ಸದ್ದಿಲ್ಲದೇ ಡಾರ್ಲಿಂಗ್ ಪ್ರಭಾಸ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ಸ್ವೀಟಿ ಅನುಷ್ಕಾ ಶೆಟ್ಟಿ!
ದೇವಸೇನಾ ಅನುಷ್ಕಾ ಶೆಟ್ಟಿ ಮತ್ತೊಂದು ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಒಡಿಶಾದಲ್ಲಿ ಸಿನಿಮಾ ಶೂಟಿಂಗ್ ನಡೀತಿದೆ. ನಟಿ ರಮ್ಯಾಕೃಷ್ಣ ಕೂಡ ಚಿತ್ರಕ್ಕೆ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಯಾವುದೇ ಸುಳಿವು ನೀಡದೇ ಚಿತ್ರೀಕರಣ ನಡೆಸಲಾಗುತ್ತಿದೆ.
ಎರಡು ದಿನಗಳ ಹಿಂದೆ ಒಡಿಶಾದಲ್ಲಿ ಚಿತ್ರೀಕರಣಕ್ಕೆ ಹೋಗುವಾಗ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವೀಟಿಯನ್ನು ನೋಡುವ ಹೋಟೆಲ್ ಬಳಿ ಜಮಾಯಿಸಿದ್ದರು. 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಬಳಿಕ ಕರಾವಳಿ ಚೆಲುವೆ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.

ಇತ್ತೀಚಿನ ವರ್ಷಗಳಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸೋದೆ ಕಮ್ಮಿ ಆಗಿಬಿಟ್ಟಿದೆ. ದೇಹದ ತೂಕ ಹೆಚ್ಚಾಗಿದ್ದೇ ಇದ್ದಕ್ಕೆ ಕಾರಣ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರುತ್ತಲೇ ಇದೆ. ಆದರೆ ಕೆಲ ದಿನಗಳ ಬಗ್ಗೆ ಈ ಬಗ್ಗೆ ಸ್ವೀಟಿ ಪ್ರತಿಕ್ರಿಯಿಸಿದ್ದರು. ಬೇಕಂತಲೇ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾಗಿ ಹೇಳಿದ್ದರು. ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ನಿರ್ಮಾಣದ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಆಕೆ ನಟಿಸಿದ ಕೊನೆಯ ಸಿನಿಮಾ.
ಸದ್ಯ ಇನ್ನು ಹೆಸರಿಡದ ಹೊಸ ಚಿತ್ರದಲ್ಲಿ ಸ್ವೀಟಿ ಶೆಟ್ಟಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಚಿತ್ರವನ್ನು ಸಹ ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಇನ್ನು ಮಲಯಾಳಂನಲ್ಲಿ 'ಕಥನಾರ್' ಎನ್ನುವ ಚಿತ್ರದಲ್ಲಿ ಕೂಡ ಅನುಷ್ಕಾ ನಟಿಸಿದ್ದಾರೆ. ಆ ಸಿನಿಮಾ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ.
10 ದಿನಗಳ ಕಾಲ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಒಡಿಶಾದಲ್ಲಿ ಕ್ಯಾಮರಾ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಬಗ್ಗೆ ಯಾವುದೇ ವಿಚಾರ ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಶೂಟಿಂಗ್‌ಗೆ ಭಾರೀ ಭದ್ರತೆ ವಹಿಸಿದ್ದಾರೆ. ಸದ್ಯ ಒಡಿಶಾದ ಜೇಪೋರ್‌ನಲ್ಲಿ ಹೊಸ ಸಿನಿಮಾ ಚಿತ್ರೀಕರಣ ನಡೀತಿದೆ.

ಜೇಪೋರ್ ನಗರದ ಮುಖ್ಯ ರಸ್ತೆ, ಸೂರ್ಯ ಮಹಲ್ ಮತ್ತು ಜಯನಗರ ಪ್ರದೇಶದಲ್ಲಿ ಜಗನ್ನಾಥ ಸಾಗರ್ ಬಳಿಯ ಪಾರ್ಕ್‌ನಲ್ಲಿ ಒಂದಷ್ಟು ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ಅಲ್ಲೇ ಹೋಟೆಲ್‌ವೊಂದರಲ್ಲಿ ಚಿತ್ರತಂಡ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
'ಬಾಹುಬಲಿ' ಸರಣಿ ಬಳಿಕ ಅನುಷ್ಕಾ ಶೆಟ್ಟಿ ನಟಿಸಿದ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇದ್ದಿದ್ದರಲ್ಲಿ 'ಭಾಗಮತಿ' ಸಕ್ಸಸ್ ಕಂಡಿತ್ತು. ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆ ಚಿತ್ರಕ್ಕೆ ಸೀಕ್ವೆಲ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಇನ್ನು 'ಸೈಜ್ ಜೀರೊ' ಸ್ವೀಟಿ ಕರಿಯರ್‌ನಲ್ಲಿ ಮರೆಯಲಾಗದ ಸಿನಿಮಾ ಆಗಿ ಉಳಿದುಬಿಡ್ತು.
'ನಿಶಬ್ಧಂ' ಸಿನಿಮಾ ಕೂಡ ಸದ್ದು ಮಾಡಲಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದು ಹೋಗಿದ್ದು ಗೊತ್ತಾಗಲಿಲ್ಲ. ತೂಕ ಹೆಚ್ಚಿಸಿಕೊಂಡ ಬಳಿಕ ಅವಕಾಶಗಳು ಬರಲಿಲ್ಲ ಎನ್ನಲಾಗುತ್ತದೆ. ನ್ಯಾಚುರಲ್ ಆಗಿ ತೂಕ ಇಳಿಸಲು ಎಷ್ಟೇ ಪ್ರಯತ್ನಿಸಿದರೂ ಸ್ವೀಟಿ ಮೊದಲಿನಿಂದ ಬಳಕುವ ಬಳ್ಳಿಯಂತೆ ಆಗಲು ಸಾಧ್ಯವಾಗಲಿಲ್ಲ.


Click it and Unblock the Notifications











