ಅನುಷ್ಕಾ ಶೆಟ್ಟಿ ಹೊಸ ತೆಲುಗು ಸಿನಿಮಾ ಟೈಟಲ್ ಘೋಷಣೆ; ಓಟಿಟಿ ಪಾರ್ಟ್ನರ್ ಕೂಡ ಫಿಕ್ಸ್

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಬಳಿಕ ಅನುಷ್ಕಾ ಶೆಟ್ಟಿ ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮಲಯಾಳಂ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಮತ್ತೊಂದು ಕಡೆ ಕ್ರಿಶ್ ನಿರ್ದೇಶನದಲ್ಲಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಒಡಿಶಾದಲ್ಲಿ ಚಿತ್ರದ ಚಿತ್ರೀಕರಣ ಗುಟ್ಟಾಗಿ ನಡೆದಿತ್ತು. ಸದ್ಯ ಆ ಚಿತ್ರದ ಟೈಟಲ್ ರಿವೀಲ್ ಆಗಿದೆ.

14 ವರ್ಷಗಳ ಹಿಂದೆ ಬಂದಿದ್ದ 'ವೇದಂ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಕ್ರಿಶ್ ಆಕ್ಷನ್ ಕಟ್ ಹೇಳಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಹೊಸದೊಂದು ಸಿನಿಮಾ ಮೂಡಿ ಬರುತ್ತಿದೆ. ರಮ್ಯಾಕೃಷ್ಣ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಮಹಿಳಾ ಪ್ರಧಾನ ಸಿನಿಮಾ ನಿರ್ಮಾಣವಾಗುತ್ತಿದೆ.

Anushka shetty s Next Telugu Movie Title and OTT partner Confirmed

ಈಗಾಗಲೇ ಒಡಿಶಾದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಮಾಡಿ ಬಂದಿದೆ ಚಿತ್ರತಂಡ. 10 ದಿನಗಳ ಕಾಲ ಅಲ್ಲಿ ಬೀಡು ಬಿಟ್ಟಿದ್ದ ತಂಡ ಚಿತ್ರದ ಬಹಳ ಮುಖ್ಯವಾದ ದೃಶ್ಯಗಳನ್ನು ಸೆರೆಹಿಡಿದಿದೆ. ಆದರೆ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ಸೆಟ್‌ನಿಂದ ಸಣ್ಣ ಫೋಟೊ ಕೂಡ ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಬಿಗಿ ಪೊಲೀಸ್ ಭದ್ರತೆಯೊಂದಿಗೆ ಚಿತ್ರೀಕರಣ ನಡೆದಿತ್ತು.

ಒಡಿಶಾದಲ್ಲೂ ಸ್ವೀಟಿಗೆ ಕ್ರೇಜ್ ಇದ್ದು ಚಿತ್ರತಂಡ ಉಳಿದುಕೊಂಡಿದ್ದ ಹೋಟೆಲ್‌ ಬಳಿ ಅಭಿಮಾನಿಗಳು ಜಮಾಯಿದ್ದರು. ಆಕೆಯನ್ನು ನೋಡಲು ಮುಗಿಬಿದ್ದಿದ್ದರು. ಅಂದಹಾಗೆ ಇದೀಗ ಆ ಚಿತ್ರದ ಟೈಟಲ್ ರಿವೀಲ್ ಆಗಿದೆ. 'ಘಾಟಿ' ಎನ್ನುವ ಟೈಟಲ್ ಫೈನಲ್ ಮಾಡಲಾಗಿದೆ. ಅಷ್ಟೇ ಅಲ್ಲ ಪೋಸ್ಟ್ ಥ್ರಿಯೇಟ್ರಿಕಲ್ ಓಟಿಟಿ ಪಾರ್ಟ್ನರ್ ಕೂಡ ಫಿಕ್ಸ್ ಆಗಿದ್ದಾರೆ.

Anushka shetty s Next Telugu Movie Title and OTT partner Confirmed

ಅಮೇಜಾನ್ ಪ್ರೈಂ ಸಂಸ್ಥೆ ಮುಂದಿನ 2 ವರ್ಷಗಳಲ್ಲಿ ಸ್ಟ್ರೀಮಿಂಗ್ ಮಾಡುವ ಸಿನಿಮಾ ಹಾಗೂ ವೆಬ್‌ ಸೀರಿಸ್ ಲಿಸ್ಟ್ ಬಿಡುಗಡೆ ಮಾಡಿದೆ. ಮುಂಬೈನಲ್ಲಿ ದೊಡ್ಡ ಈವೆಂಟ್ ನಡೆಸಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಆ ಲಿಸ್ಟ್‌ನಲ್ಲಿ ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾ ಕೂಡ ಇದೆ. ಇನ್ನು ಯುವಿ ಕ್ರಿಯೇಷನ್ಸ್ ಜೊತೆಗೆ ಫಸ್ಟ್ ಫ್ರೇಮ್ಸ್ ಎಂಟರ್‌ಟ್ರೈನ್‌ಮೆಂಟ್ಸ್ ಸಂಸ್ಥೆ ಕೂಡ ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಿದೆ.

'ಘಾಟಿ' ಟೈಟಲ್ ಸಮೇತ ನಾಯಕಿ ತಲೆಗೆ ಸೆರೆಗು ಸುತ್ತಿಕೊಂಡು ಹೊರಟ ಪೋಸ್ಟರ್‌ ರಿಲೀಸ್ ಆಗಿದೆ. ಚಿಂತಕಿಂಡಿ ಶ್ರೀನಿವಾಸ್ ರಾವ್, ಕ್ರಿಶ್ ಹಾಗೂ ಸಾಯಿಮಾಧವ ಬುರ್ರಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ದೊಡ್ಡ ಕನಸ್ಸಿನೊಂದಿಗೆ ಉದ್ದಿಮೆ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಒಬ್ಬ ಮಹಿಳೆಯನ್ನು ಕೆಲವರು ತುಳಿಯುವ ಪ್ರಯತ್ನ ಮಾಡುತ್ತಾರೆ. ಆಕೆ ಅವರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ.

'ಬಾಹುಬಲಿ' ಸರಣಿ ಬಳಿ ಅನುಷ್ಕಾ ಶೆಟ್ಟಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ನಾಯಕರ ಜೊತೆ ಮರ ಸುತ್ತುವ ಪಾತ್ರಗಳನ್ನು ಬಿಟ್ಟಿದ್ದಾರೆ. 'ಘಾಟಿ' ಚಿತ್ರದಲ್ಲಿ ಕೂಡ ಪವರ್‌ಫುಲ್ ಮಹಿಳೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಆಂಧ್ರ ಮತ್ತು ಒಡಿಶಾ ಗಡಿಯಲ್ಲಿ 'ಘಾಟಿ' ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಉತ್ತರಾಂಧ್ರ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗಲಿದ್ದು ಅದಕ್ಕೆ ತಕ್ಕ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇನ್ನು ಸ್ವೀಟಿ ದೇಹ ತೂಕ ಹೆಚ್ಚಿಸಿಕೊಂಡು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಆಕೆ ತೂಕ ಇಳಿಸಿಕೊಂಡಿದ್ದಾರೆ. 'ಕಥನಾರ್' ಶೂಟಿಂಗ್ ಸೆಟ್‌ನಲ್ಲಿ ಆಕೆಯನ್ನು ನೋಡಿದಾಗ ತೆಳ್ಳಗಾಗಿರುವುದು ಗೊತ್ತಾಗಿತ್ತು. ಮುಂದೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸುವ ಸುಳಿವು ಸಿಗುತ್ತಿದೆ.

More from Filmibeat

English summary
Anushka shetty starrer new film title fixed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X