'ಪೆದ್ದಿ' ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಆಶಿಕಾ ರಂಗನಾಥ್ ವಿರುದ್ಧ ತಿರುಗಿ ಬಿದ್ದ ರಾಮ್‌ಚರಣ್ ಫ್ಯಾನ್ಸ್!

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ನಾಯಕಿ ಪಾತ್ರ ಪೋಷಣೆ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ. ಈ ಬಗ್ಗೆ ಸ್ವತಃ ಜಾನ್ವಿ ಕಪೂರ್ ಮೌನಕ್ಕೆ ಜಾರಿದ್ದಾರೆ. ನಿರ್ದೇಶಕರು ಕ್ಷಮೆ ಕೋರಿ ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದ್ದಾರೆ. ನಟಿಯರಾದ ಆಶಿಕಾ ರಂಗನಾಥ್ ಹಾಗೂ ಡಿಂಪಲ್ ಹಯಾತಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಂತಹ ವಿಚಾರದಲ್ಲಿ ನಟಿಯರನ್ನು ದೂಷಿಸಬೇಡಿ, ಫಿಲ್ಮ್ ಮೇಕರ್ಸ್ ಮಾಡುವುದು ತಪ್ಪು, ಅವರನ್ನು ದೂಷಿಸಿ ಎಂದಿದ್ದಾರೆ.

'ಪೆದ್ದಿ' ವಿವಾದದ ಬಗ್ಗೆ ದನಿ ಎತ್ತಿದ ಆಶಿಕಾ ರಂಗನಾಥ್ ವಿರುದ್ಧ ರಾಮ್‌ಚರಣ್ ಅಭಿಮಾನಿಗಳು ಗರಂ ಆಗಿ ಟ್ರೋಲ್ ಮಾಡುತ್ತಿದ್ದಾರೆ. ಹೇಳುವುದು ಒಂದು ಮಾಡುವುದು ಒಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ದೃಶ್ಯಗಳಲ್ಲಿ ನಟಿಸಲು ಹೇಳಿದಾಗ ಯಾಕೆ ಒಪ್ಪಿಕೊಳ್ಳುತ್ತೀರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಭರ್ತ ಮಹಾಶಯುಲಕು ವಿಜ್ಞಪ್ತಿ' ಚಿತ್ರದಲ್ಲಿ ಆಶಿಕಾ ಹಾಗೂ ಡಿಂಪಲ್ ಇಬ್ಬರೂ ನಟಿಸಿದ್ದರು. ಸಿಕ್ಕಾಪಟ್ಟೆ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು. ಅಂತಹ ಸಮಯದಲ್ಲಿ ನಿಮಗೆ ಅರಿವು ಇರಲಿಲ್ಲವೇ ಎಂದು ಟ್ರೋಲ್ ಮಾಡಲಾಗ್ತಿದೆ.

Ashika Ranganath Faces Trolls Over Peddi Controversy Remarks Fans Question Double Standards

ಅವಕಾಶ, ಸಂಭಾವನೆಗಾಗಿ ನಟಿಯರು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿಕೊಳ್ಳುತ್ತಾರೆ ಎಂದು ಬರೆದ ಪೋಸ್ಟ್ ಅನ್ನು ಆಶಿಕಾ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಇಂತಹ ವಿಚಾರಗಳಲ್ಲಿ "ನಟಿಯರನ್ನು ದೂಷಿಸಬೇಡಿ. ಇವತ್ತಿಗೂ ಜನ ಇದನ್ನೇ ಕೇಳ್ತಾರೆ ಎಂದು ಭಾವಿಸಿರುವ ವ್ಯವಸ್ಥೆ, ಫಿಲ್ಮ್ ಮೇಕರ್ಸ್ ಅನ್ನು ದೂಷಿಸಿ. ಮಹಿಳಾ ಪಾತ್ರಗಳನ್ನು ಸರಿಯಾಗಿ ಬರೆದಿಲ್ಲ ಎಂದು ಭಾವಿಸಿದರೆ, ಆ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗಿಂತ ಅದರ ಬರವಣಿಗೆ ಹಾಗೂ ಫಿಲ್ಮ್ ಮೇಕರ್ಸ್ ಆಯ್ಕೆಯೇ ಅದಕ್ಕೆಲ್ಲಾ ಕಾರಣ ಎಂದು ಆಶಿಕಾ ಕಾಮೆಂಟ್ ಮಾಡಿದ್ದರು. 'ಪೆದ್ದಿ' ವಿವಾದದಲ್ಲಿ ಜಾನ್ವಿ ಬೆಂಬಲಕ್ಕೆ ನಿಂತಿದ್ದರು.

ಆಶಿಕಾ ಮಾತಿಗೆ ನಟಿ ಡಿಂಪಲ್ ಹಯಾತಿ ದನಿಗೂಡಿಸಿದ್ದಾರೆ. 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯರ ಪಾತ್ರಗಳನ್ನು ಹೇಗೆ ಬರೆಯುತ್ತಿದ್ದಾರೆ, ಆ ಪಾತ್ರ ಮಾಡಿದ್ದಕ್ಕೆ ನಟಿಯನ್ನು ದೂಷಿಸುವ ವಿಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಿರುವ ಸಂತೋಷ ತಂದಿದೆ. ನಟಿಯನ್ನು ದೂಷಿಸಬೇಡಿ ವ್ಯವಸ್ಥೆ ಹಾಗೂ ಜನ ಇದನ್ನೇ ಬಯಸುತ್ತಾರೆ ಭಾವಿಸುವ ಫಿಲ್ಮ್ ಮೇಕರ್ಸ್ ಅನ್ನು ದೂಷಿಸಿ. ಕಲಾವಿದರು ನಮಗೆ ಸಿಗುವ ಅವಕಾಶದಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ನಾವು ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡುತ್ತೇವೆ ಮತ್ತು ವಿಶಾಲ ಪ್ರೇಕ್ಷಕರನ್ನು ತಲುಪಬೇಕು ಎಂದು ಆಶಿಸುತ್ತೇವೆ. ಪಾತ್ರ ಸರಿಯಾಗಿ ಬರದಿದ್ದರೆ ಅದು ನಟಿಯ ತಪ್ಪಲ್ಲ ಎಂದಿದ್ದಾರೆ.

ಆಶಿಕಾ ಹಾಗೂ ಡಿಂಪಲ್ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸಿದ್ದರು. ರವಿತೇಜಾ ಮಡದಿ ಪಾತ್ರದಲ್ಲಿ ಡಿಂಪಲ್ ಹಾಗೂ ಪ್ರೇಯಸಿ ಪಾತ್ರದಲ್ಲಿ ಆಶಿಕಾ ಕಾಣಿಸಿಕೊಂಡಿದ್ದರು. ಆಶಿಕಾ ಬಿಕಿನಿ ತೊಟ್ಟು ದರ್ಶನ ಕೊಟ್ಟಿದ್ದರು. ಸ್ಪೆಷಲ್ ಸಾಂಗ್‌ನಲ್ಲಿ ಇಬ್ಬರೂ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಮಾಡಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಮಾತನ್ನು ಸಾಯಿ ಪಲ್ಲವಿ, ನಿತ್ಯಾ ಮೆನನ್ ಹೇಳಿದ್ದರೆ ಒಪ್ಪುತ್ತಿದ್ದೆವು. ಆದರೆ ನೀವಿಬ್ಬರು ಈಗಾಗಲೇ ಹೀಗೆ ಬಿಂದಾಸ್ ಆಗಿ ನಟಿಸಿ ಈಗ ಹೊಸ ರಾಗ ಹಾಡುತ್ತಿದ್ದೀರಾ? ಎಂದು ಟ್ರೋಲ್ ಮಾಡುತ್ತಿದ್ದಾರೆ.

ಫಿಲ್ಮ್ ಮೇಕರ್ಸ್ ನಿಮಗೆ ಪಾತ್ರದ ಬಗ್ಗೆ ಹೇಳುವಾಗ ಕೊನೆ ಪಕ್ಷ ನೀವು ನಟಿಸುವಾಗ ಕ್ಯಾಮರಾ ಆಂಗಲ್ ಹೇಗಿರುತ್ತದೆ ಎಂದು ಗೊತ್ತಾಗುವುದಿಲ್ಲವೇ? ಆಗ ಕೇಳಬೇಕಿತ್ತು. ಇಷ್ಟವಾಗದಿದ್ದರೆ ನಟಿಸುವುದಿಲ್ಲ ಎಂದು ಅಭ್ಯಂತರ ವ್ಯಕ್ತಪಡಿಸಬೇಕಿತ್ತು. ಅದು ಬಿಟ್ಟು ಈಗ ಈ ರೀತಿ ಹೇಳುವುದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X