For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್: 'ಸಲಾರ್' ಟೀಸರ್ ಡೇಟ್ ಸುಳಿವು ಕೊಟ್ಟ ಆರ್ಟ್ ಡೈರೆಕ್ಟರ್

  |

  'ಕೆಜಿಎಫ್' ಸರಣಿ ನಂತ್ರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸ್ತಿರೋ ಬಹುನಿರೀಕ್ಷಿತ ಸಿನಿಮಾ 'ಸಲಾರ್'. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಹೇಗೆ ಅಬ್ಬರಿಸ್ತಾರೆ ಅಂತ ನೋಡೋದಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ. ಮಾಫಿಯಾ ಬ್ಯಾಕ್‌ಡ್ರಾಪ್‌ನಲ್ಲಿ ನೀಲ್ ಬಹಳ ರೋಚಕವಾಗಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ 40%ರಷ್ಟು ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾದೂ ಕಾದು ಸುಸ್ತಾಗಿದ್ದಾರೆ. ಬಹಳ ಹಿಂದೆಯೇ ಸೆಟ್ಟೇರಿದ ಸಿನಿಮಾ ಕೊರೊನಾ ಹಾವಳಿಯಿಂದ ತಡವಾಯಿತು. 'ಕೆಜಿಎಫ್'- 2 ರಿಲೀಸ್ ನಂತರ ನಿರ್ದೇಶಕರು ಮತ್ತೆ ಅಖಾಡಕ್ಕೆ ಇಳಿದಿದ್ದು, ಮತ್ತೊಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದಾರೆ. ಸದ್ಯ ಸಿನಿಮಾ ಟೀಸರ್‌ ಯಾವಾಗ ರಿಲೀಸ್ ಆಗುತ್ತೆ ಅನ್ನೋದರ ಬಗ್ಗೆ ಚಿತ್ರದ ಆರ್ಟ್‌ ಡೈರೆಕ್ಟರ್ ಶಿವಕುಮಾರ್ ಸುಳಿವು ನೀಡಿದ್ದಾರೆ.

  'ಸಲಾರ್' ಚಿತ್ರದ ಪವರ್‌ ಪ್ಯಾಕ್ಡ್ ಟೀಸರ್‌ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ 2 ಪೋಸ್ಟರ್‌ಗಳು ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ. ಇನ್ನು ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. 'ಕೆಜಿಎಫ್- 2' ನಂತರ ಅತ್ಯಂತ ಪ್ರತಿಷ್ಟಾತ್ಮಕವಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

  ಸಲಾರ್, ಪ್ರಾಜೆಕ್ಟ್-K ನಡುವೆ ಪ್ರಭಾಸ್ ಹೊಸ ಸಿನಿಮಾ; ಸೆಪ್ಟೆಂಬರ್‌ನಲ್ಲೇ ಮುಹೂರ್ತ ಸಲಾರ್, ಪ್ರಾಜೆಕ್ಟ್-K ನಡುವೆ ಪ್ರಭಾಸ್ ಹೊಸ ಸಿನಿಮಾ; ಸೆಪ್ಟೆಂಬರ್‌ನಲ್ಲೇ ಮುಹೂರ್ತ

  ಫಸ್ಟ್ ಶೆಡ್ಯೂಲ್‌ನಲ್ಲಿ ಸಿಂಗರೇಣಿ ಕಲ್ಲಿದ್ದಲು ಗಣಿಗಳಲ್ಲಿ ಹೀರೊ ಇಂಟ್ರಡಕ್ಷನ್ ಸೀಕ್ವೆನ್ಸ್ ಜೊತೆಗೆ ಒಂದು ಆಕ್ಷನ್ ಎಪಿಸೋಡ್ ಶೂಟ್ ಮಾಡಲಾಗಿತ್ತು. ನಂತರ ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿ ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಿದ್ದ ಅದ್ಧೂರಿ ಸೆಟ್‌ಗಳಲ್ಲಿ ಸಿನಿಮಾಟೋಗ್ರಫರ್ ಭುವನ್ ಗೌಡ ಒಂದಷ್ಟು ರೋಚಕ ಸನ್ನಿವೇಶಗಳನ್ನು ಸೆರೆ ಹಿಡಿದಿದ್ದಾರೆ. 'ಕೆಜಿಎಫ್‌' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಸಿನಿಮಾ ಬಳಗದಲ್ಲಿದ್ದು, ಆರ್ಟ್ ಡೈರೆಕ್ಟರ್‌ ಶಿವಕುಮಾರ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಪ್ರಶಾಂತ್ ನೀಲ್‌ಗೆ ಸಾಥ್ ಕೊಟ್ಟಿದ್ದಾರೆ. 'ಕೆಜಿಎಫ್‌'ನ ಮೀರಿಸುವಂತಹ ಸಿನಿಮಾ ಮಾಡಲು ಇಡೀ ತಂಡ ಶ್ರಮಿಸುತ್ತಿದೆ.

  ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಜಯ್ ಸೇತುಪತಿ: ಉಪ್ಪಿ ನಟಿಸುತ್ತಾ ಇಲ್ವಾ?ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಜಯ್ ಸೇತುಪತಿ: ಉಪ್ಪಿ ನಟಿಸುತ್ತಾ ಇಲ್ವಾ?

  ಸದ್ಯ ಹೈದರಾಬಾದ್‌ನಲ್ಲಿ 'ಸಲಾರ್' ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಪ್ರಭಾಸ್ ಹೊರತುಪಡಿಸಿ ಇತರೆ ಕಲಾವಿದರು ಇರುವ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ಶೀಘ್ರದಲ್ಲೇ ಚಿತ್ರದ ಇಂಟ್ರುಡಕ್ಷನ್ ಸೀನ್‌ಗಾಗಿ ತಯಾರಿ ಶುರುವಾಗಿದ್ದು, ಪ್ರಶಾಂತ್‌ ನೀಲ್ ಅಂಡರ್‌ಗ್ರೌಂಡ್‌ನಲ್ಲಿ ಇದನ್ನು ಚಿತ್ರೀಕರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಹೀರೊ ಪ್ರಭಾಸ್ ಸಾಕಷ್ಟು ತರಬೇತಿ ಕೂಡ ಪಡೆಯುತ್ತಿದ್ದಾರಂತೆ. 'ಸಲಾರ್' ಸಿನಿಮಾ ಟೀಸರ್‌ಗಾಗಿ ಡಾರ್ಲಿಂಗ್ ಅಭಿಮಾನಿಗಳು ಕಾಯ್ತಿದ್ದು, ಟೀಸರ್ ಯಾವಾಗ ರಿಲೀಸ್ ಆಗುತ್ತದೆ ಅನ್ನೋದರ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆರ್ಟ್ ಡೈರೆಕ್ಟರ್ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

   'ಸಲಾರ್' ಟೀಸರ್ ರಿಲೀಸ್‌ ಯಾವಾಗ?

  'ಸಲಾರ್' ಟೀಸರ್ ರಿಲೀಸ್‌ ಯಾವಾಗ?

  ಕಳೆದ ವರ್ಷ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಸಲಾರ್' ಟೀಸರ್ ಪಕ್ಕಾ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾದು ನಿರಾಸೆ ಅನುಭವಿಸುವಂತಾಗಿತ್ತು.ಆದರೆ ಟೀಸರ್‌ಗೆ ಬೇಕಾದಷ್ಟು ಶಾಟ್ಸ್‌ ಶೂಟ್ ಆಗದ ಕಾರಣ ಅದು ಸಾಧ್ಯವಾಗಿರಲಿಲ್ಲ. ಆ ನಂತರ ಕೂಡ ಟೀಸರ್ ರಿಲೀಸ್ ಡೇಟ್‌ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬಂದಿತ್ತು. ಇದೇ ವಿಚಾರವಾಗಿ ಆರ್ಟ್ ಡೈರೆಕ್ಟರ್ ಶಿವಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು 'ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬರ್ತಿದ್ದು, ಇದರಲ್ಲಿ ಸಾಕಷ್ಟು ರೋಚಕ ಸನ್ನಿವೇಶಗಳು ಇರಲಿದೆ. ಅದಕ್ಕೆ ಸಂಬಂಧಿಸಿದ ಸನ್ನಿವೇಶಗಳ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಟೀಸರ್ ರಿಲೀಸ್ ಆಗಲಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಅಪ್‌ಡೇಟ್ ಸಿಗುತ್ತೆ' ಎಂದು ಹೇಳಿದ್ದಾರೆ.

   ಮುಂದಿನ ತಿಂಗಳೇ 'ಸಲಾರ್' ಟೀಸರ್ ಬಿಡುಗಡೆ

  ಮುಂದಿನ ತಿಂಗಳೇ 'ಸಲಾರ್' ಟೀಸರ್ ಬಿಡುಗಡೆ

  ಆರ್ಟ್ ಡೈರೆಕ್ಟರ್‌ ಶಿವಕುಮಾರ್ ಹೇಳಿಕೆ ನೋಡುತ್ತಿದ್ದರೆ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ಆಗಸ್ಟ್ 15ರಂದು 'ಸಲಾರ್' ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ. ಅಭಿಮಾನಿಗಳು ಕೂಡ ಪ್ರಶಾಂತ್ ನೀಲ್ ಟೇಕಿಂಗ್‌ನಲ್ಲಿ 'ಬಾಹುಬಲಿ' ಪ್ರಭಾಸ್ ಆರ್ಭಟ ಹೇಗಿದೆ ಅನ್ನೋದರ ಝಲಕ್ ನೋಡೋಕೆ ಉತ್ಸುಕರಾಗಿದ್ದಾರೆ.

   ದ್ವಿಪಾತ್ರದಲ್ಲಿ 'ಸಲಾರ್' ಪ್ರಭಾಸ್ ದರ್ಬಾರ್

  ದ್ವಿಪಾತ್ರದಲ್ಲಿ 'ಸಲಾರ್' ಪ್ರಭಾಸ್ ದರ್ಬಾರ್

  'ಸಲಾರ್' ಸಿನಿಮಾ ಕಥೆ ಏನಿರಬಹುದು ಅನ್ನುವುದರ ಬಗ್ಗೆ ಬಗೆ ಬಗೆಯ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೀತಿದೆ. ಈಗಾಗಲೇ ಚಿತ್ರದ 2 ಪೋಸ್ಟರ್‌ಗಳು ರಿಲೀಸ್ ಆಗಿದ್ದು, ಎರಡರಲ್ಲೂ ಬೇರೆ ಬೇರೆ ಲುಕ್‌ನಲ್ಲಿ ಯಂಗ್ ರೆಬಲ್ ಸ್ಟಾರ್ ದರ್ಶನ ಕೊಟ್ಟಿದ್ದಾರೆ. ಅದನ್ನು ನೋಡಿ ಕೆಲವರು ಚಿತ್ರದಲ್ಲಿ ಪ್ರಭಾಸ್ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಅನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

  ಉಗ್ರಂ ರಿಮೇಕ್ ಸಲಾರ್?

  ಉಗ್ರಂ ರಿಮೇಕ್ ಸಲಾರ್?

  ಪ್ರಶಾಂತ್ ನೀಲ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಉಗ್ರಂ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಕಥೆಯನ್ನು ಕೊಂಚ ಬದಲಿಸಿ, ನಿರ್ದೇಶಕರು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಸಲಾರ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಅನ್ನುವ ವಾದವೂ ಇದೆ. ಆದರೆ ಕೆಲವರು ಇದನ್ನು ಒಪ್ಪುವುದಕ್ಕೆ ಸಿದ್ಧರಿಲ್ಲ. ಅಸಲಿ ಕಥೆ ಏನು ಅನ್ನುವುದು ಸಿನಿಮಾ ರಿಲೀಸ್ ನಂತರ ಗೊತ್ತಾಗಲಿದೆ.

   ಮುಂದಿನ ವರ್ಷ ಜೂನ್‌ನಲ್ಲಿ ಸಿನಿಮಾ ಬಿಡುಗಡೆ

  ಮುಂದಿನ ವರ್ಷ ಜೂನ್‌ನಲ್ಲಿ ಸಿನಿಮಾ ಬಿಡುಗಡೆ

  2022ರ ಏಪ್ರಿಲ್ 14ರಂದು 'ಸಲಾರ್' ಸಿನಿಮಾ ರಿಲೀಸ್ ಮಾಡೋದಾಗಿ ಕಳೆದ ವರ್ಷ ಚಿತ್ರತಂಡ ಘೋಷಿಸಿತ್ತು. ಆದರೆ ಕೊರೊನಾ ಹಾವಳಿಯಿಂದ ಶೂಟಿಂಗ್ ತಡವಾಗಿ 'ಸಲಾರ್' ಬದಲು 'ಕೆಜಿಎಫ್-2' ಸಿನಿಮಾ ಆ ದಿನ ರಿಲೀಸ್ ಆಗುವಂತಾಯಿತು. ಹಾಗಾಗಿ ಪ್ರಭಾಸ್‌ 'ಸಲಾರ್' ಬದಲು 'ಆದಿಪುರುಷ್' ಸಿನಿಮಾ ಚಿತ್ರೀಕರಣಕ್ಕೆ ಕಾಲ್‌ಶೀಟ್‌ ಕೊಟ್ಟರು. ಇದೀಗ ಮತ್ತೆ 'ಸಲಾರ್' ಶೂಟಿಂಗ್ ಶುರುವಾಗಿದ್ದು, ಈ ವರ್ಷ್ಯಾಂತಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಮುಂದಿನ ವರ್ಷ ಮೇ ಅಥವಾ ಜೂನ್‌ನಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

  English summary
  Art Director Shivakumar Clarity On Salaar Movie Teaser Release Date. Know More.
  Sunday, July 24, 2022, 16:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X