ಮಾಸ್ಕ್ ಧರಿಸಿದ 'ರಾಧೆ ಶ್ಯಾಮ್' ಪೋಸ್ಟರ್ ವೈರಲ್
ಟಾಲಿವುಡ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ 20ನೇ ಸಿನಿಮಾ ರಾಧೆ ಶ್ಯಾಮ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಭಾಸ್ ಮತ್ತು ಪೂಜೆ ಹೆಗಡೆ ರೊಮ್ಯಾಂಟಿಕ್ ಪೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Recommended Video
ವಿಶೇಷ ಅಂದರೆ ಸಿನಿಮಾದ ಪೋಸ್ಟರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುವ ಜೊತೆಗೆ ಕೊರೊನಾ ಜಾಗೃತಿ ಮೂಡಿಸುತ್ತಿದೆ. ಅಸ್ಸಾಂ ಪೊಲೀಸರು ಈ ಪೋಸ್ಟರ್ ಅನ್ನು ಬಳಸಿಕೊಂಡು ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ರಾಧೆ ಶ್ಯಾಮ್ ಮುಖಕ್ಕೆ ಮಾಸ್ಕ್ ಧರಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

ರೆಧೆ ಶ್ಯಾಮ್ ಮಾಸ್ಕ್ ಧಿರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸರು " ನೀವು ಮತ್ತು ನಿಮ್ಮ ಪ್ರೀತಿ ಪಾತ್ರರೆಲ್ಲ ಹೊರಗೆ ಹೋಗುವಾಗ ಮಾಸ್ಕ್ ಧರಿಸಿ. ಪ್ರಭಾಸ್ ಅವರಿಗೆ ಕರೆ ಮಾಡಲು ಪ್ರಯತ್ನಿಸಿದೆವು ಆದರೆ ವಿಫಲವಾಗಿದೆ. ಆದರೀಗ ಫೋಟೋಶಾಪ್ ಮೂಲಕ ಸಂದೇಶ ಕಳುಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಮಾಸ್ಕ್ ಧಿರಿಸಿರುವ ರಾಧೆ ಶ್ಯಾಮ್ ಪೋಸ್ಟರ್ ಗೆ ಅಭಿಮಾನಿಗಳ ಮೆಚ್ಟುಗೆ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರಿಗೆ ಅದ್ಭುತವಾದ ಐಡಿಯಾ ಎಂದು ಹೇಳುತ್ತಿದ್ದಾರೆ. ವಿವಿದ ರಾಜ್ಯಗಳಲ್ಲಿ ಪೊಲೀಸರು ಕೊರೊನಾ ಜಾಗೃತಿ ಮೂಡಿಸಲು ಹೊಸ ಮತ್ತು ವಿಶಿಷ್ಟ ಮಾರ್ಗಗಳನ್ನು ಬಳಸುತ್ತಿದ್ದಾರೆ. ಮುಂಬೈ ಪೊಲೀಸರ ಟ್ವಿಟರ್ ಖಾತೆಯು ಸಾಕಷ್ಟು ಮೇಮ್ಸ್ ಮತ್ತು ತಮಾಷೆಯ ಪೋಸ್ಟರ್ ಗಳಿಂದ ತುಂಬಿದೆ. ಮನರಂಜನೆ ರೀತಿಯಲ್ಲಿ ಜನರಿಗೆ ಸಂದೇಶ ನೀಡಲಾಗುತ್ತಿದೆ.


Click it and Unblock the Notifications











