ಅಗ್ನಿ ಅವಘಡದಲ್ಲಿ ಪವನ್ ಮಗನಿಗೆ ಗಾಯ; ಎಮರ್ಜೆನ್ಸಿ ವಾರ್ಡ್‌ನಿಂದ ಹೊರಕ್ಕೆ

ಸಿಂಗಾಪುರದ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಎಪಿ ಡಿಸಿಎಂ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಗಾಯಗೊಂಡಿದ್ದನು. ಕೈ, ಕಾಲಿಗೆ ಸುಟ್ಟ ಗಾಯಗಳಾಗಿತ್ತು. ಸಿಂಗಾಪುರಕ್ಕೆ ತೆರಳಿ ಪವನ್ ಆಸ್ಪತ್ರೆಗೆ ಭೇಟಿ ನೀಡಿ ಮಗನ ಆರೋಗ್ಯದ ಪರಿಶೀಲನೆ ನಡೆಸಿದ್ದಾರೆ. ದೊಡ್ಡ ಮಗ ಅಕಿರಾ ಹುಟ್ಟುಹಬ್ಬದ ದಿನವೇ ಕಿರಿಮಗನಿಗೆ ಈ ರೀತಿ ಆಗಿದ್ದು ನೋವು ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸಿಂಗಾಪುರಕ್ಕೆ ಹೊರಡುವ ಮುನ್ನ ಪವನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ನಿನ್ನೆ(ಏಪ್ರಿಲ್ 8) ವಿಶಾಖಪಟ್ಟಣಂ ಜಿಲ್ಲೆಗೆ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದ ಪವನ್ ಕಲ್ಯಾಣ್ ಹೈದರಾಬಾದ್ ತಲುಪಿದ್ದಾರೆ. ಈ ವೇಳೆ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಎಪಿ ಡಿಸಿಎಂ ಅರಕು ಪ್ರವಾಸದಲ್ಲಿದ್ದಾಗ ನನಗೆ ಮಡದಿ ಕರೆ ಮಾಡಿ ವಿಷಯ ತಿಳಿಸಿದರು. ಆ ಸಮಯದಲ್ಲಿ ಅವಘಡದ ತೀವ್ರತೆ ತನಗೆ ತಿಳಿದಿರಲಿಲ್ಲ. ಮಾರ್ಕ್ ಶಂಕರ್ ಅವರ ಕಾಲುಗಳು ಮತ್ತು ತೋಳುಗಳಿಗೆ ಗಾಯಗಳಾಗಿವೆ. ಮಾರ್ಕ್ ಶ್ವಾಸಕೋಶದಲ್ಲಿ ಹೊಗೆ ಸೇರಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. 30 ಮಕ್ಕಳು ಬೇಸಿಗೆ ಶಿಬಿರದಲ್ಲಿದ್ದಾಗ ಅಪಘಾತ ಸಂಭವಿಸಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

AP DCM Pawan Kalyan First Reaction on son mark shankar injured in singapore

ವಿಷಯ ತಿಳಿದ ತಕ್ಷಣ ಪ್ರಧಾನಿ ಮೋದಿ ಕರೆ ಮಾಡಿದ್ದುರು. ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನರ್‌ಗೆ ತಿಳಿಸಿದ್ದಾರೆ. ಅವರಿಗೆ ಧನ್ಯವಾದ. ಘಟನೆ ಬಗ್ಗೆ ಪ್ರತಿಕ್ರಿಯಿಸಿ ಮಾರ್ಕ್ ಶಂಕರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಆಂಧ್ರ ಸಿಎಂ ಚಂದ್ರಬಾಬು, ನಾರಾ ಲೋಕೇಶ್, ವೈಎಸ್ ಜಗನ್, ಕೆಟಿಆರ್ ಎಲ್ಲರಿಗೂ ನಾನು ಧನ್ಯವಾದ ಎಂದು ಪವನ್ ಮಾಧ್ಯಮಗಳಿಗೆ ಎದುರು ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಮಾತ್ರವಲ್ಲ ಸಹೋದರ ಚಿರಂಜೀವಿ ಕೂಡ ಮಾರ್ಕ್ ಶಂಕರ್ ಭೇಟಿಗೆ ಸಿಂಗಾಪುರಕ್ಕೆ ತೆರಳಿದ್ದಾರೆ. ಚಿರಂಜೀವಿ ಜೊತೆ ಪತ್ನಿ ಸುರೇಖಾ ಕೂಡ ಹೋಗಿದ್ದಾರೆ. ಮೆಗಾ ಫ್ಯಾಮಿಲಿ ಸದಸ್ಯರು ಒಬ್ಬೊಬ್ಬರಾಗಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ಮಾರ್ಕ್ ಶಂಕರ್ ಆರೋಗ್ಯದ ಸ್ಥಿತಿ ತಿಳಿದುಕೊಳ್ಳಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಅಲ್ಲು ಅರ್ಜುನ್ ಕೂಡ ಸಿಂಗಾಪುರ ಫ್ಲೈಟ್ ಏರುತ್ತಾರೆ ಎನ್ನಲಾಗ್ತಿದೆ.

ಪವನ್ ಕಲ್ಯಾಣ್ ಟೀಂನಿಂದ ಮಾರ್ಕ್ ಶಂಕರ್ ಹೆಲ್ತ್ ಅಪ್‌ಡೇಟ್ ಸಿಕ್ಕಿದೆ. ಸಿಂಗಾಪುರದ ಆಸ್ಪತ್ರೆಯಲ್ಲಿ ಮಾರ್ಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರ್ತಿದೆ. ಯಾವುದೇ ಆತಂಕಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಇನ್ನು ಬಾಲಕ ಆಕ್ಸಿಜನ್ ಮಾಸ್ಕ್ ಧರಿಸಿ ಸೋಫಾ ಮೇಲೆ ಕುಳಿತಿರುವ ಫೋಟೊವೊಂದು ಸಖತ್ ವೈರಲ್ ಆಗುತ್ತಿದೆ.

AP DCM Pawan Kalyan First Reaction on son mark shankar injured in singapore

ಪವನ್ 3ನೇ ಪತ್ನಿ ಅನ್ನಾ ಸಿಂಗಾಪುರದಲ್ಲಿ ಮಗ ಹಾಗೂ ಮಗಳ ಜೊತೆ ವಾಸ್ತವ್ಯ ಹೂಡಿದ್ದಾರೆ. ಆಗಾಗ್ಗೆ ಭಾರತಕ್ಕೆ ಬಂದು ಹೋಗುತ್ತಿರುತ್ತಾರೆ. ಅನ್ನಾ ಸ್ನಾತಕೋತ್ತರ ಪದವಿ ಪಡೆಯಲು ವ್ಯಾಸಂಗ ಮಾಡುತ್ತಿದ್ಧಾರೆ. ಮಕ್ಕಳನ್ನು ಅಲ್ಲೇ ಓದಿಸುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿದ್ದು ಆಕೆಯ ಒಡೆತನದ ಭಾರೀ ಮೊತ್ತದ ಆಸ್ತಿ ಸಿಂಗಾಪುರದಲ್ಲಿದೆ ಎನ್ನುವ ಊಹಾಪೋಹಗಳಿವೆ. ಅದೇ ಕಾರಣಕ್ಕೆ ಪವನ್ 3ನೇ ಪತ್ನಿ ಹಾಗೂ ಮಕ್ಕಳು ಸಿಂಗಾಪುರದಲ್ಲಿದ್ದಾರೆ ಎಂದು ಹೇಳಲಾಗ್ತಿದೆ.

ರಾಮ್‌ಚರಣ್ ಕೂಡ ಸಿಂಗಾಪುರಕ್ಕೆ ತೆರಳಿ ಮಾರ್ಕ್ ಶಂಕರ್ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಪವನ್ ಕಲ್ಯಾಣ್ ಕಲ್ಯಾಣ್ ಮಗನಿಗೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ.

More from Filmibeat

English summary
Pawan Kalyan reacts on health update on son Mark Shankar injured in Singapore school fire;
Read more about: pawan kalyan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X