'ಡಾರ್ಲಿಂಗ್' ಪ್ರಭಾಸ್ ಗೆ ವಿಶ್ ಮಾಡಿ ನಿಕ್ ನೇಮ್ ರಿವೀಲ್ ಮಾಡಿದ ಅನುಷ್ಕಾ ಶೆಟ್ಟಿ

ತೆಲುಗು ಸಿನಿಮಾರಂಗದ ಖ್ಯಾತ ನಟ ಪ್ರಭಾಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 41ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಭಾಸ್ ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಡಾರ್ಲಿಂಗ್ ಪ್ರಭಾಸ್ ಹುಟ್ಟುಹಬ್ಬಕ್ಕೆ ಗೆಳತಿ ನಟಿ ಅನುಷ್ಕಾ ಶೆಟ್ಟಿ ವಿಶ್ ಮಾಡಿದ್ದಾರೆ.

ಅಂದ್ಹಾಗೆ ಅನುಷ್ಕಾ ಮತ್ತು ಪ್ರಭಾಸ್ ನಡುವಿನ ಡೇಟಿಂಗ್, ಮದುವೆ ವದಂತಿ ಇವತ್ತು ನಿನ್ನೆಯದಲ್ಲ. ಮದುವೆ ವಿಚಾರವಾಗಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ. ಅನುಷ್ಕಾ ಮತ್ತು ಪ್ರಭಾಸ್ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವುದು ಅನೇಕರ ವಾದ. ಆದರೆ ಡೇಟಿಂಗ್ ಗಾಸಿಪ್ ಬಗ್ಗೆ ಕೇಳಿದ್ರೆ ಇಬ್ಬರೂ ಉತ್ತಮ ಸ್ನೇಹಿತರಷ್ಟೆ ಎಂದು ಉತ್ತರಿಸುತ್ತಾರೆ.

ಅದೇನೆ ಇರಲಿ ಇಂದು ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಅನುಷ್ಕಾ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ವಿಶ್ ಮಾಡುವ ಜೊತೆಗೆ ಪ್ರಭಾಸ್ ನಿಕ್ ನೇಮ್ ಅನ್ನು ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಅನುಷ್ಕಾ, ಪ್ರಭಾಸ್ ರನ್ನು 'ಪುಪ್ಸು' ಎಂದು ಕರೆಯುತ್ತಾರೆ.

Anushka Shetty Wishes Actor Prabhas on his 41st Birthday

ಈ ಬಗ್ಗೆ ಟ್ವೀಟ್ ಮಾಡಿರುವ ಅನುಷ್ಕಾ, 'ಹ್ಯಾಪಿ ಹ್ಯಾಪಿ ಹ್ಯಾಪಿ ಹ್ಯಾಪಿ ಪುಪ್ಸು. ರಾಧೆ ಶ್ಯಾಮ್ ಮೋಷನ್ ಪೋಸ್ಟರ್ ತುಂಬಾ ಇಷ್ಟವಾಯಿತು. ಸಿನಿಮಾಗಾಗಿ ಎದುರು ನೋಡುತ್ತಿದ್ದೀನಿ. ನಿರ್ದೇಶಕ ರಾಧಕೃಷ್ಣ ಅವರು, ಪೂಜಾ ಮತ್ತು ಇಡೀ ಸಿನಿಮಾತಂಡಗೆ ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ವಿಶ್ ಜೊತೆಗೆ ರಾಧೆ ಶ್ಯಾಮ್ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ಅನುಷ್ಕಾ ಪ್ರಭಾಸ್ ಇಬ್ಬರು ಕೊನೆಯದಾಗಿ ಬಾಹುಬಲಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬಳಿಕ ಇಬ್ಬರು ಮತ್ತೆ ತೆರೆಹಂಚಿಕೊಂಡಿಲ್ಲ. ಇಬ್ಬರನ್ನು ಮತ್ತೆ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಮತ್ತೆ ಯಾವಾಗ ಒಟ್ಟಿಗೆ ನಟಿಸುತ್ತಾರೆ ಎಂದು ಕಾದುನೋಡ ಬೇಕು.

Recommended Video

Chiru ಮಗುವಿಗೆ ಹಾಲುಣಿಸಿದ Doctor | Filmibeat Kannada

More from Filmibeat

English summary
Actress Anushka Shetty Wishes Actor Prabhas on his 41st Birthday. She reveals Prabhas nickname.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X