಾಹುಬಲಿ' ಭಾಗ-1 ಸಿನಿಮಾ ಬಿಡುಗಡೆಯಾದ ಬಳಿಕ ತೂಕ ಹೆಚ್ಚಿಸಿಕೊಂಡು ಅವಕಾಶಗಳನ್ನು ಕಳೆದುಕೊಂಡರು. ಬಳಿಕ ತೆಳ್ಳಗಾಗಿ ಮತ್ತೆ ಕಂಬ್ಯಾಕ್ ಮಾಡಿದರೂ ಪ್ರಯೋಜನವಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ.

'ಸೂಪರ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು. ಖ್ಯಾತ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದರು. ಬಿಕಿನಿ ಕೂಡ ಧರಿಸಿ ಬೋಲ್ಡ್ ಪಾತ್ರಗಳಲ್ಲಿ ನಟಿಸೋಕೆ ನಾನು ಸಿದ್ಧ ಎಂದರು. ಆದರೆ ಇದ್ದಕ್ಕಿದಂತೆ ಚಿತ್ರರಂಗದಲ್ಲಿ ಆಕೆಯ ಕ್ರೇಜ್ ಕಮ್ಮಿ ಆಗಿತ್ತು. ದಪ್ಪಗಾದ ಬಳಿಕ ಸ್ವೀಟಿ ಸಿನಿಮಾಗಳಲ್ಲಿ ನಟಿಸೋಕೆ ಹಿಂದೇಟು ಹಾಕಿದರು. ಹೊಸಬರ ಹಾವಳಿ ನಡುವೆ ಸುಮ್ಮನಾದರು.
ಅನುಷ್ಕಾ ಶೆಟ್ಟಿ ಸರಿಯಾದ ಪಾತ್ರಗಳಲ್ಲಿ ನಟಿಸಿದ್ದರೆ ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕೇರುವ ಅವಕಾಶ ಇತ್ತು. 'ಅರುಂಧತಿ' ರೀತಿಯ ಸಿನಿಮಾಗಳಲ್ಲಿ ನಟಿಸಿ ಅಂತಾದೊಂದು ನಿರೀಕ್ಷೆ ಹುಟ್ಟಾಕ್ಕಿದ್ದರು. ಆದರೆ ಬಳಿಕ ಯಾಕೋ ಸಾಧ್ಯವಾಗಲಿಲ್ಲ. 'ಘಾಟಿ' ಬಳಿಕ ಮಲಯಾಳಂನ 'ಕಥನಾರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಮುಂದಿನ ವರ್ಷ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.

ವಯಸ್ಸು 40 ದಾಟಿದ್ರು ಸ್ವೀಟಿ ಶೆಟ್ಟಿ ಯಾಕೋ ಮದುವೆ ಆಗುವ ಬಗ್ಗೆ ಮನಸ್ಸು ಮಾಡ್ತಿಲ್ಲ. ಸದ್ಯಕ್ಕೆ ಮದುವೆ ಆಗಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದೆಲ್ಲದರ ನಡುವೆ 'ಘಾಟಿ' ಚಿತ್ರಕ್ಕೆ ಅನುಷ್ಕಾ ಪಡೆದ ಸಂಭಾವನೆ ಎಷ್ಟು ಎನ್ನುವ ಚರ್ಚೆ ನಡೀತಿದೆ. ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ತೆರೆಗೆ ಬಂದಿದೆ. ಚಿತ್ರಕ್ಕೆ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.
ನಿನ್ನೆ ಮೊನ್ನೆ ಬಂದ ನಟಿಯರೆಲ್ಲಾ ಬಾಲಿವುಡ್ ಅಂಗಳಕ್ಕೆ ಜಿಗಿದು 10 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಆದರೆ ಅಂತಹ ಎಲ್ಲಾ ಅವಕಾಶಗಳು ಇದ್ದರೂ ಅನುಷ್ಕಾ ಶೆಟ್ಟಿ ಮಾತ್ರ ವಿಫಲರಾಗಿದ್ದಾರೆ. ಆಕೆಗೆ ಇವತ್ತಿಗೂ ಅಭಿಮಾನಿಗಳಿದ್ದಾರೆ. ಮತ್ತೆ ತೆರೆಮೇಲೆ ನೋಡಬೇಕು ಎಂದು ಆಸೆಪಡುತ್ತಿದ್ದಾರೆ. ಆದರೆ ಮೊದಲಿನಂತೆ ಸ್ವೀಟಿ ಹವಾ ನಡೀತಿಲ್ಲ. ಮಹಿಳಾ ಪ್ರಧಾನ ಸಿನಿಮಾಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ.
ಮೊದಲ ದಿನ 'ಘಾಟಿ' ಸಿನಿಮಾ 2 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ. ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳ ನಡುವೆ ಕ್ರಿಶ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಡಲ್ ಆಗಿದೆ. ವಿಕ್ರಂ ಪ್ರಭು ಜಗಪತಿ ಬಾಬು, ಚೈತನ್ಯಾ ರಾವ್ ಮೊಡಾಡಿ ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಭವಿಷ್ಯ ಗೊತ್ತಾಗಲಿದೆ.


Click it and Unblock the Notifications











