ಪ್ರಭಾಸ್ ಜೊತೆಗಿನ ಫೋಟೊ ಹಂಚಿಕೊಂಡ ಅನುಷ್ಕಾ ಶೆಟ್ಟಿ: ಮತ್ತೆ ಹಬ್ಬಿತು ಹೊಸ ಸುದ್ದಿ!

ಟಾಲಿವುಡ್‌ನಲ್ಲಿ ನಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಹೆಸರು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಸಿನಿಮಾಗಳಿಗಿಂತಲೂ ಈ ಜೋಡಿ ಬೇರೆ, ಬೇರೆ ವಿಚಾರಕ್ಕೇನೆ ಹೆಚ್ಚು ಸುದ್ದಿ ಆಗುತ್ತಾರೆ. ಈಗ ನಟಿ ಅನುಷ್ಕಾ ಪ್ರಭಾಸ್ ಅವರನ್ನು ನೆನಪಿಸಿಕೊಂಡು, ಅವರ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿ ಹಂಚಿಕೊಂಡಿರುವ ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ ಅನುಷ್ಕಾ ಮತ್ತು ಪ್ರಭಾಸ್ ಸಂಬಂಧ ಏನೇ ವಿಚಾರಗಳು ಬಂದರೂ ಕೂಡ ಅಭಿಮಾನಿಗಳು ಕಾತರದಿಂದ ಕಾಯುತ್ತಾ ಇರುತ್ತಾರೆ. ಈಗ ಅನುಷ್ಕಾ ಹಂಚಿಕೊಂಡಿರು ಫೋಟೊ ಕೂಡ ವೈರಲ್ ಅಗಿದೆ. ಅಷ್ಟಕ್ಕೂ ಅನುಷ್ಕಾ ಶೆಟ್ಟಿ ಹಂಚಿಕೊಂಡಿರುವು ಸಿನಿಮಾ ಪೋಟೊ.

2013 ರಲ್ಲಿ ಬಿಡುಗಡೆಯಾದ 'ಮಿರ್ಚಿ' ಚಿತ್ರದ ಫೋಟೋವನ್ನು ಅನುಷ್ಕಾ ಶೆಟ್ಟಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಇದು ಅನುಷ್ಕಾ ಅವರ ಹಿಟ್ ಸಿನಿಮಾಗಳಲ್ಲಿ ಒಂದು. ಹಾಗಾಗಿ ಚಿತ್ರದ ಪೋಸ್ಟರ್ ಜೊತೆಗೆ ಹಳೆ ನೆನಪು ಮೆಲುಕು ಹಾಕಿದ್ದಾರೆ.

ಟಾಲಿವುಡ್ ಸೂಪರ್‌ ಹಿಟ್ ಜೋಡಿ ಅನುಷ್ಕಾ-ಪ್ರಭಾಸ್!

ಟಾಲಿವುಡ್ ಸೂಪರ್‌ ಹಿಟ್ ಜೋಡಿ ಅನುಷ್ಕಾ-ಪ್ರಭಾಸ್!

ಟಾಲಿವುಡ್‌ನಲ್ಲಿ ಅನೇಕ ಸೂಪರ್‌ಹಿಟ್ ಜೋಡಿಗಳಿವೆ. ಅದರಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರ ಸುಂದರ ಜೋಡಿ ಕೂಡ ಒಂದು. ಅನುಷ್ಕಾ, ಪ್ರಭಾಸ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಅಂದರೆ ಅದು ಹಿಟ್ ಎಂದೆ ಅರ್ಥ, ಅಷ್ಟರ ಮಟ್ಟಿಗೆ ಈ ಜೋಡಿ ಜನಪ್ರಿಯ. ಮತ್ತು ಇವರ ಜೋಡಿಗೆ ಅಷ್ಟೇ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಈ ಜೋಡಿ ಅಭಿನಯದ ಮಿರ್ಚಿ ಚಿತ್ರಕ್ಕೆ ತೆರೆಕಂಡು 9 ವರ್ಷ ಅಗಿದೆ.

9 ವರ್ಷದ 'ಮಿರ್ಚಿ' ನೆನಪು ಹಂಚಿಕೊಂಡ ಅನುಷ್ಕಾ!

2013 ರಲ್ಲಿ ನಿರ್ದೇಶಕ ಕೊರಟಾಲ ಶಿವ ಅವರು 'ಮಿರ್ಚಿ' ಚಿತ್ರವನ್ನು ನಿರ್ದೇಶನ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯ್ತು. ಈ ಚಿತ್ರ ರಿಲೀಸ್ ಆಗಿ 9 ವರ್ಷಗಳನ್ನು ಪೂರೈಸಿದೆ. ಹಾಗಾಗಿ ಚಿತ್ರದ ನಾಯಕ ನಟಿ ಅನುಷ್ಕಾ ಶೆಟ್ಟಿ ಚಿತ್ರವನ್ನು ನೆನಪಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ''ಎಲ್ಲರಿಗೂ ಧನ್ಯವಾದಗಳು... ಬ್ಲಾಕ್‌ಬಸ್ಟರ್ 'ಮಿರ್ಚಿ'ಗೆ 9 ವರ್ಷಗಳು.'' ಎಂದು ಬರೆದು ಪೋಸ್ಟರ್ ಹಂಚಿಕೊಂಡಿದ್ದಾರೆ.

ಲವ್ ಗಾಸಿಪ್ ಬಗ್ಗೆ ಅನುಷ್ಕಾ-ಪ್ರಭಾಸ್ ಮೌನ!

ಲವ್ ಗಾಸಿಪ್ ಬಗ್ಗೆ ಅನುಷ್ಕಾ-ಪ್ರಭಾಸ್ ಮೌನ!

ಇನ್ನು ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಇಬ್ಬರೂ ಕೂಡ ಮದುವೆ ಆಗಿಲ್ಲ. ಅಲ್ಲದೇ ಈ ಜೋಡಿ ಗುಟ್ಟಾಗಿ ಪ್ರೀತಿ ಮಾಡುತ್ತಿದೆ ಎನ್ನುವ ಗಾಸಿಪ್ ಮೊದಲಿನಿಂದಲೂ ಇದೆ. ಇಬ್ಬರೂ ಮದುವೆ ಆಗುತ್ತಾರೆ ಎಂದು ಹಲವು ಬಾರಿ ಹೇಳಲಾಗಿತ್ತು. ಆದರೆ ತಮ್ಮ ಮದುವೆ ಬಗ್ಗೆ ಎಷ್ಟೇ ಗಾಸಿಪ್‌ಗಳು ಹಬ್ಬಿದರು ಕೂಡ ಈ ಜೋಡಿ ಮಾತ್ರ ಈ ವಿಚಾರದಲ್ಲಿ ಮೌನ ಮುರಿದಿಲ್ಲ. ಪ್ರಭಾಸ್ ಮತ್ತು ಅನುಷ್ಕಾ ಕೊನೆಯದಾಗಿ ಒಟ್ಟಿಗೆ ಕಾಣಿಸಿಕೊಂಡ ಸಿನಿಮಾ ಬಾಹುಬಲಿ. ಆ ನಂತರ ಈ ಜೋಡಿ ಮತ್ತೆ ಒಟ್ಟಿಗೆ ಬಂದಿಲ್ಲ.

ಅಭಿನಯಕ್ಕೆ ವಿದಾಯ ಹೇಳ್ತಾರ ಅನುಷ್ಕಾ ಶೆಟ್ಟಿ?

ಅಭಿನಯಕ್ಕೆ ವಿದಾಯ ಹೇಳ್ತಾರ ಅನುಷ್ಕಾ ಶೆಟ್ಟಿ?

ಬಾಹುಬಲಿ ಸಿನಿಮಾದ ನಂತರ ನಟಿ ಅನುಷ್ಕಾ ಶೆಟ್ಟಿ ಅಷ್ಟಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ. ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಸೀಮಿತ ಆಗಿದ್ದಾರೆ. ಕೊನೆಯದಾಗಿ ಅನುಷ್ಕಾ ಶೆಟ್ಟಿ 'ನಿಶಬ್ಧಂ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ ಇನ್ನು ಯಾವುದೇ ಹೊಸ ಸಿನಿಮಾ ಪ್ರಕಟ ಮಾಡಿಲ್ಲ. ಹಾಗಾಗಿ ಅನುಷ್ಕಾ ಶೆಟ್ಟಿ ಇನ್ನು ಸಿನಿಮಾ ಮಾಡುವುದು ಅನುಮಾನ ಎನ್ನುವ ಸುದ್ದಿ ಕೂಡ ಟಾಲಿವುಡ್‌ನಲ್ಲಿ ಹರಿದಾಡುತ್ತಲಿದೆ.

More from Filmibeat

English summary
Anushka Shetty Share Her Photo With Prabhas Because Of Mirchi Movie,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X