Salaar- Dunki: ಪ್ರಭಾಸ್- ಶಾರುಖ್ ಚಿತ್ರಗಳಿಗೆ ಹಾಲಿವುಡ್ ಸೂಪರ್ ಹೀರೋ ಶಾಕ್: ಮತ್ತೆ 'ಸಲಾರ್' ಪೋಸ್ಟ್‌ಪೋನ್?

ಈ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ತೆಲುಗಿನ 'ಸಲಾರ್' ಹಾಗೂ ಬಾಲಿವುಡ್‌ನ 'ಡಂಕಿ' ಚಿತ್ರಗಳು ತೆರೆಗಪ್ಪಳಿಸುತ್ತಿವೆ. ಒಂದು ದಿನದ ಅಂತರದಲ್ಲಿ ಬರುತ್ತಿರುವ ಚಿತ್ರಗಳಿಗೆ ಇದೀಗ ಮತ್ತೊಂದು ಸಿನಿಮಾ ಪೈಪೋಟಿ ಕೊಡೋಕೆ ಬರ್ತಿದೆ. ಈ ಸುದ್ದಿ ಸಹಜವಾಗಿಯೇ ಪ್ರಭಾಸ್, ಕಿಂಗ್ ಖಾನ್ ಅಭಿಮಾನಿಗಳಿಗೆ ಆತಂಕ ತಂದಿದೆ.

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಪದೇ ಪದೆ ಬದಲಾಗುತ್ತಲೇ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 28ಕ್ಕೆ 'ಸಲಾರ್' ಪ್ರಭಾಸ್ ಆರ್ಭಟ ಶುರುವಾಗಬೇಕಿತ್ತು. ಆದರೆ ಗ್ರಾಫಿಕ್ಸ್ ಕೆಲಸಗಳು ತಡವಾದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಅದೇ ದಿನ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗಬೇಕಿತ್ತು. ರಾಜ್‌ಕುಮಾರ್ ಹಿರಾನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

Aquaman will release for Christmas, Salaar and Dunki will be effected

ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ದೇಶ ವಿದೇಶಗಳಲ್ಲಿ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತದೆ. ದೊಡ್ಡ ಸಿನಿಮಾಗಳನ್ನು ಲಾಂಗ್ ವೀಕೆಂಡ್‌ನಲ್ಲಿ ರಿಲೀಸ್ ಮಾಡಿದರೆ ಬಂಡವಾಳದ ಜೊತೆ ಲಾಭವನ್ನು ನಿರೀಕ್ಷಿಸಬಹುದು. ಅದೇ ಕಾರಣಕ್ಕೆ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳನ್ನು ಒಟ್ಟಿಗೆ ತೆರೆಗೆ ತರುವ ಪ್ರಯತ್ನ ನಡೀತಿದೆ. ಬಹಳ ಹಿಂದೆಯೇ 'ಡಂಕಿ' ರಿಲೀಸ್ ಡೇಟ್ ಘೋಷಣೆ ಆಗಿತ್ತು. 'ಸಲಾರ್' ಸಿನಿಮಾ ಅದೇ ಸಮಯಕ್ಕೆ ಬರ್ತಿರೋದು ಎಲ್ಲಾ ಸಮಸ್ಯೆಗೆ ಕಾರಣವಾಗಿದೆ.

ಇದೀಗ 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ಜೊತೆ ಹಾಲಿವುಡ್‌ 'ಅಕ್ವಾಮನ್ ಅಂಡ್ ದಿ ಲಾಸ್ಟ್ ಕಿಂಗ್‌ಡಮ್' ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಇದು ಸಹಜವಾಗಿಯೇ ಪ್ರಭಾಸ್- ಶಾರುಖ್ ಸಿನಿಮಾಗಳಿಗೆ ಹಿನ್ನೆಡೆ ತರುವ ಸಾಧ್ಯತೆಯಿದೆ. ದೊಡ್ಡ ಸಿನಿಮಾಗಳನ್ನು ದೊಡ್ಡ ಮಟ್ಟದಲ್ಲೇ ರಿಲೀಸ್ ಮಾಡಬೇಕು. ಅದಕ್ಕಾಗಿ ಹೆಚ್ಚು ಸ್ಕ್ರೀನ್ಸ್ ಅವಶ್ಯಕತೆ ಇರುತ್ತದೆ. 'ಅಕ್ವಾಮನ್' ಸಿನಿಮಾ ಕೂಡ ಬರ್ತಿರೋದು ಹೊಸ ಪಜೀತಿ ತಂದೊಡ್ಡಿದೆ. ಓವರ್‌ಸೀಸ್ ಮಾತ್ರವಲ್ಲ ದೇಶದಲ್ಲೂ 'ಅಕ್ವಾಮನ್' ಚಿತ್ರಕ್ಕೆ ಹೆಚ್ಚು ಶೋಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ಶಾರುಖ್, ಪ್ರಭಾಸ್ ಸಿನಿಮಾಗಳಿಗೆ ಹಿನ್ನಡೆಯಾಗಲಿದೆ.

ಕಳೆದ ವರ್ಷ ಸಂಕ್ರಾಂತಿಗೆ 'ಅಕ್ವಾಮನ್ ಅಂಡ್ ದಿ ಲಾಸ್ಟ್ ಕಿಂಗ್‌ಡಮ್' ಸಿನಿಮಾ ತೆರೆಗೆ ಬರಬೇಕಿತ್ತು. ಬಳಿಕ ಈ ವರ್ಷ ಮಾರ್ಚ್ 13ಕ್ಕೆ ಪೋಸ್ಟ್ ಪೋನ್ ಆಗಿತ್ತು. ಬಳಿಕ ಡಿಸೆಂಬರ್ 25ಕ್ಕೆ ರಿಲೀಸ್ ಮುಂದೂಡಲಾಗಿತ್ತು. ಬಳಿಕ ಡಿಸೆಂಬರ್ 20ರಂದು ರಿಲೀಸ್ ಎಂದಿದ್ದರು. ಇದೀಗ ದಿಡೀರನೆ ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ. 'ಸಲಾರ್' ಡಿಸೆಂಬರ್ 22ಕ್ಕೆ ರಿಲೀಸ್ ಎನ್ನುತ್ತಿದ್ದಂತೆ ಒಂದು ದಿನ ಮೊದ್ಲೆ 'ಡಂಕಿ' ರಿಲೀಸ್‌ಗೆ ಚಿತ್ರತಂಡ ಮುಂದಾಗಿತ್ತು. ಅಲ್ಲಿಗೆ ಕೊಂಚಮಟ್ಟಿಗೆ ಸಮಸ್ಯೆ ಕಮ್ಮಿ ಆಗುತ್ತೆ ಎಂದುಕೊಂಡಿದ್ದರೆ ಈಗ 'ಅಕ್ವಾಮನ್' ಪೈಪೋಟಿ ಎದುರಾಗಿದೆ.

'ಅಕ್ವಾಮನ್ ಅಂಡ್ ದಿ ಲಾಸ್ಟ್ ಕಿಂಗ್‌ಡಮ್' ಹಾಲಿವುಡ್ ಸೂಪರ್ ಹೀರೊ ಚಿತ್ರದಲ್ಲಿ ಜೇಸನ್ ಮೊಮೊವಾ ಹಾಗೂ ಪ್ಯಾಟ್ರಿಕ್ ವಿಲ್ಸನ್ ನಟಿಸಿದ್ದಾರೆ. ಜೇಮ್ಸ್ ವಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಅಕ್ವಾಮನ್' ಏಕಕಾಲಕ್ಕೆ ದೇಶ ವಿದೇಶದಲ್ಲಿ ದೊಡ್ಡಮಟ್ಟದಲ್ಲಿ ರಿಲೀಸ್ ಆಗುವುದರಿಂದ 'ಸಲಾರ್', 'ಡಂಕಿ' ಸಿನಿಮಾ ಸಂಕಷ್ಟ ತಪ್ಪಿದ್ದಲ್ಲ ಎನ್ನುವುದು ಕೆಲವರ ವಾದ. ಇದೆಲ್ಲದರ ನಡುವೆ 'ಸಲಾರ್' ಚಿತ್ರವನ್ನು ಸಂಕ್ರಾಂತಿಗೆ ಪೋಸ್ಟ್‌ಪೋನ್ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. KGF ಸರಣಿಗೆ ಕೆಲಸ ಮಾಡಿದ ತಂಡವೇ ಈ ಚಿತ್ರ ಕಟ್ಟಿಕೊಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಂಗ್ ರೆಬಲ್ ಸ್ಟಾರ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ.

More from Filmibeat

English summary
Will Aquaman 2 release have an affect on Salaar and Dunki screens and shows sharing?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X