ಆ ಸಿನಿಮಾದಿಂದ ನನ್ನ ಜೀವನವೇ ಹಾಳಾಗಿ ಹೋಯಿತು ಎಂದ 'ಆ ದಿನಗಳು' ಅರ್ಚನಾ.!

''ಅವಕಾಶ'' ಬಂದಾಗ ''ಆಕಾಶ'' ನೋಡಬಾರದು. ಅವಕಾಶ ''ಕೈ '' ತಪ್ಪಿದಾಗ ''ಅಡ್ಡ ಗೋಡೆ''ಯ ಮೇಲೆ ''ದೀಪ'' ಇಟ್ಟಂತೆ ಮಾತನಾಡಬಾರದು. ಯಾಕೆಂದರೆ ''ಬಣ್ಣ''ದ ಪ್ರಪಂಚದಲ್ಲಿ ಬಹುತೇಕ ''ಕೇಸ್'' ಗಳಲ್ಲಿ ಎಲ್ಲ ಅನಾಹುತಗಳು ''ಸ್ವಯಂ ಕೃತ ಅಪರಾಧ''ಗಳಿಂದನೇ ಆಗಿರ್ತಾವೆ. ಹೀಗಾಗಿ ಯಾರನ್ನೂ ''ದೂಷಿಸಿ'' ಉಪಯೋಗ ಇಲ್ಲ. ಒಂದು ವೇಳೆ ''ದೋಷಾರೋಪಣೆ ಪಟ್ಟಿ''ಯನ್ನು ಸಲ್ಲಿಸಿದರೂ ಕಾಲ ಮಿಂಚಿ ಹೋಗಿರುತ್ತೆ. ಇದೆಲ್ಲದಕ್ಕೂ ತಾಜಾ ನಿದರ್ಶನ ''ಅರ್ಚನಾ ವೇದ''.

ಹೌದು.. ''ಆ ದಿನಗಳು'' ನೋಡಿದವರಿಗೆ ''ಅರ್ಚನಾ ವೇದ'' ಅಲಿಯಾಸ್ ''ಅರ್ಚನಾ ಶಾಸ್ತ್ರೀ''ಯ ಪರಿಚಯ ಇದ್ದೇ ಇರುತ್ತೆ. ತನ್ನ ''ಅಭಿನಯ'' ಹಾಗೂ ''ಅಂದ ಚೆಂದ''ದಿಂದ ಆ ಕಾಲದಲ್ಲಿ ಕನ್ನಡಿಗರ ಹೃದಯ ಗೆದ್ದಿದ್ದ ''ಅರ್ಚನಾ'' ಹಾಗೇ ನೋಡಿದರೆ ''ಕನ್ನಡ''ದವರಲ್ಲ. ಬದಲಿಗೆ ''ತೆಲುಗು'' ಹುಡುಗಿ.

Archana said that my career ended with this film

''ಆ ದಿನಗಳು'' ಚಿತ್ರಕ್ಕೂ ಮುನ್ನ ಒಂದು ಡಜನ್ ಸಿನಿಮಾದಲ್ಲಿ ''ಅರ್ಚನಾ'' ನಟಿಸಿದ್ದರು. ಆದರೆ ಒಂದು ಡಜನ್ ಸಿನಿಮಾಗಳಲ್ಲಿ ಇವರಿಗೆ ''ಹೆಸರು'' ತಂದುಕೊಟ್ಟಿದ್ದು ಮಾತ್ರ ''ನುವ್ವೊಸ್ತಾನಂಟೆ ನೇನೊದ್ದಂಟಾನಾ'' ಎಂಬ ಸಿನಿಮಾ. ಹಾಗಂಥ ಈ ಸಿನಿಮಾದ ''ನಾಯಕಿ'' ಇವರಲ್ಲ. ಬದಲಿಗೆ ನಾಯಕಿ ''ತ್ರಿಶಾ'' ಅವರ ''ಸ್ನೇಹಿತೆ''ಯ ಪಾತ್ರವನ್ನು ನಿರ್ವಹಿಸಿದ್ದವರು ಇವರು.

''ನುವ್ವೊಸ್ತಾನಂಟೆ ನೇನೊದ್ದಂಟಾನಾ''ದಲ್ಲಿ ಪಾತ್ರ ''ಸೈಡ್ ರೋಲ್'' ಆಗಿದ್ದರು, ಆ ''ಪಾತ್ರ''ದಿಂದ ಅರ್ಚನಾ ಟಾಲಿವುಡ್ ನ ''ಮೇನ್ ರೋಡ್'' ವರೆಗೆ ಬಂದಿದ್ದರು. ''ಮನಸು'' ಮಾಡಿದ್ದರೆ ''ಅರ್ಚನಾ'' ಖ್ಯಾತಿಯ ತುತ್ತ ತುದಿಗೆ ತಲುಪಬಹುದಿತ್ತು.‌ಆ ''ಅವಕಾಶ''ವೂ ಇತ್ತು. ಆದರೆ ಆ ಅವಕಾಶವನ್ನ ಅರ್ಚನಾ ''ಸದುಪಯೋಗ'' ಪಡಿಸಿಕೊಳ್ಳಲಿಲ್ಲ.

Archana said that my career ended with this film

ಇಂಥ ''ಅರ್ಚನಾ'' ''ನುವ್ವೊಸ್ತಾನಂಟೆ ನೇನೊದ್ದಂಟಾನಾ'' ಸಿನಿಮಾನೇ ನನ್ನ ''ವೃತ್ತಿ ಜೀವನ''ಕ್ಕೆ ಮುಳ್ಳಾಯಿತು ಎಂದು ಈಗ ಇನ್ನೊಮ್ಮೆ ಹೇಳಿದ್ದಾರೆ. ‌''ಪ್ರಭುದೇವ'' ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ‌ ನಟಿಸಿದ್ದೇ ನನ್ನ ಜೀವನದ ಬಹುದೊಡ್ಡ ''ಅಪರಾಧ'' ಎಂದು ಬಿಕ್ಕಿದ್ದಾರೆ

ಹೌದು, ಸಂದರ್ಶನವೊಂದರಲ್ಲಿ ಇತ್ತೀಚೆಗೆ ಮಾತನಾಡಿರುವ ''ಅರ್ಚನಾ'', ''ನುವ್ವೊಸ್ತಾನಂಟೆ ನೇನೊದ್ದಂಟಾನಾ'' ಚಿತ್ರದಿಂದ ನನ್ನ ''ವೃತ್ತಿ ಜೀವನ'' ''ಅಂತ್ಯ''ವಾಯಿತು ಅಂದಿದ್ದಾರೆ. ''ತ್ರಿಶಾ'' ಗೆಳತಿಯ ಪಾತ್ರವನ್ನ ನಿರ್ವಹಿಸಿದ್ದೇ ನನ್ನ ಜೀವನದ ಬಹುದೊಡ್ಡ ''ತಪ್ಪು'' ಅಂದಿದ್ದಾರೆ. ಇನ್ನೂ ಆ ಸಿನಿಮಾ ''ಬ್ಲಾಕ್ ಬಸ್ಟರ್'' ಸಿನಿಮಾ ಆಯಿತು, ನನಗೆ ಒಂದೊಳ್ಳೆಯ ''ಹೆಸರು'' ಕೂಡ ಬಂತು ಆದರೆ ಇದೇ ಸಿನಿಮಾದಿಂದ ಚಿತ್ರವೊಂದಕ್ಕೆ ''ನಾಯಕಿ''ಯಾಗುವ ''ಅವಕಾಶ'' ನನ್ನ ಕೈ ತಪ್ಪಿತು ಎಂದು ಅಲವತ್ತುಕೊಂಡಿದ್ದಾರೆ ''ಅರ್ಚನಾ''.

Archana said that my career ended with this film

ಇನ್ನೂ ಇದೇ ಸಮಯದಲ್ಲಿ ''ನುವ್ವೊಸ್ತಾನಂಟೆ ನೇನೊದ್ದಂಟಾನಾ'' ಚಿತ್ರಕ್ಕೆ ಚಿತ್ರಕಥೆಯನ್ನ ಬರೆಯುವುದರ ಜೊತೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದ ''ಎಂ.ಎಸ್.ರಾಜು'' ಮೇಲೆ ಕೂಡ ಆರೋಪ ಮಾಡಿರುವ ಅರ್ಚನಾ, ''ನುವ್ವೊಸ್ತಾನಂಟೆ ನೇನೊದ್ದಂಟಾನಾ'' ಚಿತ್ರದ ಸಮಯದಲ್ಲಿ ''ಎಂ.ಎಸ್ ರಾಜು'' ತಮ್ಮ ಮುಂದಿನ ಚಿತ್ರಕ್ಕೆ ನಿನ್ನನ್ನೇ ''ನಾಯಕಿ''ಯಾಗಿ ಆಯ್ಕೆ ಮಾಡುವ ''ಆಶ್ವಾಸನೆ'' ನೀಡಿದ್ದರು ಆದರೆ ಆ ನಂತರ ಅದು ಆಶ್ವಾಸನೆಯಾಗಿಯಷ್ಟೇ ಉಳಿಯಿತು ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೇ ಈ ''ಎಂ,ಎಸ್ ರಾಜು'' ಬೇರೆ ಯಾರು ಅಲ್ಲ ಬದಲಿಗೆ ''ಕನ್ನಡ''ದ ಬ್ಲಾಕ್ ಬಸ್ಟರ್ ಸಿನಿಮಾ ''ಮುಂಗಾರು ಮಳೆ''ಯನ್ನ ತೆಲುಗಿನಲ್ಲಿ ''ವಾನಾ'' ಹೆಸರಿನಲ್ಲಿ ರಿಮೇಕ್ ಮಾಡಿದವರು ಅನ್ನುವುದು ನಿಮಗೆ ಗೊತ್ತಿರಲಿ. 2008ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದಲ್ಲಿ ''ವಿನಯ್ ರೈ'' ಹಾಗೂ ''ಮೀರಾ ಚೋಪ್ರಾ'' ನಾಯಕ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದರು. ಇದೇ ಚಿತ್ರಕ್ಕೆ ''ನಾಯಕಿ'' ನೀನೆ ಎಂದು ''ಎಂ.ಎಸ್.ರಾಜು'' ''ಅರ್ಚನಾ'' ಗೆ ಹೇಳಿದ್ದರಾ ಗೊತ್ತಿಲ್ಲ.

Archana said that my career ended with this film

ಇದನ್ನ ಹೊರತು ಪಡಿಸಿದರೆ ''ರಾಜಮೌಳಿ'' ನಿರ್ದೇಶನದ ''ಮರ್ಯಾದ ರಾಮಣ್ಣ'' ಚಿತ್ರಕ್ಕೂ ನಾನೇ ನಾಯಕಿಯಾಗಬೇಕಿತ್ತು ಎಂದು ಏನೇನೋ ಬಡಬಡಿಸಿದ್ದಾರೆ ''ಅರ್ಚನಾ ಶಾಸ್ತ್ರೀ''. ಒಟ್ನಲ್ಲಿ ''ಆ ದಿನಗಳು'' ಚಿತ್ರದ ನಂತರ ''ಮಿಂಚು'', ''ಮೇಘವರ್ಷಿಣಿ'', ಮತ್ತು ಬಿ.ಎಂ. ಗಿರಿರಾಜ್ ನಿರ್ದೇಶನದ ''ಮೈತ್ರಿ'' ಸಿನಿಮಾಗಳಲ್ಲಿ ನಟಿಸಿದ್ದ ''ಅರ್ಚನಾ'', ಎಲ್ಲವೂ ''ಕಾಲ ಬುಡ''ಕ್ಕೆ ಬಂದು ಬೀಳುತ್ತಿದ್ದ ಸಮಯದಲ್ಲಿ ''ಹಿಂದಿ'' ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಬಯಕೆಯಿಂದ ''ಬಾಂಬೆ''ಗೆ ಹೋಗಿದ್ದರು. ಅವಕಾಶಕ್ಕಾಗಿ ಅಲೆದಾಡಿದ್ದರು.

ಆ ನಂತರ ''ಜಾಕಿಶ್ರಾಫ್'' ಜೊತೆ ಮೇಲಿಂದ ಮೇಲೆ ಕಾಣಿಸಿಕೊಂಡಿದ್ದರು. ಇದು ನೋಡುಗರಿಗೆ ಬೇರೆಯದ್ದೇ ರೀತಿಯ ಸಂದೇಶ ರವಾನಿಸಿತು. ಗಾಸಿಪ್ಪುಗಳಿಗೆ ಆಹಾರವಾಯಿತು. ''ಇಲ್ಲಿದ್ದ ಅವಕಾಶ''ಗಳನ್ನೂ ಬಿಟ್ಟು ''ಮುಂಬೈ''ಗೆ ಹೋದ ''ಅರ್ಚನಾ''ಗೆ ಅಲ್ಲೊಂದು ಇಲ್ಲೊಂದು ಅವಕಾಶ ಸಿಕ್ಕಿತು ಅನ್ನೋದನ್ನು ಬಿಟ್ಟರೆ ಮಿಕ್ಕಂತೆ ದಕ್ಕಿದ್ದು ಭರ್ತಿ ''ಅವಮಾನ''.

ಇಂಥ ''ಅರ್ಚನಾ'' ಇದೀಗ ತನ್ನ ಎಲ್ಲ ''ಸೋಲು''ಗಳಿಗೆ ''ನುವ್ವೊಸ್ತಾನಂಟೆ ನೇನೊದ್ದಂಟಾನಾ'' ಕಾರಣ ಅಂದಿದ್ದಾರೆ. ಈ ಮೂಲಕ ಹೊಸದೊಂದು ಚರ್ಚೆಗೆ ನಾಂದಿಯನ್ನೂ ಹಾಡಿದ್ದಾರೆ ''ಅರ್ಚನಾ''

More from Filmibeat

English summary
Aa Dinagalu fame actress Archana said that my career ended with this film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X