For Quick Alerts
  ALLOW NOTIFICATIONS  
  For Daily Alerts

  ರವಿತೇಜ ಚಿತ್ರದಲ್ಲಿ ಪ್ರಮುಖ ವಿಲನ್ ಆದ ಅರ್ಜುನ್ ಸರ್ಜಾ?

  |

  ಕನ್ನಡ, ತೆಲುಗು ಹಾಗೂ ತಮಿಳು ಇಂಡಸ್ಟ್ರಿಯಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಅರ್ಜುನ್ ಸರ್ಜಾ ಜಂಟಲ್‌ಮ್ಯಾನ್ ಎಂದು ಗುರುತಿಸಿಕೊಂಡಿದ್ದಾರೆ. ವಿಶೇಷ ಪಾತ್ರಗಳ ಮೂಲಕ ಚಿತ್ರರಸಿಕರ ಗಮನ ಸೆಳೆದಿದ್ದಾರೆ.

  ಇದೀಗ, ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ವರದಿ ಪ್ರಕಾರ ನಟ ರವಿತೇಜ ನಟಿಸಲಿರುವ ಹೊಸ ಚಿತ್ರದಲ್ಲಿ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

  ಹೌದು, ರವಿತೇಜ ನಾಯಕನಾಗಿ ಅಭಿನಯಿಸುತ್ತಿರುವ ಖಿಲಾಡಿ ಚಿತ್ರದಲ್ಲಿ ಅರ್ಜುನ್ ಸರ್ಜಾ ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ.

  ಚಿತ್ರದ ಕಥೆ ಹಾಗೂ ಪಾತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅರ್ಜುನ್ ಸರ್ಜಾ ಸಹ ಈ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ರವಿತೇಜ ನಟನೆಯ ಖಿಲಾಡಿ ಚಿತ್ರವನ್ನು ರಮೇಶ್ ವರ್ಮಾ ನಿರ್ದೇಶಿಸಿಲಿದ್ದಾರೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಸರ್ಜಾ ಮತ್ತು ರವಿತೇಜ ಭಾಗಿಯಾಗಲಿದ್ದಾರೆ.

  'ಖಿಲಾಡಿ' ಚಿತ್ರದಲ್ಲಿ ಮೀನಾಕ್ಷಿ ಚೌಧರಿ ಮತ್ತು ಡಿಂಪಲ್ ಹಯತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತವಿದ್ದು, 2021ರ ಬೇಸಿಗೆ ಸಮಯಕ್ಕೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

  ಅರ್ಜುನ್ ಸರ್ಜಾ ಕುರಿತು ಹೇಳುವುದಾದರೇ ಸದ್ಯ ಮೂರು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಜನ ಗಣ ಮನ, ಫ್ರೆಂಡ್‌ಷಿಪ್, ಮೇಧವಿ ಸಿನಿಮಾದಲ್ಲಿ ಸರ್ಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ಮಲಯಾಳಂ ಭಾಷೆಯಲ್ಲಿ ಮೋಹನ್ ಲಾಲ್ ನಾಯಕರಾಗಿರುವ ಮರಕ್ಕರ್ ಚಿತ್ರದಲ್ಲೂ ಸರ್ಜಾ ವಿಶೇಷ ಪಾತ್ರ ನಿಭಾಯಿಸಿದ್ದಾರೆ.

  English summary
  As per Report, Action King Arjun sarja to play main villain in Ravi Teja's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X