ರಾಮ್ ಗೋಪಾಲ್ ವರ್ಮಾ ಕಪಾಳಕ್ಕೆ ಬಾರಿಸಿದ ಸಂದರ್ಶಕಿ!

ಕೆಲ ವರ್ಷಗಳ ಹಿಂದಿನ ವರೆಗೂ ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ಎಂದು ಕರೆಸಿಕೊಳ್ಳುತ್ತಿದ್ದ ರಾಮ್ ಗೋಪಾಲ್ ವರ್ಮಾ ಈಗ 'ವಿಕ್ಷಿಪ್ತ ಜೀವಿ' ಹೆಸರಿನಿಂದ ಕರೆಸಿಕೊಳ್ಳುತ್ತಿದ್ದಾರೆ.

ಸಿನಿಮಾದ ಮೇಲೆ ಹಿಡಿತವೇ ಕಳೆದುಕೊಂಡಿರುವಂತೆ ಕಂಡು ಬರುತ್ತಿರುವ ರಾಮ್ ಗೋಪಾಲ್ ಸಿ-ಗ್ರೇಡ್ ಸಿನಿಮಾಗಳು ಮಾಡುತ್ತಾ ಅವುಗಳನ್ನು ವೆಬ್‌ಸೈಟ್‌ಗಳಲ್ಲಿ ಬಿಡುಗಡೆ ಮಾಡಿ ಹಣ ಮಾಡಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಪ್ರಚಾರದ ಹುಚ್ಚಿಗೂ ಬಿದ್ದಂತಿರುವ ವರ್ಮಾ, ವಿವಾದ ಸೃಷ್ಟಿಸಬಲ್ಲ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದಾರೆ.

ಸಂದರ್ಶಕಿಯ ತೊಡೆಗಳನ್ನು ಹೊಗಳುವುದು, ಮಹಿಳೆಯರ ಅಂಗಾಂಗಗಳನ್ನು ವರ್ಣಿಸುವುದು ಹೀಗೆ ಹಲವು ಚೇಷ್ಟೆಗಳನ್ನು ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾಗೆ ಸಂದರ್ಶಕಿ ಒಬ್ಬರು ಕಪಾಳಕ್ಕೆ ಬಾರಿಸಿದ್ದಾರೆ!

ಆಶುರೆಡ್ಡಿ, ರಾಮ್ ಗೋಪಾಲ್ ವರ್ಮಾ ಸಂದರ್ಶನ ಮಾಡುತ್ತಿದ್ದು ಸಂದರ್ಶನದ ಆರಂಭದಲ್ಲಿಯೇ ಆಶು ರೆಡ್ಡಿಗೆ ನಿಮ್ಮ ತೊಡೆಗಳು ಬಹಳ ಅಂದವಾಗಿವೆ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ, ಇದರಿಂದ ಕೋಪಗೊಂಡ ಆಶು ರೆಡ್ಡಿ ರಾಮ್ ಗೋಪಾಲ್ ವರ್ಮಾ ಕಪಾಳಕ್ಕೆ ಬಾರಿಸಿದ್ದಾರೆ . ಆದರೆ ಆಶು ರೆಡ್ಡಿ ನಿಜವಾಗಿಯೂ ವರ್ಮಾ ಕಪಾಳಕ್ಕೆ ಹೊಡೆದಿಲ್ಲ ಬದಲಿಗೆ ಇದು ಆಶು ರೆಡ್ಡಿ, ರಾಮ್ ಗೋಪಾಲ್ ವರ್ಮಾರನ್ನು ಮಾಡಿರುವ ಸಂದರ್ಶನದ ಪ್ರೋಮೊ ಅಷ್ಟೆ.

ಆಶು ರೆಡ್ಡಿ-ವರ್ಮಾ ಸಂದರ್ಶನ

ಆಶು ರೆಡ್ಡಿ-ವರ್ಮಾ ಸಂದರ್ಶನ

ನಟಿ, ಬಿಗ್‌ಬಾಸ್ ಸ್ಪರ್ಧಿ ಆಶು ರೆಡ್ಡಿ ರಾಮ್ ಗೋಪಾಲ್ ವರ್ಮಾರ ಸಂದರ್ಶನ ಮಾಡುತ್ತಿದ್ದು, ಆ ಸಂದರ್ಶನದ ಪ್ರೊಮೊ ಬಿಡುಗಡೆ ಆಗಿದೆ. ಪ್ರೋಮೊ ನಲ್ಲಿ ಕಾಫಿ ಹೌಸ್‌ನಲ್ಲಿ ಆಶು ರೆಡ್ಡಿ ಕುಳಿತಿರುವಾಗ ಅಲ್ಲಿಗೆ ಹೋಗುವ ವರ್ಮಾ, ಆಶು ರೆಡ್ಡಿ ಮುಂದೆ ಕುಳಿತುಕೊಂಡು ಆಕೆಯ ತೊಡೆಗಳ ಬಗ್ಗೆ, ''ನಿನ್ನ ತೊಡೆಗಳು ನನಗೆ ಬಹಳ ಹಿಡಿಸಿದವು'' ಎನ್ನುತ್ತಾರೆ. ಇದಕ್ಕೆ ಸಿಟ್ಟಾಗಿ ಆಶು ರೆಡ್ಡಿ, ವರ್ಮಾ ಕಪಾಳಕ್ಕೆ ಹೊಡೆಯುತ್ತಾರೆ.

ಪವನ್ ಕಲ್ಯಾಣ್‌ಗೆ ಆಶು ಉಡುಗೊರೆ

ಪವನ್ ಕಲ್ಯಾಣ್‌ಗೆ ಆಶು ಉಡುಗೊರೆ

ಆಶು ರೆಡ್ಡಿ, ರಾಮ್ ಗೋಪಾಲ್ ವರ್ಮಾ ಜೊತೆ ಮಾಡಿರುವ ಸಂದರ್ಶನ ಸೆಪ್ಟೆಂಬರ್ 07ರಂದು ಬಿಡುಗಡೆ ಆಗಲಿದೆ. ಈ ಸಂದರ್ಶನವು ನಾನು ಪವನ್ ಕಲ್ಯಾಣ್‌ಗೆ ನೀಡುವ ಉಡುಗೊರೆ ಎಂದು ಆಶು ರೆಡ್ಡಿ ಪ್ರೋಮೊನಲ್ಲಿ ಹಾಕಿಕೊಂಡಿದ್ದಾರೆ. ವರ್ಮಾ, ಪವನ್ ಕಲ್ಯಾಣ್‌ ಅನ್ನು ಬಹಳ ಟೀಕಿಸುತ್ತಿರುತ್ತಾರೆ ಹಾಗಾಗಿ ವರ್ಮಾಗೆ ಹೊಡೆದು ಅದನ್ನು ಪವನ್‌ಗೆ ಉಡುಗೊರೆ ಎಂದಿದ್ದಾರೆ ಆಶು ರೆಡ್ಡಿ.

ಅರಿಯಾನಾ ಗ್ಲೋರಿ ಜೊತೆಗೆ 'ನಾಟಿ' ಸಂದರ್ಶನ

ಅರಿಯಾನಾ ಗ್ಲೋರಿ ಜೊತೆಗೆ 'ನಾಟಿ' ಸಂದರ್ಶನ

ರಾಮ್ ಗೋಪಾಲ್ ವರ್ಮಾ ಈ ಹಿಂದೆ ತಮ್ಮನ್ನು ಸಂದರ್ಶನ ಮಾಡಿದ ಸಂದರ್ಶಕಿಯರ ಅಂದವನ್ನು ಹೊಗಳಿದ್ದು ಬಹಳ ವೈರಲ್ ಆಗಿತ್ತು. ಅದರಲ್ಲೂ ಅರಿಯಾನಾ ಗ್ಲೋರಿಯ ಅಂದ ಹೊಗಳಿದ್ದು ಬಹಳ ವೈರಲ್ ಆಗಿತ್ತು. ಆ ನಂತರ ಅರಿಯಾನಾ ಗ್ಲೋರಿ, ವರ್ಮಾ ಜೊತೆಗೆ ಜಿಮ್‌ ಒಂದರಲ್ಲಿ ವರ್ಕೌಟ್ ಮಾಡುತ್ತಾ ಸಂದರ್ಶನ ಮಾಡಿದ್ದರು. ಹಲವು ಖಾಸಗಿ ವಿಷಯಗಳು ಆ ಸಂದರ್ಶನದಲ್ಲಿ ಚರ್ಚೆಯಾಗಿದ್ದವು. ಆ ಸಂದರ್ಶನ ಬಹಳ ವೈರಲ್ ಆಗಿತ್ತು. ಹಲವರು ವಿರೋಧವನ್ನೂ ಆ ಸಂದರ್ಶನಕ್ಕೆ ವ್ಯಕ್ತಪಡಿಸಿದ್ದರು.

ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ

ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ

ಇದೀಗ ರಾಮ್ ಗೋಪಾಲ್ ವರ್ಮಾ ಸಂದರ್ಶನ ಮಾಡುತ್ತಿರುವ ಆಶು ರೆಡ್ಡಿ 'ಚಲ್ ಮೋಹನ್ ರಂಗಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ನಂತರವು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಬಿಗ್‌ಬಾಸ್‌ನಲ್ಲಿಯೂ ಭಾಗವಹಿಸಿದ್ದರು. ಇದೀಗ ವರ್ಮಾ ಮುಂದೆ ಸಂದರ್ಶಕಿಯಾಗಿ ಕೂತಿದ್ದಾರೆ.

ವರ್ಮಾ ವಿಡಿಯೋ ವೈರಲ್

ವರ್ಮಾ ವಿಡಿಯೋ ವೈರಲ್

ಇನ್ನು ರಾಮ್ ಗೋಪಾಲ್ ವರ್ಮಾರ ವಿಡಿಯೋ ಒಂದು ಇತ್ತೀಚೆಗೆ ಬಹಳ ವೈರಲ್ ಆಗಿತ್ತು. ವರ್ಮಾ, ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಅದಾಗಿತ್ತು. ಆ ವಿಡಿಯೋ ವೈರಲ್ ಆದ ಬೆನ್ನಲ್ಲೆ. ಆ ವಿಡಿಯೋದಲ್ಲಿರುವುದು ನಾನಲ್ಲ ಎಂದು ವರ್ಮಾ ಹೇಳಿದ್ದರು. ಆದರೆ ವಿಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾನೆ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

More from Filmibeat

English summary
Actress Ashu Reddy slaps Ram Gopal Varma for commenting about her body part. But It is promo of an interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X