ತೆಲುಗು ಚಿತ್ರಕ್ಕಾಗಿ ಗ್ಲಾಮರ್ ಡೋಸ್ ಹೆಚ್ಚಿಸಿದ ಆಶಿಕಾ ರಂಗನಾಥ್; ಇದು AI ಅಲ್ಲವೇ ಅಲ್ಲ

ಕನ್ನಡ ನಟಿಯರು ಈಗ ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಬೇರೆ ಭಾಷೆ ಚಿತ್ರರಂಗದಿಂದ ಅವಕಾಶಗಳು ಬಂದಾಗ ನಟಿಸುವುದರಲ್ಲಿ ತಪ್ಪೇನಿಲ್ಲ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್, ನೇಹಾ ಶೆಟ್ಟಿ ಹೀಗೆ ಪರಭಾಷೆ ಸಿನಿಮಾಗಳಲ್ಲಿ ನಟಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಶಿಕಾ ರಂಗನಾಥ್ ಕೂಡ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಪರಭಾಷೆ ಸಿನಿಮಾ ಎಂದಾಗ ಕೆಲವರು ಮೈಚಳಿ ಬಿಟ್ಟು ನಟಿಸುತ್ತಾರೆ ಎನ್ನುವ ಆರೋಪ ಇದೆ. ಆಶಿಕಾ ರಂಗನಾಥ್ ಕೂಡ ತೆಲುಗು ಚಿತ್ರದಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿದ್ದಾರೆ. ಇದೇ ಮೊದಲ ಬಾರಿಗೆ ತುಂಡು ಈಜುಡುಗೆ ಬಟ್ಟೆಯಲ್ಲಿ ಮಿಂಚಿದ್ದಾರೆ. 'ಭರ್ತ ಮಹಾಶಯುಲಕು ವಿಘ್ನಪ್ತಿ' ಎಂಬ ತೆಲುಗು ಚಿತ್ರದಲ್ಲಿ ರವಿತೇಜ ಜೊತೆ ಆಶಿಕಾ ಮಿಂಚಿದ್ದಾರೆ. ಡಿಂಪಲ್ ಹಯಾತಿ ಜೊತೆ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದೆ.

Ashika Ranganath Turns Up the Glamour in Telugu Film Bhartha Mahashayulaku Vighnapathi Teaser Creates Buzz

ಕಿಶೋರ್ ತಿರುಮಲ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಭರ್ತ ಮಹಾಶಯುಲಕು ವಿಘ್ನಪ್ತಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸತತ ಸೋಲುಗಳಿಂದ ಕಂಗೆಟ್ಟ ರವಿತೇಜಾಗೆ ಈ ಸಿನಿಮಾ ಸಕ್ಸಸ್ ತಂದು ಕೊಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಸುನಿಲ್, ಸತ್ಯ, ವೆನ್ನೆಲ ಕಿಶೋರ್, ಸುಧಾಕರ್, ಮುರಳೀಧರ್ ಚಿತ್ರದ ತಾರಾಗಣದಲ್ಲಿದ್ದಾರೆ.

ಪ್ರಸಾದ್ ಮುರೆಲ ಛಾಯಾಗ್ರಹಣ, ಭೀಮ್ಸ್ ಸಿಸಿರೊಲಿಯೊ ಸಂಗೀತ ಈ ಚಿತ್ರಕ್ಕಿದೆ. ಅದಾಗಲೇ ಮದುವೆ ಆಗಿರುವ ವ್ಯಕ್ತಿ ಮತ್ತೊಬ್ಬಳ ಜೊತೆ ರಿಲೇಷನ್‌ಶಿಪ್‌ ಇಟ್ಟುಕೊಂಡರೆ ಮುಂಎ ಪರಿಣಾಮ ಏನೆಲ್ಲಾ ಆಗುತ್ತದೆ ಎನ್ನುವ ಕಥೆ 'ಭರ್ತ ಮಹಾಶಯುಲಕು ವಿಘ್ನಪ್ತಿ' ಚಿತ್ರದಲ್ಲಿದೆ. ಪತಿಯೇ ದೈವ ಎಂದುಕೊಂಡ ಪತ್ನಿ. ಆದರೆ ಆತ ಬೇರೊಬ್ಬಳ ಜೊತೆ ಗುಟ್ಟಾಗಿ ಸುತ್ತಾಡುತ್ತಿದ್ದರೆ ಆ ವಿಷಯ ಬಹಿರಂಗವಾದರೆ ಏನೆಲ್ಲಾ ಆಗುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಈ ಕಥೆ ಬಂದು ಹೋಗಿದೆ. ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ನಡೀತಿದೆ.

ರವಿತೇಜಾ ಪತ್ನಿಯ ಪಾತ್ರದಲ್ಲಿ ಡಿಂಪಲ್ ಹಯಾತಿ ನಟಿಸಿದ್ದಾರೆ. ಪ್ರೇಯಸಿಯಾಗಿ ಆಶಿಕಾ ರಂಗನಾಥ್ ಮಿಂಚಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕನ್ನಡ ನಟಿ ಬಿಂದಾಸ್ ಆಗಿ ಮಿಂಚಿದ್ದಾರೆ. ತುಂಡು ಈಜುಡುಗೆಯಲ್ಲಿ ಕವರ್ ಅಪ್ಸ್ ಸರೋಂಗ್‌ ಸುತ್ತಿಕೊಂಡು ಬೀಚ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಗ್ಲಾಮರಸ್ ಆಗಿ ಆಶಿಕಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೊ ವೈರಲ್ ಆಗ್ತಿದೆ. ಕೆಲವರು ಇದು 'AI' ಇಮೇಜ್ ಇರಬಹುದು ಎಂದು ಭಾವಿಸಿದ್ದಾರೆ. ಆದರೆ ನಿಜವಾಗಿಯೂ ಈ ಚಿತ್ರದಲ್ಲಿ ಆಶಿಕಾ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

2 ವರ್ಷಗಳ ಹಿಂದೆ 'ಅಮಿಗೋಸ್' ಎಂಬ ಸಿನಿಮಾ ಮೂಲಕ ಆಶಿಕಾ ರಂಗನಾಥ್ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ನಾ ಸಾಮಿ ರಂಗಾ' ಚಿತ್ರದಲ್ಲಿ ನಾಗಾರ್ಜುನ ಜೊತೆ ಮಿಂಚಿದ್ದರು. ಇದೀಗ ರವಿತೇಜಾಗೆ ಜೊತೆಯಾಗಿದ್ದಾರೆ. ಮುಂದೆ ಚಿರಂಜೀವಿ ಜೊತೆ 'ವಿಶ್ವಂಭರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈ ವರ್ಷ ಆಶಿಕಾ ನಟಿಸಿದ 'ಗತವೈಭವ' ಸಿನಿಮಾ ಮಾತ್ರ ಬಿಡುಗಡೆ ಆಗಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಯಾಕೋ ಗೆಲ್ಲಲಿಲ್ಲ.

ತಮಿಳಿನ 'ಸರ್ದಾರ್-2' ಚಿತ್ರದಲ್ಲಿ ಕಾರ್ತಿ ಜೊತೆ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಶೀಘ್ರದಲ್ಲೇ ಬಾಲಿವುಡ್ ಪ್ರವೇಶಿಸಿದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಶ್ರೀಲೀಲಾ, ರುಕ್ಮಿಣಿ ವಸಂತ್ ಕೂಡ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 13ಕ್ಕೆ 'ಭರ್ತ ಮಹಾಶಯುಲಕು ವಿಘ್ನಪ್ತಿ' ಸಿನಿಮಾ ತೆರೆಗೆ ಬರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X