ಚಿತ್ರ ಬಿಡುಗಡೆಯಾಗದಿದ್ದರೂ ಕಡಿಮೆಯಾಗಿಲ್ಲ ಕನ್ನಡತಿ ಅನುಷ್ಕಾ ಶೆಟ್ಟಿ ಹವಾ, ಹೊಸ ದಾಖಲೆ ಬರೆದ ಸ್ವೀಟಿ..!

ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ನಾಯಕಿಯ ಸುತ್ತ ಕಥೆ ಸುತ್ತಿದರೆ ಪ್ರೇಕ್ಷಕರ ತಲೆ ಸುತ್ತಿ ಬರುತ್ತೆ ಎನ್ನುವ ಹಲವರ ನಂಬಿಕೆಯೇ ಇದಕ್ಕೆ ಮೂಲ ಕಾರಣ. ಹೀಗಾಗಿಯೇ ಹಲವರು ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಎಂದುಕೊಂಡಿದ್ದಾರೆ. ಆದರೆ.. ಇವರ ಈ ಮಾತುಗಳನ್ನ ..

ನಂಬಿಕೆಯನ್ನ .. ಅವಕಾಶ ಸಿಕ್ಕಾಗ ಹಲವರು ಇಲ್ಲಿಯವರೆಗೆ ಸುಳ್ಳಾಗಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚಿದ್ದಾರೆ. ಉದಾಹರಣೆಗೆ ಅನುಷ್ಕಾ ಶೆಟ್ಟಿ. ಹೌದು, ಅನುಷ್ಕಾ ಶೆಟ್ಟಿ ಪಕ್ಕದ ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡತಿ.

Anushka Shetty s Ghaati Seals Record-Breaking 36 Crore OTT Deal

ಎರಡು ದಶಕಗಳ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹಲವಾರು ಚಿತ್ರ ಮತ್ತು ವೈವಿಧ್ಯಮಯ ಪಾತ್ರವನ್ನು ಮಾಡಿರುವ ಅನುಷ್ಕಾ ಸದ್ಯ ಅಭಿಮಾನಿಗಳಿಗೆ ಬೆಳ್ಳಿತೆರೆಯಲ್ಲಿ ದರ್ಶನ ನೀಡಿ ಎರಡು ವರ್ಷಗಳಾಗಿವೆ. ಆದರೂ ಕೂಡ ಅನುಷ್ಕಾ ಕ್ರೇಜ್ ಕಡಿಮೆಯಾಗಿಲ್ಲ. ಇವರ ಅಭಿಮಾನಿಗಳು ಕೂಡ ಇವರನ್ನು ಮರೆತಿಲ್ಲ. ಇದಕ್ಕೆ ಇವರ ಘಾಟಿ ಚಿತ್ರ ಮಾಡಿರುವ ವ್ಯಾಪಾರವೇ ಸಾಕ್ಷಿ.

ಹೌದು, ಅನುಷ್ಕಾ ಶೆಟ್ಟಿ ಅಭಿನಯದ 'ಘಾಟಿ' ಚಿತ್ರ ಈ ಜುಲೈ 11ರಂದು ಕೊನೆಗೂ ಬಿಡುಗಡೆಯಾಗಲಿದೆ.ಕ್ರಿಶ್ ಜಗರ್ಲಮುಡಿ ನಿರ್ದೇಶನದ ಈ ಚಿತ್ರದ ಮೇಲೆ ಅನುಷ್ಕಾ ಅವರ ಅಭಿಮಾನಿಗಳಿಗೆ ವಿಪರೀತ ನಿರೀಕ್ಷೆಗಳಿವೆ. ಹೀಗಿರುವಾಗ ಇದೀಗ ಬಿಡುಗಡೆಗೆ ಮುನ್ನವೇ ಈ ಚಿತ್ರ ಒಂದಲ್ಲ, ಎರಡಲ್ಲ, ಬರೋಬ್ಬರಿ 36 ಕೋಟಿಯ ವ್ಯಾಪಾರವನ್ನು ಮಾಡಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಘಾಟಿ ಚಿತ್ರ ಬರೆದಿದೆ.

'ಡೆಕ್ಕನ್ ಕ್ರೋನಿಕಲ್' ವರದಿಯ ಪ್ರಕಾರ ನಾನ್ ಥಿಯೇಟರಿಕಲ್ ಹಕ್ಕುಗಳು ಅಂದರೆ ಚಿತ್ರದ ಓಟಿಟಿ, ಸ್ಯಾಟಲೈಟ್ ಹಕ್ಕು ಮತ್ತು ಆಡಿಯೋ ಹಕ್ಕು ಈ ಮೂರು ಹಕ್ಕಗಳು 36 ಕೋಟಿಗೆ ಬಿಕರಿಯಾಗಿವೆ. ಮಹಿಳಾ ಪ್ರಧಾನ ಚಿತ್ರದ ಹಕ್ಕುಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು. ಹೀಗಾಗಿಯೇ ಅನುಷ್ಕಾ ಅಭಿಮಾನಿಗಳು ಸದ್ಯ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ಧಾರೆ.

ಇನ್ನು ಘಾಟಿ ಚಿತ್ರಕ್ಕೆ ಯುವಿ ಕ್ರಿಯೇಷನ್ಸ್ ಹಾಗೂ ಫಸ್ಟ್​ ಫ್ರೇಮ್ ಎಂಟರ್​ಟೇನ್​ಮೆಂಟ್ ಹೂಡಿರುವುದು 46 ಕೋಟಿ ಮಾತ್ರ. ಈ 46 ಕೋಟಿಯಲ್ಲಿ ಈಗಾಗಲೇ 36 ಕೋಟಿ ಹಕ್ಕುಗಳ ಮಾರಾಟದ ಮೂಲಕ ಮರಳಿ ನಿರ್ಮಾಪಕರಿಗೆ ಬಂದಿದೆ. ಇದಲ್ಲದೇ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣೆ ಹಕ್ಕುಗಳನ್ನು ನಿರ್ಮಾಪಕರು 12 ಕೋಟಿಗೆ ಮಾರಿದ್ದಾರೆ ಎಂದು ಕೂಡ 'ಡೆಕ್ಕನ್ ಕ್ರೋನಿಕಲ್' ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ನಿರ್ಮಾಪಕರು ಈ ಮೂಲಕ ಈಗಾಗಲೇ ಸೇಫ್ ಝೋನ್‌ನಲ್ಲಿದ್ದಾರೆ ಎಂದು ಕೂಡ ತಿಳಿಸಿದೆ. ಈ ಹಿನ್ನೆಲೆ ಚಿತ್ರ ಬಿಡುಗಡೆಯಾದ ನಂತರ ಬರುವ ಹಣವೆಲ್ಲವೂ ನಿರ್ಮಾಪಕರಿಗೆ ಲಾಭ ನೀಡಿದಂತೆ.

ಅಂದ್ಹಾಗೇ ಅಮೆಜಾನ್ ಪ್ರೈಂ ಘಾಟಿ ಚಿತ್ರದ ಓಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ. ಹಾಡುಗಳು ಆದಿತ್ಯ ಸಂಸ್ಥೆಯ ಪಾಲಾಗಿವೆ. ಚಿತ್ರದ ಬಿಡುಗಡೆಯ ನಾಲ್ಕು ವಾರಗಳ ನಂತರ ಚಿತ್ರ ಅಮೆಜಾನ್ ನಲ್ಲಿ ಪ್ರಸಾರವಾಗುವ ನಿರೀಕ್ಷೆ ಇದೆ.

ಇನ್ನುಳಿದಂತೆ ವಿಕ್ರಂ ಪ್ರಭು ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿಗೆ ಜೋಡಿಯಾಗಿದ್ದಾರೆ. ರಮ್ಯಾ ಕೃಷ್ಣ.. ಜಗಪತಿ ಬಾಬು.. ಚೈತನ್ಯ ರಾವ್..ಜಾನ್ ವಿಜಯ್ ಸೇರಿ ಅನೇಕರು ಈ ಚಿತ್ರದಲ್ಲಿದ್ದಾರೆ. ನಾಗವೆಲ್ಲಿ ವಿದ್ಯಾ ಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿತ್ರ ಬಿಡುಗಡೆಯಾಗುವ ಮುನ್ನ 36 + 12=48 ಕೋಟಿಯನ್ನು ಗಳಿಸಿರುವ ಘಾಟಿ ಬಿಡುಗಡೆಯ ನಂತರ ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Find out why Anushka Shetty's 'Ghaati' is generating buzz! The film has secured a staggering ₹36 crore for its OTT rights, marking a huge win for the team.
Read more about: anushka shetty ott tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X