Anushka Shetty: ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಕರಾವಳಿ ಚೆಲುವೆ: ಮ್ಯಾರೇಜ್ ಪ್ಲ್ಯಾನ್ ಬಗ್ಗೆ ಸ್ವೀಟಿ ಹೇಳಿದ್ದಿಷ್ಟು

ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದು ಗೊತ್ತೇಯಿದೆ. ಕನ್ನಡತಿಯೇ ಆದರೂ ಸ್ವೀಟಿ ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಇನ್ನು ಅನುಷ್ಕಾ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ.

ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ನವೀನ್ ಪೋಲಿಶೆಟ್ಟಿ ಸ್ಯಾಂಡಪ್ ಕಾಮೆಡಿಯನ್ ಆಗಿ ನಟಿಸಿದ್ದರೆ ಸ್ವೀಟಿ ಶೆಫ್ ಪಾತ್ರದಲ್ಲಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ವಾರ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ತೆರೆಗಪ್ಪಳಿಸುತ್ತಿದ್ದು ಅದರೊಟ್ಟಿಗೆ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.

anushka-shetty-talks-about-marriage-plans

ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಅನುಷ್ಕಾ ಶೆಟ್ಟಿ ಬಗ್ಗೆ ಹೊಸದೊಂದು ಆರೋಪ ಕೇಳಿಬರ್ತಿದೆ. ಸ್ವೀಟಿ ಸಿನಿಮಾ ಪ್ರಚಾರದಲ್ಲಿ ಸರಿಯಾಗಿ ಭಾಗಿಯಾಗುತ್ತಿಲ್ಲ. ನವೀನ್ ಪೋಲಿಶೆಟ್ಟಿ ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅನುಷ್ಕಾ ಯಾವುದೇ ಸಂದರ್ಶನ ನೀಡಿಲ್ಲ. ಆಕೆಯ ಕಾರಣಕ್ಕೆ ಪ್ರೀ ರಿಲೀಸ್ ಈವೆಂಟ್ ಕೂಡ ಕ್ಯಾನ್ಸಲ್ ಆಯಿತು ಎನ್ನಲಾಗುತ್ತಿದೆ. ಸಂದರ್ಶನಗಳಲ್ಲಿ ಭಾಗವಹಿಸಿದರೆ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನೆಗಳು ಎದುರಾಗುವ ಭೀತಿಯಿಂದ ಆಕೆ ಹೀಗೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ಸದ್ಯ ಡೆಕ್ಕನ್ ಕ್ರಾನಿಕಲ್ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅನುಷ್ಕಾ ಶೆಟ್ಟಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮದುವೆಯ ವಿಚಾರದ ಬಗ್ಗೆಯೂ ಮೌನ ಮುರಿದಿದ್ದಾರೆ. ಮದುವೆ ಪ್ಲ್ಯಾನ್ಸ್ ಏನಾದರೂ ಇದ್ಯಾ? ಎನ್ನುವ ಪ್ರಶ್ನೆಗೆ "ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ" ಎಂದಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಹೆಸರು ಹಿಂದೆ ಸಾಕಷ್ಟು ಜನರ ಜೊತೆ ತಳಕು ಹಾಕಿಕೊಂಡಿತ್ತು. ಪ್ರಭಾಸ್ ಹಾಗೂ ಸ್ವೀಟಿ ಮದುವೆ ಆಗುತ್ತಾರೆ ಎಂದು ಇನ್ನು ಕೆಲವರು ಅಂದುಕೊಂಡಿದ್ದಾರೆ. ಇವರಿಬ್ಬರು 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರು ಆತ್ಮೀಯ ಸ್ನೇಹಿತರು. ಆದರೆ ಅದನ್ನು ಮೀರಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಎನ್ನುವುದು ಕೆಲವರ ವಾದ.

'ಸೈಜ್ ಜೀರೋ' ಚಿತ್ರದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ಸ್ವೀಟಿ ಬಳಿಕ ಮೊದಲಿನ ಪಿಜಿಕ್ ಮರಳಿ ಪಡೆಯಲು ಸಾಕಷ್ಟು ಕಸರತ್ತು ನಡೆಸುವಂತಾಯಿತು. ಆಕೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಲು ಇದೇ ಕಾರಣ ಎನ್ನಲಾಯಿತು. ಈ ಬಗ್ಗೆ ಎದುರಾದ ಪ್ರಶ್ನೆಗೆ "ಹಳೇ ಶೇಪ್ ಮರಳಿ ಪಡೆಯಲು ಒಂದೊಳ್ಳೆ ಸ್ಕ್ರಿಪ್ಟ್ ಇದ್ದರೆ ಸಾಕು. 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದ ರೀತಿಯ ಪಾತ್ರ ಚೆನ್ನಾಗಿ ಪ್ರೇರೇಪಿಸಬಲ್ಲದು. ಕಲಾವಿದರಾಗಿ ತೂಕ ಹೆಚ್ಚಿಸಿಕೊಳ್ಳುತ್ತೇವೆ, ಇಳಿಸುತ್ತೇವೆ, ಕೆಲವೊಮ್ಮೆ ಈ ಬದಲಾವಣೆಯ ಹಾದಿ ಸವಾಲಿನದ್ದಾಗಿರುತ್ತದೆ" ಎಂದಿದ್ದಾರೆ.

ಇನ್ನು 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದ ಬಗ್ಗೆ ಹೇಳುವುದಾದರೆ ಮಹೇಶ್ ಬಾಬು ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟ್ರೈಲರ್ ಗಮನ ಸೆಳೆದಿತ್ತು. "ತಾಯಿಯಾಗೋಕೆ ಗರ್ಭಿಣಿ ಆದ್ರೆ ಸಾಕು.. ಮದ್ವೆ ಯಾಕೆ ಬೇಕು?" ಎನ್ನುವ ಅನುಷ್ಕಾ ಶೆಟ್ಟಿ ಡೈಲಾಗ್ ಕತೆ ಬಗ್ಗೆ ಕುತೂಹಲ ಮೂಡಿಸಿದೆ.

More from Filmibeat

English summary
Anushka shetty opens up about her marriage plans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X