ಮತ್ತೆ ಚಿತ್ರಮಂದಿರಗಳಿಗೆ 'ಅರ್ಜುನ್ ರೆಡ್ಡಿ': ಈ ಬಾರಿ ಇನ್ನು ಹೆಚ್ಚು ಹಸಿ-ಬಿಸಿ!
2017 ರಲ್ಲಿ ಬಿಡುಗಡೆ ಆಗಿದ್ದ ತೆಲುಗು ಸಿನಿಮಾ 'ಅರ್ಜುನ್ ರೆಡ್ಡಿ' ಹುಟ್ಟುಹಾಕಿದ್ದ ಚರ್ಚೆ ಈಗಲೂ ನಿಂತಿಲ್ಲ. ಅದೊಂದು ಒಳ್ಳೆಯ ಸಿನಿಮಾ ಎಂದು ಕೆಲವರು ಅದು ಕೆಟ್ಟ ಸಿನಿಮಾ ಎಂದು ಇನ್ನೊಂದು ಪಂಗಡ ಈಗಲೂ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
Recommended Video
ತನ್ನ ಕಚ್ಚಾ ತನದಿಂದ ಅರ್ಜುನ್ ರೆಡ್ಡಿ ಯುವಕರಿಗೆ ಸಖತ್ ಇಷ್ಟವಾಗಿತ್ತು. ವಿಜಯ್ ದೇವರಕೊಂಡ ನಟನೆ ಸಿನಿಮಾದ ಮತ್ತೊಂದು ಪ್ರಮುಖ ಅಂಶ.
'ಸಾಂಪ್ರದಾಯಿಕ ಪ್ರೇಮಕತಾ' ಚಿತ್ರಗಳನ್ನು ನೋಡಿಕೊಂಡು ಬಂದಿದ್ದ ದಕ್ಷಿಣ ಭಾರತ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಶಾಕ್ ನೀಡಿತ್ತು. ಸಿನಿಮಾವನ್ನು ಕೆಲವರು 'ದೇವದಾಸ್' ಗೆ ಹೋಲಿಸಿದರೆ ಮತ್ತೆ ಕೆಲವರು 'ಸಿ' ಗ್ರೇಡ್ ಸಿನಿಮಾ ಎಂದು ಮೂಗು ಮುರಿದರು. ಆದರೆ ಅದೇ ಅರ್ಜುನ್ ರೆಡ್ಡಿ ಸಿನಿಮಾ ಈಗ ಮತ್ತೆ ತೆರೆಗೆ ಬರುತ್ತಿದೆ.

ಮತ್ತೆ ಬಿಡುಗಡೆ ಆಗುತ್ತಿದೆ ಸಿನಿಮಾ
ಹೌದು, 2017 ರಲ್ಲಿ ಬಿಡುಗಡೆಯಾಗಿದ್ದ ಅರ್ಜುನ್ ರೆಡ್ಡಿ ತೆಲುಗು ಸಿನಿಮಾವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ವೇದಿಕೆ ತಯಾರಾಗುತ್ತಿದೆ. ಈ ಬಾರಿ ಇನ್ನಷ್ಟು ಹಸಿ-ಬಿಸಿ ದೃಶ್ಯಗಳು ಸಿನಿಮಾಕ್ಕೆ ಸೇರ್ಪಡೆ ಆಗಲಿವೆ!

ಡಿಲೀಟ್ ಸೀನ್‌ಗಳನ್ನು ಮರು ಜೋಡಿಸಲಾಗಿದೆ
ಸಿನಿಮಾದ ಸೆನ್ಸಾರ್ ಸಮಯದಲ್ಲಿ ಮತ್ತು ಅದಕ್ಕೆ ಮುನ್ನಾ ಎಡಿಟಿಂಗ್ ಸಮಯದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆ ದೃಶ್ಯಗಳನ್ನು ಸಿನಿಮಾಕ್ಕೆ ಮರು ಜೋಡಿಸಿ ಸಿನಿಮಾವನ್ನು ಮತ್ತೆ 2022 ಕ್ಕೆ ತೆರೆಗೆ ತರುವ ಯೋಚನೆಯಲ್ಲಿದ್ದಾರೆ ನಿರ್ಮಾಪಕರು. 2022 ಅರ್ಜುನ್ ರೆಡ್ಡಿ ಬಿಡುಗಡೆಯಾಗಿ 5 ವರ್ಷವಾಗುತ್ತದೆಯಾದ್ದರಿಂದ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಅಭಿಮಾನಿಗಳಿಗೆ ಸಖತ್ ಖುಷಿ
ಅರ್ಜುನ್ ರೆಡ್ಡಿ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಸಖತ್ ಸಕ್ಸಸ್ ಆಗಿತ್ತು. ಸಿನಿಮಾದಿಂದ ವಿಜಯ್ ದೇವರಕೊಂಡ ತೆಲುಗು ಸಿನಿ ಉದ್ಯಮದಲ್ಲಿ ನೆಲೆ ನಿಲ್ಲುವಂತಾಯಿತು. ಇದೀಗ ಸಿನಿಮಾ ಮರು ಬಿಡುಗಡೆ ಆಗುತ್ತಿರುವುದು ಸಹಜವಾಗಿಯೇ ದೇವರಕೊಂಡ ಅಭಿಮಾನಿಗಳಿಗೆ ಖುಷಿ ತಂದಿದೆ.

ಹಿಂದಿಯಲ್ಲೂ ಸಖತ್ ಹಿಟ್ ಆಗಿತ್ತು
ಅರ್ಜುನ್ ರೆಡ್ಡಿ ಸಿನಿಮಾ ಸಖತ್ ಹಿಟ್ ಆಗಿತ್ತು, ಸಿನಿಮಾದ ಹಿಂದಿ ಅವತರಣಿಗೆ 'ಕಬೀರ್ ಸಿಂಗ್' ಸಹ ಹಿಟ್ ಆಯಿತು. ಸಿನಿಮಾವು ತಮಿಳಿಗೂ ರೀಮೇಕ್ ಆಗುತ್ತಿದೆ. ಕನ್ನಡದಲ್ಲಿಯೂ ರೀಮೇಕ್ ಆಗುವ ಸಾಧ್ಯತೆ ಇದೆ.


Click it and Unblock the Notifications











