ಟಾಲಿವುಡ್‌ನಲ್ಲಿ ಶ್ರೀಲೀಲಾಗೆ ಆಶಿಕಾ ರಂಗನಾಥ್ ಪೈಪೋಟಿ: ನಾಗಾರ್ಜುನ ಜೋಡಿಯಾಗಿ ಪಟಾಕಿ ಪೋರಿ ಎಂಟ್ರಿ

ಕನ್ನಡ ನಟಿಯರು ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಈಗಾಗಲೇ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಲೀಲಾ ಬಳಿಕ ರುಕ್ಮಿಣಿ ವಸಂತ್, ಸಪ್ತಮಿ ಗೌಡ ಟಾಲಿವುಡ್‌ಗೆ ಹೊರಟು ನಿಂತಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಆಶಿಕಾ ರಂಗನಾಥ್.

ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಆಶಿಕಾಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಅಂದ, ಅಭಿನಯ ಜೊತೆಗಿದ್ದರೂ ಅದೃಷ್ಟ ಕೈಕೊಟ್ಟಂತೆ ಕಾಣ್ತಿದೆ. ಅದೇ ಕಾರಣಕ್ಕೋ ಏನೋ ಆಕೆ ಪರಭಾಷಾ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಆಶಿಕಾ ನಟಿಸಿದ ಮೊದಲ ತೆಲುಗು ಸಿನಿಮಾ 'ಅಮಿಗೋಸ್' ಸದ್ದು ಮಾಡಲೇಯಿಲ್ಲ. ಇದೀಗ ನಾಗಾರ್ಜುನ ಜೋಡಿಯಾಗಿ ಆಶಿಕಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

Ashika Ranganath joins cast of Nagarjuna starrer Naa saami ranga

'ನಾ ಸಾಮಿ ರಂಗ' ಚಿತ್ರದಲ್ಲಿ ವರಲಕ್ಷ್ಮಿ ಎನ್ನುವ ಪಾತ್ರದಲ್ಲಿ ಆಶಿಕಾ ರಂಗನಾತ್ ಬಣ್ಣ ಹಚ್ಚಿದ್ದಾರೆ. ಸಣ್ಣ ಟೀಸರ್ ಸಮೇತ ಈ ವಿಚಾವನ್ನು ಚಿತ್ರತಂಡ ಘೋಷಿಸಿದೆ. ವಿಜಯ್ ಬಿನ್ನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ಶ್ರೀನಿವಾಸ ಸಿಲ್ವರ್‌ ಸ್ಕ್ರೀನ್ ಬ್ಯಾನರ್‌ ಅಡಿಯಲ್ಲಿ ಶ್ರೀನಿವಾಸ ಚಿಟ್ಟೂರಿ 'ನಾ ಸಾಮಿ ರಂಗ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಸಂಕ್ರಾಂತಿ ಸಂಭ್ರಮದಲ್ಲಿ 'ನಾ ಸಾಮಿ ರಂಗ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಟಾಲಿವುಡ್‌ನಲ್ಲಿ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಬಳಿಕ ಸ್ಟಾರ್ ನಟರಾಗಿ ನಾಗಾರ್ಜುನ ಗುರ್ತಿಸಿಕೊಂಡಿದ್ದಾರೆ. ಇದೀಗ ನಾಗ್ ಜೋಡಿಯಾಗಿಯೇ ಆಶಿಕಾ ಅವಕಾಶ ಗಿಟ್ಟಿಸಿಕೊಂಡಿರೋದು ವಿಶೇಷ. 'ನಾ ಸಾಮಿ ರಂಗ' ಮಲಯಾಳಂನ 'ಪೊರಿಂಜು ಮರಿಯಮ್ ಜೋಸ್' ರೀಮೆಕ್ ಆಗಿದೆ.

ಅಂದಹಾಗೆ 'ನಾ ಸಾಮಿ ರಂಗ' ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಆಕೆಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಹಾಗಾಗಿ ಈ ಚಿತ್ರಕ್ಕೂ ಆಕೆಯನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಯಾಕೋ ಆಕೆಯ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿವೆ. ಇದೀಗ ಆಶಿಕಾ ರಂಗನಾಥ್ ಸಿನಿಮಾ ಅವಕಾಶ ಪಡೆದಿದ್ದಾರೆ.

ಸಣ್ಣ ಟೀಸರ್ ರಿಲೀಸ್ ಮಾಡಿ ಚಿತ್ರದಲ್ಲಿ ವರಲಕ್ಷ್ಮಿಯಾಗಿ ಆಶಿಕಾ ರಂಗನಾಥ್ ಪರಿಚಯಿಸಲಾಗಿದೆ. ವಯಸ್ಸು 60 ದಾಟಿದ್ರು ನಾಗ್ ಯುವ ನಟರನ್ನು ನಾಚಿಸುವಂತೆ ಚಾರ್ಮ್ ಉಳಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಯಂಗ್ ಆಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮೋಡಿ ಮಾಡುತ್ತಿರುತ್ತಾರೆ. ಈಗ ನಾಗ್ ಜೋಡಿಯಾಗಿ ಆಶಿಕಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಆಶಿಕಾ ರಂಗನಾಥ್ ಸದ್ಯ ಕನ್ನಡದ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನ 'O2' ಸಿನಿಮಾ ಚಿತ್ರೀಕರಣ ಮುಗಿಸಿದೆ. ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಇದೆಲ್ಲದರ ನಡುವೆ ಟಾಲಿವುಡ್ ಕಡೆ ಗಮನ ಹರಿಸಿದ್ದಾರೆ. ಕಲ್ಯಾಣ್ ರಾಮ್ ಜೊತೆ ನಟಿಸಿದ 'ಅಮಿಗೋಸ್' ಸಿನಿಮಾ ಹಿಟ್ ಆಗಲಿಲ್ಲ. ಆದರೆ ಆ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿದ್ದರು.

'ಅಮಿಗೋಸ್' ಚಿತ್ರದ ಹಾಡೊಂದರಲ್ಲಿ ಆಶಿಕಾ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು. ಸೀರೆಯಲ್ಲಿ ಮಿಂಚಿದರೂ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಲಕೃಷ್ಣ ನಟನೆಯ 'ಧರ್ಮಕ್ಷೇತ್ರಂ' ಚಿತ್ರದ ಹಾಡನ್ನು ರೀಮಿಕ್ಸ್ ಮಾಡಲಾಗಿತ್ತು. ಹಾಡಿನಲ್ಲಿ ಕಲ್ಯಾಣ್- ಆಶಿಕಾ ಕೆಮೆಸ್ಟ್ರಿ ವೈರಲ್ ಆಗಿತ್ತು.

More from Filmibeat

English summary
Naa saami ranga team introduced Ashika Ranganathas Varalakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X