For Quick Alerts
  ALLOW NOTIFICATIONS  
  For Daily Alerts

  'ಅರ್ಜುನ್ ರೆಡ್ಡಿ' ನಟಿ ಶಾಲಿನಿ ಪಾಂಡೆ ವಿರುದ್ಧ ಕ್ರಿಮಿನಲ್ ಕೇಸ್

  |

  ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ' ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಈ ಸಿನಿಮಾ ಬಳಿಕ ದೇವರಕೊಂಡ ಮತ್ತು ಶಾಲಿನಿ ಪಾಂಡೆ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದರು.

  ನಟಿ ಶಾಲಿನಿ ಪಾಂಡೆಗೆ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದಲೂ ಆಫರ್ ಬರಲು ಶುರುವಾಯ್ತು. ಅದೃಷ್ಟ ಎಂಬಂತೆ ರಣ್ವೀರ್ ಸಿಂಗ್ ನಟನೆಯ ಸಿನಿಮಾವೊಂದರಲ್ಲಿ ಶಾಲಿನಿ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.

  ಬಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ 'ಅರ್ಜುನ್ ರೆಡ್ಡಿ' ನಟಿ ಶಾಲಿನಿಬಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ 'ಅರ್ಜುನ್ ರೆಡ್ಡಿ' ನಟಿ ಶಾಲಿನಿ

  ಹೀಗೆ, ಸಕ್ಸಸ್ ಹುಡುಕಿ ಹೋದ ನಟಿಯ ವಿರುದ್ಧ ಈಗ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂಬ ವಿಚಾರ ಬಹಿರಂಗವಾಗಿದೆ. ಅಷ್ಟಕ್ಕೂ, ಶಾಲಿನಿ ಪಾಂಡೆ ವಿರುದ್ಧ ದಾಖಲಾದ ದೂರು ಯಾವುದು? ಮುಂದೆ ಓದಿ....

  ಬಾಲಿವುಡ್ ಚಿತ್ರಕ್ಕಾಗಿ ತಮಿಳು ಚಿತ್ರಕ್ಕೆ ಕೈ ಕೊಟ್ಟ ನಟಿ

  ಬಾಲಿವುಡ್ ಚಿತ್ರಕ್ಕಾಗಿ ತಮಿಳು ಚಿತ್ರಕ್ಕೆ ಕೈ ಕೊಟ್ಟ ನಟಿ

  ವಿಜಯ್ ಅಂಟೋನಿ ಮತ್ತು ಅರುಣ್ ವಿಜಯ್ ನಾಯಕರಾಗಿ ನಟಿಸುತ್ತಿರುವ ''ಅಗ್ನಿ ಸಿರಗುಗಲ್'' ಚಿತ್ರದಲ್ಲಿ ಶಾಲಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ. 27 ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟಿ ನಂತರ ಶೂಟಿಂಗ್ ಗೆ ಬರ್ತಿಲ್ಲ ಎಂದು ಚಿತ್ರತಂಡ ಆಕ್ರೋಶ ಹೊರಹಾಕಿದೆ.

  ಸಂಪರ್ಕಕ್ಕೆ ಸಿಗುತ್ತಿಲ್ಲ

  ಸಂಪರ್ಕಕ್ಕೆ ಸಿಗುತ್ತಿಲ್ಲ

  'ಶಾಲಿನಿ ಪಾಂಡೆ ಅವರು 27 ದಿನ ಶೂಟಿಂಗ್ ಮಾಡಿ, ನಂತರ ಚಿತ್ರೀಕರಣ ಬರುತ್ತಿಲ್ಲ. ಅವರನ್ನು ಸಂಪರ್ಕಿಸಿದರೂ ಕೈಗೆ ಸಿಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಿರುವ, ನಿರ್ದೇಶಕ ಹಾಗೂ ನಿರ್ಮಾಪಕ ನಟಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರಂತೆ. ಜೊತೆಗೆ ತಮಿಳು ಮತ್ತು ತೆಲುಗು ನಿರ್ಮಾಪಕರ ಸಂಘದಲ್ಲಿ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರಂತೆ.

  ಬಾಲಿವುಡ್ ನಟನಿಗಾಗಿ ಸೌತ್ ಸಿನಿಮಾಗೆ ಕೈಕೊಟ್ರಂತೆ ನಟಿ ಶಾಲಿನಿ ಪಾಂಡೆ!ಬಾಲಿವುಡ್ ನಟನಿಗಾಗಿ ಸೌತ್ ಸಿನಿಮಾಗೆ ಕೈಕೊಟ್ರಂತೆ ನಟಿ ಶಾಲಿನಿ ಪಾಂಡೆ!

  ಹಿಂದಿ ಚಿತ್ರಕ್ಕೆ ಸೈ, ಸೌತ್ ಚಿತ್ರಕ್ಕೆ ಬಾಯ್

  ಹಿಂದಿ ಚಿತ್ರಕ್ಕೆ ಸೈ, ಸೌತ್ ಚಿತ್ರಕ್ಕೆ ಬಾಯ್

  ಇದೆಲ್ಲದಕ್ಕೂ ರಣ್ವೀರ್ ಸಿಂಗ್ ಜೊತೆಯಲ್ಲಿ ನಟಿಸುತ್ತಿರುವ ಚಿತ್ರ ಕಾರಣ ಎಂದು ಹೇಳಲಾಗುತ್ತಿದೆ. ಹಿಂದಿ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸೌತ್ ಚಿತ್ರಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ.

  ಶಾಲಿನಿ ಬದಲು ಅಕ್ಷರಾ!

  ಶಾಲಿನಿ ಬದಲು ಅಕ್ಷರಾ!

  ಶಾಲಿನಿ ಪಾಂಡೆ ಕೈಕೊಟ್ಟ ಕಾರಣದಿಂದ ಆ ಜಾಗಕ್ಕೆ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಅವರನ್ನ ಕರೆತರಲಾಗಿದೆಯಂತೆ. ಈಗಾಗಲೇ ಅಕ್ಷರಾ ಶೂಟಿಂಗ್ ನಲ್ಲೂ ಭಾಗಿಯಾಗಿದ್ದು, ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

  English summary
  Arjun Reddy Actress Shalini Pandey in trouble. Agni Siragugal movie team has filed criminal case on Shalini pandey for, not participating in shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X