ನಾಗಚೈತನ್ಯ-ಶೋಭಿತಾ ಮದುವೆಗೆ ಭರ್ಜರಿ ತಯಾರಿ, ಎಲ್ಲಿ ಮತ್ತು ಯಾವಾಗ ನಡೆಯಲಿದೆ ಕಲ್ಯಾಣ..?

ಕೆಲವರು ಪ್ರೇಮ ಪಾಶದಲ್ಲಿ ಸಿಲುಕಿ ಕಾಯಾ, ವಾಚಾ, ಮನಸಾ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ, ಮದುವೆಯಾದ ನಂತರ ಪರಸ್ಪರ ಅಸಹನೆ ಮತ್ತು ಅನುಮಾನ ಬೆಳೆಸಿಕೊಳ್ಳುತ್ತಾರೆ. ಆ ನಂತರ ಇನ್ನೂ ಸಾಧ್ಯವೇ ಇಲ್ಲ ಎಂದು ವಿಚ್ಛೇದನ ಪಡೆಯುತ್ತಾರೆ. ಪ್ರೀತಿಸಿ ಮದುವೆಯಾದವರು, ಮದುವೆಯಾಗಲೆಂದೇ ಪ್ರೀತಿಸಿದವರು ಹೀಗೇ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸದ್ಯಕ್ಕೆ ಇಲ್ಲದಿದ್ದರೂ ನಾಗಚೈತನ್ಯ ಮನಸಾರೆ ಮೆಚ್ಚಿ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಅವರನ್ನು ಸಂಪೂರ್ಣವಾಗಿ ಮರೆತು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವರ್ಷದಲ್ಲಿಯೇ ಹಸೆಮಣೆ ಏರಲು ಸಿದ್ಧರಾಗಿದ್ದಾರೆ.

ಹೌದು, ಮೊನ್ನೆ .. ಮೊನ್ನೆಯಷ್ಟೇ .. ಉಂಗುರ ಬದಲಿಸಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಇದೇ ವರ್ಷ ಮದುವೆಯ ಬಂಧಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಹೈದ್ರಾಬಾದ್‌ನಲ್ಲಿ ಗುಲ್ಲಾಗಿದೆ. ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆಗೆ ಸಕಲ ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತು ಕೇಳೀ ಬರುತ್ತಿದೆ.

Are Naga Chaitanya and Sobhita planning a destination wedding Discover their wedding date

ಇನ್ನೂ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ತಮ್ಮ ಇಷ್ಟದ ಸ್ಥಳದಲ್ಲಿ, ದೇಶದಲ್ಲಿ ಮದುವೆಯಾಗುವ ಕಾಲ. ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ದೀಪಿಕಾ ಪಡುಕೋಣೆಯವರೆಗೆ, ಅನುಷ್ಕಾ ಶರ್ಮಾ ಅವರಿಂದ ಹಿಡಿದು ಪರಿಣಿತಿ ಚೋಪ್ರಾವರೆಗೆ ಅನೇಕರು ಈ ಪರಿಕಲ್ಪನೆಯಡಿಯಲ್ಲಿಯೇ ಮದುವೆಯಾಗಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ಕೂಡ ಈ ಸಾಲಿಗೆ ಸೇರಲಿದ್ದಾರೆ. ಡೆಸ್ಟಿನೇಶನ್ ವೆಡ್ಡಿಂಗ್ ಗೆ ಅಣಿಯಾಗಿದ್ದಾರೆ. ಹೈದ್ರಾಬಾದ್ ಅಥವಾ ರಾಜಸ್ಥಾನದಲ್ಲಿ ಮದುವೆಯ ಸ್ಥಳವನ್ನು ಹುಡುಕುತ್ತಿದ್ದಾರೆ ಎಂಬ ವರದಿಯನ್ನು ಕೂಡ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಭಾರತದಲ್ಲಿ ಸಾಧ್ಯವಾಗದೇ ಇದ್ದರೆ, ವಿದೇಶದಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂದು ಮತ್ತೂ ಕೆಲವು ವೆಬ್ ಸೈಟ್‌ಗಳು ವರದಿ ಮಾಡಿವೆ.

ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಹೊಸ ಬದುಕಿಗೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಇನ್ನೂ ನಾಗಚೈತನ್ಯ ಮತ್ತು ಶೋಭಿತಾ ದಾಂಪತ್ಯ ವಿಚಾರದಲ್ಲಿ ಈ ಹಿಂದೆ ಉತ್ತರ ಭಾರತದ ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಕೂಡ ಭವಿಷ್ಯ ನುಡಿದಿದ್ದಾರೆ. 2025ರ ಮೊದಲಾರ್ಧದಲ್ಲಿ ಮದುವೆ ನಡೆದರೆ ಇಬ್ಬರು ಆದರ್ಶ ಸತಿ-ಪತಿಗಳಾಗಿ ಬದುಕುತ್ತಾರೆ, ಖುಷಿ ಖುಷಿಯಾಗಿರುತ್ತಾರೆ ಎಂದು ಹಿಂದೆ ಹೇಳಿರುವ ಹಿನ್ನೆಲೆ ಮಾರ್ಚ್‌ನಲ್ಲಿಯೇ ಮದುವೆ ಇಬ್ಬರ ಮದುವೆ ಮಾಡಲು ನಾಗಾರ್ಜುನ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕೂಡ ಸದ್ಯಕ್ಕೆ ಕೇಳಿ ಬರುತ್ತಿದೆ. '

are-naga-chaitanya-and-sobhita-planning-a-destination-wedding-discover-their-wedding-date

ಅಂದ್ಹಾಗೇ ನಾಗಚೈತನ್ಯ ಅವರಿಗೆ ಈಗ 37 ವರ್ಷವಾದರೆ, ಶೋಭಿತಾ ಅವರಿಗೆ ಈಗ 32 ವರ್ಷ. ಇನ್ನೂ.. ಇಬ್ಬರ ಕೈಯಲ್ಲಿ ಸದ್ಯಕ್ಕೆ ಅನೇಕ ಸಿನಿಮಾಗಳಿವೆ. ಅದರಲ್ಲಿಯೂ ಶೋಭಿತಾ ತಮ್ಮ ಕೆಲಸದ ಕಡೆ ತುಸು ಹೆಚ್ಚೇ ಗಮನ ಕೊಡುತ್ತಾ ಬಂದಿದ್ದಾರೆ. ಹೀಗಾಗಿ ಇಬ್ಬರು ಈಗಲೇ ಮದುವೆಯಾಗಲ್ಲ, ಚಿತ್ರರಂಗದ ಕೆಲಸಗಳನ್ನು ಮುಗಿಸಿಕೊಂಡು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಮುಂದಿನ ವರ್ಷದ ಅಂತ್ಯದವರೆಗೆ ಇಬ್ಬರು ಮದುವೆಯಾಗಬಹುದು ಎಂಬ ಮಾತು ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X