'ಘಾಟಿ' ಸೋಲು, ಮಹತ್ವದ ನಿರ್ಧಾರ ಘೋಷಿಸಿದ ಅನುಷ್ಕಾ ಶೆಟ್ಟಿ; ಫ್ಯಾನ್ಸ್‌ಗೆ ಬೇಸರ

ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾ ಕಳೆದ ವಾರ ತೆರೆಗೆ ಬಂದಿತ್ತು. ನಿರೀಕ್ಷೆ ಮೂಡಿಸಿದ್ದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸ್ವೀಟಿ ಪವರ್‌ಫುಲ್ ಪರ್ಫಾರ್ಮೆನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಇಂತಹ ಹೊತ್ತಲ್ಲೇ ಅನುಷ್ಕಾ ಶೆಟ್ಟಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಶೆಟ್ಟಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. 'ಘಾಟಿ' ಸಿನಿಮಾ ಪ್ರಚಾರಕ್ಕೂ ಹಾಜರಾಗಲಿಲ್ಲ. ಬರೀ ಫೋನ್ ಕಾಲ್ ಸಂದರ್ಶನ ಹಾಗೂ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲೇ ಪ್ರಚಾರ ಮುಗಿಸಿಬಿಟ್ಟರು. ಸ್ವೀಟಿ ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುವಂತೆ ಕಾಣ್ತಿದೆ, ಅದಕ್ಕೆ ಕ್ಯಾಮರಾ ಮುಂದೆ ಬರ್ತಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ.

Anushka Shetty Takes Social Media Break After Ghaati Flop Plans Fresh Comeback

ವಯಸ್ಸು 40 ದಾಟಿದ್ರು ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣ್ತಿಲ್ಲ. 'ಬಾಹುಬಲಿ' ಸರಣಿ ಬಳಿಕ ಮೂರ್ನಾಲ್ಕು ಸಿನಿಮಾಗಳಲ್ಲಿ ಮಾತ್ರ ಆಕೆ ನಟಿಸಿದ್ದಾರೆ. ಈ ಹಿಂದೆ ಪ್ರಭಾಸ್ ಸೇರಿ ಕೆಲವರ ಜೊತೆ ಸ್ವೀಟಿ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದು ನಿಜವಾಗಲಿಲ್ಲ. ಸದ್ಯ ಮಲಯಾಳಂನ 'ಕಥನಾರ್' ಎಂಬ ಮತ್ತೊಂದು ಸಿನಿಮಾದಲ್ಲಿ ಸ್ವೀಟಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳುತ್ತಿದ್ದಾರೆ.

ತಮ್ಮ ಮದುವೆ ಬಗ್ಗೆ ಕೂಡ ಇತ್ತೀಚೆಗೆ ಸ್ವೀಟಿ ಮಾತನಾಡಿದ್ದರು. ಸದ್ಯಕ್ಕೆ ಅಂತಹ ಆಲೋಚನೆಗಳಿಲ್ಲ. ಆದಷ್ಟು ಬೇಗ ಮತ್ತೆ ನಿಮ್ಮ ಮುಂದೆ ಬರ್ತೀನಿ, ಮತ್ತಷ್ಟು ಸಿನಿಮಾಗಳಲ್ಲಿ ನಟಿಸುತ್ತೀನಿ ಎಂದಿದ್ದರು. ಸದ್ಯ ಸೋಶಿಯಲ್ ಮೀಡಿಯಾಗೆ ಕೆಲ ದಿನ ಗುಡ್‌ಬೈ ಹೇಳಲು ಮುಂದಾಗಿದ್ದಾರೆ. ಹೌದು ಸೆಲೆಬ್ರೆಟಿಗಳು ಇದ್ದಕ್ಕಿದ್ದಂತೆ ಕೆಲವೊಮ್ಮೆ ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸದ್ಯ ಸ್ವೀಟಿ ಕೂಡ ಅದೇ ಹಾದಿಯಲ್ಲಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಸಾಮಾಜಿಕ ಮಾಧ್ಯಮದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ, ಸ್ಕ್ರೋಲಿಂಗ್ ಅನ್ನು ಮೀರಿ ಕೆಲಸ ಮಾಡಲು ಹಾಗೂ ಜಗತ್ತಿನ ಜೊತೆ ಮತ್ತೆ ಸಂಪರ್ಕ ಸಾಧಿಸಲು ಈ ನಿರ್ಧಾರ. ನಾವೆಲ್ಲರೂ ಸೋಶಿಯಲ್ ಮೀಡಿಯಾ ಇಲ್ಲದೇ ಹೇಗೆ ಇದ್ದೆವೋ ಅದೇ ರೀತಿ ಮತ್ತೆ ಜರ್ನಿ ಆರಂಭಿಸಲು ಸಿದ್ಧಳಾಗಿದ್ಧೇನೆ. ಇನ್ನಷ್ಟು ಕಥೆಗಳು ಮತ್ತು ಪ್ರೀತಿಯೊಂದಿಗೆ ಮತ್ತೆ ವಾಪಸ್ ಬರ್ತೀನಿ" ಎಂದು ಕೈಬರಹದಲ್ಲಿ ಬರೆದ ಕಾಗದದ ಫೋಟೊವನ್ನು ಅನುಷ್ಕಾ ಶೆಟ್ಟಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಅಷ್ಟೇನು ಆಕ್ವೀವ್ ಆಗಿ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಏನಾದರೂ ಪೋಸ್ಟ್ ಮಾಡುತ್ತಿದ್ದರು. ಇನ್‌ಸ್ಟಾ ಸ್ಟೋರಿ ಹಾಕಿಕೊಳ್ಳುತ್ತಿದ್ದರು. ತಮ್ಮ ಇತ್ತೀಚಿನ ಯಾವುದೇ ಫೋಟೊವನ್ನು ಆಕೆ ಹಂಚಿಕೊಳ್ಳುತ್ತಿರಲಿಲ್ಲ. ಬಹಳ ದಿನಗಳ ಬಳಿಕ ಕ್ರಿಶ್ ನಿರ್ದೇಶನದ 'ಘಾಟಿ' ಚಿತ್ರದಲ್ಲಿ ಸ್ವೀಟಿ ಶೆಟ್ಟಿ ನಟಿಸಿದ್ದರು. ಆದರೆ ಸಿನಿಮಾ ಕೈಹಿಡಿಯಲಿಲ್ಲ. ಆಕೆಯ ಕ್ರೇಜ್ ಕೊಂಚ ಕಮ್ಮಿ ಆಗಿದೆ. ಅದೇ ಕಾರಣಕ್ಕೆ ಮತ್ತೆ ದೇಹದ ತೂಕ ಇಳಿಸಿ ಕಂಬ್ಯಾಕ್ ಮಾಡಲು ಪ್ರಯತ್ನದಲ್ಲಿ ಇರುವಂತೆ ಕಾಣ್ತಿದೆ.

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸ್ವೀಟಿ ಶೆಟ್ಟಿ ಮೊದಲಿಗೆ ಯೋಗ ಟೀಚರ್ ಆಗಿದ್ದರು. ಬಳಿಕ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದ್ದರು. ಆದರೆ ಪೂರಿ ಜಗನ್ನಾಥ್ ಕಣ್ಣಿಗೆ ಬಿದ್ದು ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. 'ಸೂಪರ್' ಚಿತ್ರದಲ್ಲಿ ನಾಗಾರ್ಜುನ ಜೊತೆ ತೆರೆ ಹಂಚಿಕೊಂಡಿದ್ದರು. ಅನುಷ್ಕಾ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡು ಸಕ್ಸಸ್ ಕಂಡರು. ಗ್ಲಾಮರಸ್, ಡೀ ಗ್ಲಾಮರಸ್ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಮಿಂಚಿ ಸೈ ಅನ್ನಿಸಿಕೊಂಡರು.

ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದು ಇದೆ. 'ಅರುಂಧತಿ' ರೀತಿಯ ಪವರ್ ಫುಲ್ ಪಾತ್ರಗಳಿಗೆ ಅಬ್ಬರಿಸಿ ಪ್ರೇಕ್ಷಕರ ಮನಗೆದ್ದಿದ್ದರು. ತೂಕ ಹೆಚ್ಚಿಸಿಕೊಂಡಿದ್ದೇ ಆಕೆಯ ಹಿನ್ನಡೆಗೆ ಕಾರಣ ಎನ್ನುವವರು ಇದ್ದಾರೆ. ಬಳಿಕ ಕೊಂಚ ತೂಕ ಇಳಿಸಿಕೊಂಡರೂ ಪ್ರಯೋಜನವಾಗಿರಲಿಲ್ಲ. ಲೇಡಿ ಸೂಪರ್ ಸ್ಟಾರ್ ಆಗುವ ಅವಕಾಶವನ್ನು ಕೈಚೆಲ್ಲಿದ್ದರು.

More from Filmibeat

English summary
Anushka Shetty, after the mixed response to her film Ghaati, announces a break from social media. The actress hints at a strong comeback with upcoming projects like Kathanar.
Read more about: anushka shetty tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X