ದಿಢೀರ್ ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಹೆಸ್ರು ಟ್ರೆಂಡಿಂಗ್; ಕಾರಣವೇನು?

ಕನ್ನಡ ನಟಿ ಆಶಿಕಾ ರಂಗನಾಥ್‌ಗೆ ದೊಡ್ಡ ಬ್ರೇಕ್ ಸಿಗಲೇ ಇಲ್ಲ. ಕನ್ನಡ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲಿ ಕೂಡ ನಟಿಸೋಕೆ ಆರಂಭಿಸಿದ್ದಾರೆ. ಆದರೆ ದೊಡ್ಡದಾಗಿ ಪ್ರಯೋಜನವಾಗಲಿಲ್ಲ. ಆದರೆ ಇದೀಗ ದಿಢೀರನೆ ಮಿಲ್ಕಿ ಬ್ಯೂಟಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

10 ವರ್ಷಗಳ ಹಿಂದೆ ಆಶಿಕಾ ಚಿತ್ರರಂಗ ಪ್ರವೇಶಿಸಿದ್ದರು. ಸ್ಟಾರ್ ನಟರ ಜೊತೆಗೆ ನಟಿಸೋ ಅವಕಾಶ ಸಿಗಲೇ ಇಲ್ಲ. ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟರು. ಈಗಾಗಲೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿ ಕನ್ನಡ ನಟಿಯರು ಪರಭಾಷೆ ಸಿನಿಮಾಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅದೇ ಸಾಲಿಗೆ ಆಶಿಕಾ ಸೇರಿಕೊಳ್ಳುವ ಹಾದಿಯಲ್ಲಿದ್ದಾರೆ.

Ashika Ranganath s Telugu Film Sparks Viral Milky Beauty Wave on Social Media

ಸದ್ಯ ಸಂಕ್ರಾಂತಿ ಸಂಭ್ರಮದಲ್ಲಿ ಆಶಿಕಾ ರಂಗನಾಥ್ ನಟನೆಯ 'ಭರ್ತ ಮಹಾಶಯಲಕು ವಿಜ್ಞಪ್ತಿ' ಎಂಬ ಸಿನಿಮಾ ಬಿಡುಗಡೆ ಆಗಿದೆ. ರವಿತೇಜಾ ಜೊತೆ ಪಟಾಕಿ ಪೋರಿ ಮಿಂಚಿದ್ದಾರೆ. ಮಾನಸಾ ಶೆಟ್ಟಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಂಡು ಉಡುಗೆ ತೊಟ್ಟು ಆಶಿಕಾ ಗ್ಲಾಮರ್ ಡೋಸ್ ಹೆಚ್ಚಿಸಿದ್ದಾರೆ. ಚಿತ್ರದಲ್ಲಿ ಎಲ್ಲರಿಗಿಂತ ಮಿಲ್ಕಿ ಬ್ಯೂಟಿ ದರ್ಬಾರ್ ಜೋರಾಗಿದೆ. ಇದೇ ಕಾರಣಕ್ಕೆ ತೆಲುಗು ಪ್ರೇಕ್ಷಕರು ಆಶಿಕಾ ಮೋಡಿಗೆ ಮರುಳಾಗಿದ್ದಾರೆ.

'ಭರ್ತ ಮಹಾಶಯಲಕು ವಿಜ್ಞಪ್ತಿ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿರುವ ಕಥೆಯನ್ನೇ ಮತ್ತೊಮ್ಮೆ ಹೇಳುವ ಪ್ರಯತ್ನ ಮಾಡಲಾಗಿದೆ. ಅದಾಗಲೇ ಮದುವೆಯಾಗಿರುವ ರಾಮ ಸತ್ಯ ನಾರಾಯಣ(ರವಿತೇಜ)ನನ್ನು ಪ್ರೀತಿಸುವ ಯುವತಿ ಮಾನಸಾ ಶೆಟ್ಟಿ ಪಾತ್ರದಲ್ಲಿ ಆಶಿಕಾ ಬಣ್ಣ ಹಚ್ಚಿದ್ದಾರೆ.

ಅನಾರ್ಕಲಿ ಎಂಬ ತನ್ನ ವೈನ್ ಬ್ರ್ಯಾಂಡ್ ಡೀಲ್ ಸಂಬಂಧ ಸ್ಪೇನ್‌ಗೆ ರಾಮ್ ಹೋಗುತ್ತಾನೆ. ಅಲ್ಲಿ ದೊಡ್ಡ ಕಂಪನಿಯ ಎಂಡಿ ಮಾನಸಾಳ ಮೋಹ ಪಾಶದಲ್ಲಿ ಬೀಳ್ತಾನೆ. ಆದರೆ ಮಾನಸಾ ವಿಚಾರವನ್ನು ತನ್ನ ಮಡದಿ ಬಾಲಮಣಿ(ಡಿಂಪಲ್ ಹಯಾತಿ)ಗೆ ಗೊತ್ತಾಗದಂತೆ ಮುಚ್ಚಿಡಲು ನೋಡ್ತಾನೆ. ಆದರೆ ಮಾನಸಾ ಏಕಾಏಕಿ ಹೈದರಾಬಾದ್‌ಗೆ ಬಂದುಬಿಡ್ತಾಳೆ. ಒಂದ್ಕಡೆ ಮಡದಿ, ಮತ್ತೊಂದ್ಕಡೆ ಪ್ರಿಯತಮೆ. ಇಬ್ಬರ ನಡುವೆ ಸಿಲುಕಿದ ರಾಮ್ ಕಥೆ ಏನಾಗುತ್ತದೆ ಎನ್ನುವುದು ಇನ್ನುಳಿದ ಕಥೆ.

ಸ್ಪೇನ್‌ನಲ್ಲಿರುವ ಯುವತಿಯ ಪಾತ್ರ ಆಗಿರುವುದರಿಂದ ಕೊಂಚ ಗ್ಲಾಮರಸ್ ಆಗಿ ಆಶಿಕಾ ಮಿಂಚಿದ್ದಾರೆ. ಬೀಚ್‌ನಲ್ಲಿ ತುಂಡು ಬಟ್ಟೆಯಲ್ಲಿ ದರ್ಶನ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ಹೆಸರನ್ನು ಟ್ರೆಂಡ್ ಮಾಡುತ್ತಿದ್ದಾರೆ. ಇನ್ನು ನೆಟ್ಟಿಗನೊಬ್ಬರ ಟ್ವೀಟ್‌ಗೆ ಆಶಿಕಾ ರಿಪ್ಲೇ ಮಾಡಿದ್ದರು. ಹಾಗಾಗಿ ತಮಗೂ ರಿಪ್ಲೇ ಮಾಡಬಹುದು ಎಂದು ಸಾಕಷ್ಟು ಜನ ಆಕೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಳೆ ಸುರಿಸುತ್ತಿದ್ದಾರೆ.

"ನಿಮ್ಮನ್ನು ಮದುವೆ ಆಗಲು ಯಾವ ಫಾರ್ಮ್ ಫಿಲ್ ಮಾಡಬೇಕು ಮೇಡಂ?" ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡಿದ್ದು ಅದಕ್ಕೆ ಆಶಿಕಾ ಪ್ರತಿಕ್ರಿಯಿಸಿದ್ದರು. "ಹಃಹಃ.. ಇಂತಹ ಟ್ವೀಟ್ ಮಾಡಿ ಇಂಪ್ರೆಸ್ ಮಾಡಿದ್ರೆ ಸಾಕು.. ಪರಿಗಣಿಸ್ತೀನಿ" ಎಂದು ತಮಾಷೆಯಾಗಿ ರಿಪ್ಲೇ ಮಾಡಿದ್ದರು. ಹಾಗಾಗಿ ಅದೇ ರೀತಿ ಸಾಕಷ್ಟು ಜನ ಟ್ವೀಟ್ ಮಾಡಿ ಆಕೆಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಒಟ್ಟಾರೆ ನಿಧಾನವಾಗಿ ತೆಲುಗು ಚಿತ್ರರಂಗದಲ್ಲಿ ಆಶಿಕಾ ರಂಗನಾಥ್ ಕ್ರೇಜ್ ಶುರುವಾಗ್ತಿದೆ. ಮುಂದೆ ಚಿರಂಜೀವಿ ನಟನೆಯ 'ವಿಶ್ವಂಭರ' ಚಿತ್ರದಲ್ಲಿ ಕೂಡ ಆಶಿಕಾ ರಂಗನಾಥ್ ನಟಿಸಿದ್ದಾರೆ. ತಮಿಳಿನ 'ಸರ್ದಾರ್- 2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕನ್ನಡದಲ್ಲಿ 'ಗತವೈಭವ' ಚಿತ್ರದಲ್ಲಿ ಕೊನೆಯದಾಗಿ ಆಶಿಕಾ ಬಣ್ಣ ಹಚ್ಚಿದ್ದರು. ಮತ್ತಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

Read more about: ashika ranganath tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X