For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಎದುರು ವಿಲನ್ ಆಗಲಿದ್ದಾರೆ ರೊಮ್ಯಾಂಟಿಕ್ ಹೀರೊ

  |

  ಒಂದು ಕಾಲದ ರೊಮ್ಯಾಂಟಿಕ್ ಹೀರೋ, ಹೆಂಗೆಳೆಯರ ಮೆಚ್ಚಿನ ನಾಯಕ ಆಗಿದ್ದ ಅರವಿಂದ ಸ್ವಾಮಿ ಈಗ ವಿಲನ್ ಪಾತ್ರಗಳಿಗೆ ಅಂಟಿಕೊಂಡಿದ್ದಾರೆ.

  ರೋಜಾ, ಬಾಂಬೆ, ಮಿನ್ಸಾರ ಕನವಲ್ ಇನ್ನೂ ಅನೇಕ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಅರವಿಂದ ಸ್ವಾಮಿ ಕೆಲ ವರ್ಷಗಳಿಂದ ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ಅರವಿಂದ ಸ್ವಾಮಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನಾ ಅರವಿಂದ ಸ್ವಾಮಿ, ಚಿರಂಜೀವಿ ಪುತ್ರ ರಾಮ್‌ಚರಣ್ ನಟನೆಯ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.

  ರಾಮ್ ಚರಣ್ ನಿರ್ಮಾಣ ಮಾಡುತ್ತಿರುವ ಆಚಾರ್ಯ ಸಿನಿಮಾ ಮಲಯಾಳಂನ 'ಲುಸೀಫರ್' ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ. ಇದೇ ಸಿನಿಮಾದಲ್ಲಿ ಅರವಿಂದ ಸ್ವಾಮಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಅಮೋಘ ವಾಗಿರುವ ಸ್ಕ್ರಿಪ್ಟ್ ಸಿಕ್ಕಿದೆ.| Vasishta Simha | Filmibeat Kannada

  ಅರವಿಂದ ಸ್ವಾಮಿ ಪ್ರಸ್ತುತ ಕಂಗನಾ ರಣೌತ್ ನಟಿಸುತ್ತಿರುವ ತಲೈವಿ ಸಿನಿಮಾದಲ್ಲಿ ಎಂಜಿಆರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Tamil actor Arvind Swamy may act in Chiranjeevi's movie as villain. he already acted as villain in Ram Charan's Dhruva movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X