ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಡೈರೆಕ್ಷರ್ ಮತ್ತು ವಿಜಯ್ ದೇವರಕೊಂಡ!

ನಟ ವಿಜಯ್ ದೇವರಕೊಂಡ ಅವರಿಗೆ ಖ್ಯಾತಿ ತಂದುಕೊಟ್ಟ ಸಿನಿಮಾ ಅರ್ಜುನ್ ರೆಡ್ಡಿ. ಈ ಸಿನಿಮಾ ಮೂಲಕ ದೇಶದೆಲ್ಲೆಡೆ ಪರಿಚಿತರಾದ ಅವರು ಬಾಲಿವುಡ್‌ನಲ್ಲಿಯೂ ಹೆಸರು ಗಳಿಸಿದ್ದರು. ಇದಾದ ನಂತರ ಅವರಿಗೆ ಯಾವ ಸಿನಿಮಾವೂ ಅಂತಹ ಯಶಸ್ಸು ತಂದುಕೊಟ್ಟಿಲ್ಲ. ಈಗ ಮತ್ತೆ ಅರ್ಜುನ್ ರೆಡ್ಡಿ ತಂಡ ಒಂದಾಗುತ್ತಿದೆ.

ವಿಜಯ್ ದೇವರಕೊಂಡ ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಸೆಪ್ಟಂಬರ್ ಒಂದರಂದು ನಟಿ ಸಮಂತಾ ರುತ್ ಪ್ರಭು ಅವರ ಜೊತೆಗಿನ ಖುಷಿ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಭರವಸೆಯನ್ನು ಚಿತ್ರತಂಡ ಹೊಂದಿದೆ.

Arjun Reddy director Sandeep Reddy Vanga and Vijay Deverakonda to reunite for another film

ಮತ್ತೆ ಒಂದಾಗುತ್ತಿದ್ದಾರೆ ಸಂದೀಪ್ ರೆಡ್ಡಿ ವಂಗಾ ಮತ್ತು ವಿಜಯ್!

2011 ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದ ಪ್ರತಿಭಾವಂತ ನಟ, 2017 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಡ್ರಾಮಾ ಅರ್ಜುನ್ ರೆಡ್ಡಿಯಿಂದ ಹೆಸರು ಪಡೆದರು. ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಬ್ಲಾಕ್‌ಬಸ್ಟರ್ ಚಲನಚಿತ್ರವು ವಿಜಯ್ ದೇವರಕೊಂಡ ಅವರನ್ನು ತೆಲುಗು ಚಿತ್ರರಂಗದ ಹೊಸ ಆಂಗ್ರಿ ಯಂಗ್ ಮ್ಯಾನ್ ಆಗಿಸಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಖ್ಯಾತ ನಟ-ನಿರ್ದೇಶಕ ಜೋಡಿ ಮತ್ತೊಂದು ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದೆ.

ಪ್ರತಿಷ್ಠಿತ ತೆಲುಗು ಸಿನಿಮಾಗಳ ನಿರ್ಮಾಣದ ಬ್ಯಾನರ್ ಮೈತ್ರಿ ಮೂವಿ ಮೇಕರ್ಸ್‌ನ ಮುಂದಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರನ್ನು ಒಂದು ಮಾಡಲಿದೆ ಎಂದು ವರದಿಯಾಗಿದೆ. ಪ್ರೊಡಕ್ಷನ್ ಬ್ಯಾನರ್, ನಟ ಮತ್ತು ನಿರ್ದೇಶಕರ ಜೊತೆಗೆ ಕೆಲ ಸ್ವಲ್ಪ ಸಮಯದಿಂದ ಸಕ್ರಿಯ ಮಾತುಕತೆ ನಡೆಸುತ್ತಿದೆ.

ಆದರೆ, ವಿಜಯ ದೇವಯಕೊಂಡ ಮತ್ತು ಸಂದೀಪ್ ರೆಡ್ಡಿ ವಂಗಾ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಈ ಸಿನಿಮಾದ ಬಗ್ಗೆ ಮಾಹಿತಿ ನೀಡಿಲ್ಲ. ಆದರೂ ಈ ಸೂಪರ್ ಹಿಟ್ ಜೋಡಿ ಮತ್ತೆ ಒಂದಾದರೆ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಸಿಗಲಿದೆ. ಮೈತ್ರಿ ಮೂವಿ ಮೇಕರ್ಸ್ ಕೂಡ ಈ ಬಗ್ಗೆ ಉತ್ಸಾಹ ತೋರಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ವಿಜಯ್ ದೇವರಕೊಂಡ ಮತ್ತು ಸಂದೀಪ್ ರೆಡ್ಡಿ ವಂಗಾ ತಮ್ಮ ಎರಡನೇ ಚಿತ್ರವನ್ನು ಶೀಘ್ರದಲ್ಲೇ ಪ್ರಕಟಿಸಬಹುದು.

Arjun Reddy director Sandeep Reddy Vanga and Vijay Deverakonda to reunite for another film

ವಿಜಯ್ ದೇವರಕೊಂಡ ಮುಂದಿನ ಸಿನಿಮಾಗಳು

ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸೋಲೊನ ನಂತರ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಸಿನಿಮಾ 'ಖುಷಿ' ಸೆಪ್ಟೆಂಬರ್ ಒಂದರಂದು ಬಿಡುಗಡೆಯಾಗಿದೆ. ನಟಿ ಸಮಂತಾ ರುತ್ ಪ್ರಭು ಅವರ ಜೊತೆಗೆ ಎರಡನೇ ಬಾರಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ವಿಪ್ಲವ್ ಮತ್ತು ಆರಾಧ್ಯ ಎಂಬ ಯುವ ಜೋಡಿಯ ಸುತ್ತ ಸುತ್ತುವ ಸಿನಿಮಾವಾಗಿದ್ದು, ಶಿವ ನಿರ್ವಾಣ ಆಕ್ಷನ ಕಟ್ ಹೇಳಿದ್ದಾರೆ.

ವಿಜಯ್ ದೇವರಕೊಂಡ ಗೌತಮ್ ತಿನ್ನನೂರಿ ಅವರೊಂದಿಗೆ ತಮ್ಮ 12 ನೇ ಸಿನಿಮಾಗಿ ಸಿದ್ದರಾಗಿದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ VD 12 ಎಂದು ಹೆಸರಿಸಲಾಗಿದೆ. 13 ನೇ ಸಿನಿಮಾ VD 13 ಅನ್ನು ಪರಶುರಾಮ್ ಪೆಟ್ಲಾ ಅವರು ನಿರ್ದೇಶಿಸಲಿದ್ದಾರೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅರ್ಜುನ್ ರೆಡ್ಡಿಯ ಅಧಿಕೃತ ರಿಮೇಕ್ ಆದ ಕಬೀರ್ ಸಿಂಗ್‌ ಸಿನಿಮಾನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮುಂಬರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ 23 ನೇ ಸಿನಿಮಾಗೂ ಜೊತೆಯಾಗುತ್ತಿದ್ದಾರೆ.

More from Filmibeat

English summary
Vijay Deverakonda and Sandeep Reddy Vanga to reunite for another film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X