twitter
    For Quick Alerts
    ALLOW NOTIFICATIONS  
    For Daily Alerts

    ಸುಕುಮಾರ್ 'ಆರ್ಯ 3' ಚಿತ್ರಕ್ಕೆ ಅಲ್ಲು ಅರ್ಜುನ್ ಸ್ಥಾನಕ್ಕೆ ಹೊಸ ನಾಯಕ!

    By ರವೀಂದ್ರ ಕೊಟಕಿ
    |

    2004ರಲ್ಲಿ ಬಿಡುಗಡೆಯಾದ 'ಆರ್ಯ' ಚಿತ್ರದ ಯಶಸ್ಸಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯುವಜನತೆಯನ್ನು ಅಪಾರವಾಗಿ ಆಕರ್ಷಿಸಿದ ಈ ಚಿತ್ರದ ಮೂಲಕವೇ ಅಲ್ಲು ಅರ್ಜುನ್ ಸ್ಟೈಲಿಸ್ಟ್ ಸ್ಟಾರ್ ಆಗಿ ಜನಪ್ರಿಯರಾಗಿದ್ದು. ಇನ್ನು ಈ ಚಿತ್ರದ ಮೇಕಿಂಗ್ ವಿಷಯಕ್ಕೆ ಬರುವುದಾದರೆ ಈ ಚಿತ್ರವನ್ನು 'ದಿಲ್' ರಾಜು ಚಿತ್ರವನ್ನು ನಿರ್ಮಿಸಿದ್ದರು. ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ಸಂಗೀತವನ್ನು ದೇವಿಶ್ರೀ ಪ್ರಸಾದ್ ನೀಡಿದ್ದರು. 'ಆರ್ಯ' ಚಿತ್ರದ ಮೇಕಿಂಗ್ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯಿದೆ. ಇದ್ದು ಅದರ ಪೂರ್ಣ ವಿವರ ಇಲ್ಲಿದೆ

    ಇವತ್ತು ತೆಲುಗು ಚಿತ್ರರಂಗದ ಟಾಪ್ ನಿರ್ದೇಶಕರಲ್ಲಿ ಸುಕುಮಾರ್ ಕೂಡ ಒಬ್ಬರು. ಪ್ರಸ್ತುತ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪುಷ್ಪ' ಚಿತ್ರ ಬಾರಿ ಕುತೂಹಲವನ್ನು ಉಂಟು ಮಾಡಿದ್ದು, ಡಿಸೆಂಬರ್ 17 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇಂದಿನ ತೆಲುಗಿನ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಸುಕುಮಾರ್ ಮೂಲತಃ ಒಬ್ಬ ಮ್ಯಾಥಮೆಟಿಕ್ಸ್ ಲೆಕ್ಚರರ್. ಅವರು ಅತ್ಯಂತ ಪ್ರತಿಭಾವಂತ ಲೆಕ್ಚರರ್ ಆಗಿದ್ದು, ದೊಡ್ಡ ಮಟ್ಟದ ಸಂಬಳವನ್ನೇ ಪಡೆಯುತ್ತಿದ್ದರು. ಆದರೆ ಸಿನೆಮಾ ಮೇಲಿನ ಆಸಕ್ತಿಯಿಂದ ಉಪನ್ಯಾಸಕ ವೃತ್ತಿ ಬಿಟ್ಟು ತಿಂಗಳಿಗೆ ಕೆಲವೇ ಕೆಲವು ಸಾವಿರಗಳನ್ನು ಪಡೆಯುವ ಸಾಧಾರಣ ಅಸಿಸ್ಟೆಂಟ್ ಡೈರೆಕ್ಟರ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

    ಹೀಗೆ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಅವರು ಖ್ಯಾತ ನಿರ್ದೇಶಕ ವಿ.ವಿ.ವಿನಾಯಕ್ ಅವರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಸುಕುಮಾರ್ ದಿಲ್ ರಾಜು ಅವರ ನಿರ್ಮಾಣದ 'ದಿಲ್' ಚಿತ್ರದಲ್ಲಿ

    ವಿ ವಿ ವಿನಾಯಕ್ ಅವರ ಸಹಾಯಕ ನಿರ್ದೇಶಕನಾಗಿ ಅಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ 'ದಿಲ್' ರಾಜು ಅವರ ಒತ್ತಾಯದ ಮೇರೆಗೆ ಅವರಿಗೆ ಒನ್ಲೈನ್ ಕಥೆ ಹೇಳುತ್ತಾರೆ. ಅದೇ 'ಆರ್ಯ' ಸಿನಿಮಾದ ಕಥೆ. ಕಥೆಯೊಳಗಿನ ಹೊಸ ಪಾಯಿಂಟ್ 'ದಿಲ್' ರಾಜು ಅವರಿಗೆ ತುಂಬಾ ಹಿಡಿಸುತ್ತದೆ, ಅದೇ ಒನ್‌ ಸೈಡ್ ಲವರ್ ಆರ್ಯ, ಗೀತಾಳನ್ನು ಪ್ರೀತಿಸುವ ಪರಿ. ತಕ್ಷಣ ಅಡ್ವಾನ್ಸ್ ಕೊಟ್ಟು ಮುಂದಿನ ಚಿತ್ರಕ್ಕೆ ಸುಕುಮಾರ್ ಅವರನ್ನೇ ನಿರ್ದೇಶಕರೆಂದು ಬುಕ್ ಮಾಡಿಕೊಳ್ಳುತ್ತಾರೆ 'ದಿಲ್' ರಾಜು. ಸುಕುಮಾರ್ ಅವರಿಗೆ ಇದನ್ನು ನಂಬಲಿಕ್ಕೆ ಅಸಾಧ್ಯವೆನಿಸುತ್ತದೆ.

    'ಆರ್ಯ' ಚಿತ್ರವನ್ನು ಯಾವ ಹೀರೋಗಾಗಿ ತಯಾರಿಸಿದ ಕಥೆ?

    'ಆರ್ಯ' ಚಿತ್ರವನ್ನು ಯಾವ ಹೀರೋಗಾಗಿ ತಯಾರಿಸಿದ ಕಥೆ?

    ವಾಸ್ತವದಲ್ಲಿ ನಿರ್ದೇಶಕ ಸುಕುಮಾರ್ ಅವರಿಗೆ 'ಆರ್ಯ' ಚಿತ್ರದ ಕಥೆಯನ್ನು ತಯಾರಿಸುವಾಗ ಮನಸ್ಸಿನಲ್ಲಿ ಇದ್ದಿದ್ದು 'ಪವರ್ ಸ್ಟಾರ್' ಪವನ್ ಕಲ್ಯಾಣ್. 'ಆರ್ಯ' ಪಾತ್ರಕ್ಕೆ ಪವನ್ ಕಲ್ಯಾಣ್ ಹೊರತಾಗಿ ಮತ್ತೊಬ್ಬರು ನ್ಯಾಯ ಒದಗಿಸಲು ಸಾಧ್ಯವಿಲ್ಲ ಅಂತ ಸುಕುಮಾರ್ ಬಲವಾಗಿ ನಂಬಿದ್ದರು. ಇದರಂತೆ ಸುಕುಮಾರ್ ಅವರು ಆಗಿನ ಸಂದರ್ಭದಲ್ಲಿ ಚಿರಂಜೀವಿ ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ಸಿನಿಮಾಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತಿದ್ದ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಭೇಟಿಯಾಗಿ ಕಥೆಯನ್ನು ಹೇಳುತ್ತಾರೆ. ಕಥೆ ಕೇಳಿ ಮೆಚ್ಚಿದ ಅಲ್ಲು ಅರವಿಂದ್ ಅವರು 'ಕಥೆ ಹೊಸದಾಗಿದೆ ಇದನ್ನು ಮಾಡಬಹುದು ಆದರೆ ಪವನ್ ಕಲ್ಯಾಣ್ ಅವರ ಸ್ಟಾರ್ ವ್ಯಾಲ್ಯೂಗೆ ಸೂಟ್ ಆಗುವುದಿಲ್ಲ. ಪವನ್ ಕಲ್ಯಾಣ್ ಬದಲಾಗಿ ಈ ಸಿನಿಮಾ ನೀವು ನನ್ನ ಮಗ ಅಲ್ಲುಅರ್ಜುನ್ ಕೈಯಲ್ಲಿ ಮಾಡಿಸಬಹುದು' ಅಂತ ಸೂಚಿಸುತ್ತಾರೆ.

    ಅಲ್ಲು ಅರ್ಜುನ್ ನೋಡಿ ಮೂಗು ಮುರಿಸಿದ್ದ ಸುಕುಮಾರ್

    ಅಲ್ಲು ಅರ್ಜುನ್ ನೋಡಿ ಮೂಗು ಮುರಿಸಿದ್ದ ಸುಕುಮಾರ್

    ಆಗಷ್ಟೇ ಬಿಡುಗಡೆಯಾಗಿ ಯಶಸ್ವಿಯಾಗಿದ್ದ 'ಗಂಗೋತ್ರಿ' ಚಿತ್ರದಲ್ಲಿ ಮುಗ್ಧ ಹಳ್ಳಿ ಹುಡುಗನ ಪಾತ್ರದಲ್ಲಿ ನಿಕ್ಕರ್ ಹಾಕಿಕೊಂಡು ಓಡಾಡುವ ಪಾತ್ರದಲ್ಲಿ ನಟಿಸಿದ್ದ ಅಲ್ಲುಅರ್ಜುನ್ ಅವರನ್ನು ನೋಡಿದ ಸುಕುಮಾರ್ 'ಈ ಹುಡುಗ ಹೀರೋನಾ, 'ಅಂತ ದೀರ್ಘ ರಾಗ ಎಳೆಯುತ್ತಾರೆ. ಏಕೆಂದರೆ 'ಆರ್ಯ' ಸಕ್ಕತ್ ಸ್ಟೈಲಿಸ್ಟ್ ಪಾತ್ರ. ಇದನ್ನು ಅಲ್ಲು ಅರ್ಜುನ್ ಕೈಯಲ್ಲಿ ನಿರ್ವಹಿಸಲು ಆಗುವುದಿಲ್ಲ ಅಂತ ಸುಕುಮಾರ್ ಭಾವಿಸಿದ್ದರು. ಕೊನೆಗೂ ಅಲ್ಲು ಅರವಿಂದ್ ಅವರ ಒತ್ತಾಸೆಯ ಮೇರೆಗೆ ಅಲ್ಲು ಅರ್ಜುನ್ ಅವರನ್ನೇ ನಾಯಕನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಸುಕುಮಾರ್.

    ಸುಕುಮಾರ್ ಲೆಕ್ಕಾಚಾರಗಳೇ ಬುಡಮೇಲು

    ಸುಕುಮಾರ್ ಲೆಕ್ಕಾಚಾರಗಳೇ ಬುಡಮೇಲು

    ಒಲ್ಲದ ಮನಸ್ಸಿನಿಂದಲೇ ಅಲ್ಲು ಅರ್ಜುನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದ ಸುಕುಮಾರ್ 'ಆರ್ಯ' ಪಾತ್ರದಲ್ಲಿ ಅಲ್ಲು ಅರ್ಜುನ್ ಅವರ ಅಭಿನಯ ಕಂಡು ನಿಬ್ಬೆರಗಾದರು. ಕೊನೆಗೆ ಸುಕುಮಾರ ಅವರೇ 'ಒಂದು ವೇಳೆ ಪವನ್ ಕಲ್ಯಾಣ್ ಅಭಿನಯಿಸಿದ್ದರೆ 'ಆರ್ಯ' ಚಿತ್ರ ಅದು ಪವನ್ ಕಲ್ಯಾಣ್ ಸಿನಿಮಾ ಆಗಿರುತ್ತಿತ್ತು. ಅಲ್ಲು ಅರ್ಜುನ್ ಅಭಿನಯಿಸಿದ್ದರಿಂದ ಅದು ಅಲ್ಲು ಅರ್ಜುನ್ ಚಿತ್ರವಾಗದೇ 'ಆರ್ಯ' ಚಿತ್ರವಾಗಿ ಸೂಪರ್ ಹಿಟ್ ಆಯಿತು' ಅಂದು ಅಭಿಪ್ರಾಯಪಟ್ಟರು ಈ ಲೆಕ್ಕದ ಮಾಸ್ಟರ್.

    56 ಕೇಂದ್ರಗಳಲ್ಲಿ 100 ಡೇಸ್

    56 ಕೇಂದ್ರಗಳಲ್ಲಿ 100 ಡೇಸ್

    'ಆರ್ಯ' 2004ರಲ್ಲಿ ಬಿಡುಗಡೆಯಾಗಿ ವರ್ಷದ ಅತಿದೊಡ್ಡ ಯಶಸ್ಸಿನ ಚಿತ್ರವಾಗಿ ದಾಖಲೆ ಮಾಡಿತು. ಅಲ್ಲದೆ ಬಿಡುಗಡೆಯಾದ 56 ಕೇಂದ್ರಗಳಲ್ಲಿ ಶತದಿನೋತ್ಸವವನ್ನು ಕಂಡ ಚಿತ್ರ ದಾಖಲೆಯ ಒಂದು ವರ್ಷ ಪ್ರದರ್ಶನ ಕಂಡಿತು. ಕರ್ನಾಟಕದ ಶಿವಮೊಗ್ಗ, ಬೆಳಗಾವಿಯಂತಹ ತೆಲುಗು, ಪರಿಚಯವಿಲ್ಲದ ಕೇಂದ್ರಗಳಲ್ಲಿ ಕೂಡಾ ಭರ್ಜರಿ ಯಶಸ್ಸನ್ನು ಕಂಡಿತ್ತು. ಇನ್ನು ಇದೆ ಕಾಂಬಿನೇಷನ್‌ನಲ್ಲಿ 'ಆರ್ಯ 2' ಚಿತ್ರ ಕೂಡ 2009ರಲ್ಲಿ ಬಿಡುಗಡೆಯಾಗಿ ಅದ್ಭುತವಾದ ಯಶಸ್ಸನ್ನು ಕಂಡಿತ್ತು.

    'ಆರ್ಯ 3' ಚಿತ್ರಕ್ಕೆ ಚಿತ್ರಕಥೆ ರೆಡಿ, ಹೀರೋ ಯಾರು

    'ಆರ್ಯ 3' ಚಿತ್ರಕ್ಕೆ ಚಿತ್ರಕಥೆ ರೆಡಿ, ಹೀರೋ ಯಾರು

    ಕಳೆದ ವರ್ಷ ಸುಕುಮಾರ್ ಅವರು 'ಆರ್ಯ-3 'ಚಿತ್ರ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಆಗಲೇ ಸುಕುಮಾರ್ -ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ 'ಪುಷ್ಪ' ನಂತರ ಕೂಡ ಮತ್ತೊಂದು ಚಿತ್ರ ಬರುತ್ತದೆ ಅಂತ ಎಲ್ಲರೂ ಭಾವಿಸಿದ್ದರು. ಆದರೆ ಇದೆಲ್ಲದಕ್ಕೂ ಈಗ ಫುಲ್ ಸ್ಟಾಪ್ ಇಡುವಂತೆ ಆರ್ಯ-3' ಚಿತ್ರದ ಬಗ್ಗೆ ಸುಕುಮಾರ್ ಕ್ಲಾರಿಟಿ ಕೊಟ್ಟಿದ್ದಾರೆ.

    'ಆರ್ಯ 3' ಯಾರು ಗೊತ್ತೆ?

    'ಆರ್ಯ 3' ಯಾರು ಗೊತ್ತೆ?

    'ಆರ್ಯ -3'ಚಿತ್ರ ಬರುವುದು ನಿಜ ಆದರೆ ಆ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿಲ್ಲ ಬದಲಾಗಿ ವಿಜಯ್ ದೇವರಕೊಂಡ ಆರ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲು ಅರ್ಜುನ್ ಅವರ ಗಮನಕ್ಕೂ ತರಲಾಗಿದೆ ಅಂತೆ, ಕಥೆ ಕೇಳಿದ ಅಲ್ಲು ಅರ್ಜುನ್ ಕೂಡ ಬಹಳ ಮೆಚ್ಚಿಕೊಂಡು ಸುಕುಮಾರ್ ಅವರ ಈ ಪ್ರಯತ್ನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಎಲ್ಲವೂ ಸುಸೂತ್ರವಾಗಿ ನಡೆದರೆ 'ಪುಷ್ಪ' ಚಿತ್ರದ ಬಿಡುಗಡೆ ನಂತರ ಸುಕುಮಾರ್ ಅವರು ಆರ್ಯ -3'ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. 'ಪುಷ್ಪ' ನಂತರ ವಿಜಯ್ ದೇವರಕೊಂಡ ಕಾಂಬಿನೇಷನ್ನಲ್ಲಿ ಚಿತ್ರ ಮಾಡುವುದಾಗಿ ಹಿಂದೆಯೇ ಸುಕುಮಾರ್ ಘೋಷಿಸಿದ್ದರು. ಆದರೆ ಅದು 'ಆರ್ಯ-3' ಆಗಬಹುದು ಅಂತ ಯಾರು ಆ ಸಮಯದಲ್ಲಿ ಭಾವಿಸಿರಲಿಲ್ಲ ಇನ್ನು ಈ ವಿಚಾರ ಕೇಳಿ ಥ್ರಿಲ್ ಆಗಿರುವ ವಿಜಯ್ ದೇವರಕೊಂಡ ರೌಡಿ ಬೇಬಿ, ಆರ್ಯನ ಅವತಾರದಲ್ಲಿ ವಿಜಯ್ ಸಕ್ಕತ್ತಾಗಿ ಮಿಂಚುತ್ತಾರೆ ಅಂತ ಸಂಭ್ರಮಿಸುತ್ತಿದ್ದಾರೆ.

    English summary
    Sukumar set to direct Arya movie. But this time Allu Arjun not playing as Arya. Vijay Devarkonda is playing Arya character.
    Wednesday, October 20, 2021, 15:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X