twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ಫೈಟ್ ದೃಶ್ಯಕ್ಕೆ ಮಾಸ್ಕ್ ಧರಿಸಿದ ಗ್ರಾಫಿಕ್ಸ್ ಕಲಾವಿದರು: ರಾಜಮೌಳಿ ಹೇಳಿದ್ದೇನು?

    |

    ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರಾನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಕೊರೊನಾ ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    Recommended Video

    ಅಣ್ಣ ಬಿಟ್ಟುಹೋದ ಚಿತ್ರಗಳ ಬೆಂಬಲಕ್ಕೆ ನಿಂತ ಧ್ರುವಸರ್ಜಾ | Dhruva Sarja to dub Chiru movies

    ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೆ ಸಾಕಷ್ಟು ಸಿನಿಮಾಗಳನ್ನು ಬಳಸಿಕೊಳ್ಳಲಾಗಿದೆ. ಚಿತ್ರದ ಹಾಡುಗಳು, ಪೋಸ್ಟರ್ಸ್ ಮತ್ತು ಡೈಲಾಗ್ ಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಬಾಹುಬಲಿ ಸಿನಿಮಾದ ಫೈಟ್ ದೃಶ್ಯವೊಂದಕ್ಕೆ ಮಾಸ್ಕ್ ಧರಿಸುವ ಮೂಲಕ ಮಾಸ್ಕ್ ನ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ.

    ಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮ

    ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬಾಹುಬಲಿ ದಿ ಕನ್ಲೂಷನ್ ಮಹಾಕಾವ್ಯವನ್ನು ಬಳಸಿಕೊಳ್ಳಲಾಗಿದೆ. ಇಬ್ಬರು ಖ್ಯಾತ ವಿ ಎಕ್ಸ್ ಎಫ್ ಕಲಾವಿದರು ಬಾಹುಬಲಿ ಮತ್ತು ಭಲ್ಲಾಳದೇವ ಇಬ್ಬರು ಫೈಟ್ ಮಾಡುವ ದೃಶಕ್ಕೆ ಮಾಸ್ಕ್ ಧರಿಸಿದ್ದಾರೆ. ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಇಬ್ಬರು ಮಾಸ್ಕ್ ಧರಿಸಿ ಫೈಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾಸ್ಕ್ ಧರಿಸಿ ಮುಖಾಮುಖಿಯಾಗುವ ಇಬ್ಬರು ಫೋಟೋಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    Wearing Mask To Bahubali Fight Scene Recreate For Corona A wareness

    ವೈರಲ್ ಆಗಿರುವ ವಿಡಿಯೋವನ್ನು ನಿರ್ದೇಶಕ ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಕೆಲಸ ಎಂದು ಹೇಳಿ ಗ್ರಾಫಿಕ್ಸ್ ಮಾಡಿದ ಟೀಂಗೆ ಧನ್ಯವಾದ ತಿಳಿಸಿದ್ದಾರೆ.

    ರಾಜಮೌಳಿ ಜೊತೆಗೆ ಇಡೀ ಬಾಹುಬಲಿ ಟೀಂ ಈ ವಿಡಿಯೋವನ್ನು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಯೇಟಿವಿಟಿಗೆ ಧನ್ಯವಾದ ತಿಳಿಸಿದ್ದಾರೆ. ಮಾಸ್ಕ್ ಈಗ ಕಡ್ಡಾಯವಾಗಿದೆ, ಯಾರು ಮರೆಯ ಬಾರದು ಎಂದು ವಿಡಿಯೋ ಮೂಲಕ ಸಂದೇಶ ನೀಡಲಾಗಿದೆ.

    English summary
    Wearing mask to Bahubali Epic fight scene recreate for corona awareness.
    Saturday, June 27, 2020, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X