ಅನುಷ್ಕಾ ಶೆಟ್ಟಿ ಹೊಸ ಚಿತ್ರದ ಟೈಟಲ್ ಘೋಷಣೆ; 8 ವರ್ಷ ಚಿಕ್ಕ ವಯಸ್ಸಿನ ಹೀರೊ ಜತೆ ಸ್ವೀಟಿ ರೊಮ್ಯಾನ್ಸ್

ನಟಿ ಅನುಷ್ಕಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ದರ್ಶನ ಕೊಟ್ಟು ಹಲವು ಕಾಲವಾಗಿದೆ. 2018ರಲ್ಲಿ ಬಿಡುಗಡೆಗೊಂಡಿದ್ದ ಭಾಗಮತಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅನುಷ್ಕಾ ಶೆಟ್ಟಿ 2019ರಲ್ಲಿ ಬಿಡುಗಡೆಯಾದ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಯಾವ ಚಿತ್ರವೂ ಬೆಳ್ಳಿ ತೆರೆ ಮೇಲೆ ಪ್ರದರ್ಶನಗೊಂಡಿಲ್ಲ.

2020ರಲ್ಲಿ ನಿಶಬ್ಧಂ ಎಂಬ ಚಿತ್ರ ಬಿಡುಗಡೆಯಾಯಿತಾದರೂ ಆಗ ಕೊರೊನಾ ಲಾಕ್‌ಡೌನ್‌ ಇದ್ದ ಕಾರಣದಿಂದಾಗಿ ಈ ಚಿತ್ರ ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ಯಾವ ಚಿತ್ರವೂ ಓಟಿಟಿ ಹಾಗೂ ಚಿತ್ರಮಂದಿರ ಎರಡರಲ್ಲಿಯೂ ಸಹ ಬಿಡುಗಡೆಯಾಗಿಲ್ಲ.

Anushka Shetty starrer Miss Shetty and Mister Polishetty to hit theatres on Summer 2023

ಹೀಗೆ ತೆರೆ ಮೇಲೆ ಅನುಷ್ಕಾ ಶೆಟ್ಟಿ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡ ಚಿತ್ರ ಬಿಡುಗಡೆಯಾಗಿ ಐದು ವರ್ಷಗಳೇ ಕಳೆದಿದ್ದು, ದೊಡ್ಡ ಗ್ಯಾಪ್ ಬಳಿಕ ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವೊಂದು ಇದೀಗ ಬಿಡುಗಡೆಗೆ ರೆಡಿ ಇದೆ. ಹೌದು, ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ.

ಈ ಚಿತ್ರದಲ್ಲಿ ಶೆಫ್ ಪಾತ್ರವನ್ನು ನಿರ್ವಹಿಸಿರುವ ಅನುಷ್ಕಾ ಶೆಟ್ಟಿ ತನಗಿಂತ ವಯಸ್ಸಿನಲ್ಲಿ ಎಂಟು ವರ್ಷ ಚಿಕ್ಕವನಾದ ನಟ ನವೀನ್ ಪೊಲಿಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ಇದೊಂದು ಲವ್ ಸ್ಟೋರಿ ಎಂಬುದು ಇನ್ನೂ ವಿಶೇಷ. ಅನುಷ್ಕಾ ಶೆಟ್ಟಿ ಅನ್ವಿತಾ ರಾವಲಿ ಶೆಟ್ಟಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹೊಸದಾಗಿ ರಿಲೀಸ್ ಆದ ಪೋಸ್ಟರ್‌ನಲ್ಲಿ ಹ್ಯಾಪಿ ಸಿಂಗಲ್ ಎನ್ನುವ ಬುಕ್ ಹಿಡಿದು ಪೋಸ್ ಕೊಟ್ಟಿದ್ದಾರೆ.

ಅತ್ತ ನವೀನ್ ಪೊಲಿಶೆಟ್ಟಿ ಈ ಚಿತ್ರದಲ್ಲಿ ಸಿದ್ದು ಪೊಲಿಶೆಟ್ಟಿ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಪೋಸ್ಟರ್‌ನಲ್ಲಿ ತಾವು ಧರಿಸಿರುವ ಟಿ ಶರ್ಟ್ ಮೇಲೆ ರೆಡಿ ಟು ಮಿಂಗಲ್ ಎಂದು ಬರೆದಿದೆ. ಈ ಮೂಲಕ ಇದು ಇಬ್ಬರ ನಡುವೆ ನಡೆಯುವ ಲವ್ ಸ್ಟೋರಿ ಎಂಬುದನ್ನು ಊಹಿಸಬಹುದಾಗಿದೆ. ಈ ಚಿತ್ರಕ್ಕೆ ಮಹೇಶ್ ಬಾಬು ಪಿ ನಿರ್ದೇಶನವಿದ್ದು, ವಂಶಿ ಹಾಗೂ ಪ್ರಮೋದ್ ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಇದೇ ಬೇಸಿಗೆ ಸಮಯಕ್ಕೆ ಚಿತ್ರಮಂದಿರದ ಅಂಗಳಕ್ಕೆ ಬರಲಿದೆ.

More from Filmibeat

English summary
Anushka Shetty starrer Miss Shetty and Mister Polishetty to hit theatres on Summer 2023. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X