ಅವನೊಂದಿಗೆ ರಕುಲ್ ಮದುವೆಯಾದರೆ ಜೈಲು ಖಚಿತ: ವೇಣು ಸ್ವಾಮಿ

By ರವೀಂದ್ರ ಕೊಟಕಿ

ಕನ್ನಡದ 'ಗಿಲ್ಲಿ' ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ರಕುಲ್ ಪ್ರೀತ್ ಸಿಂಗ್ ಮುಂದೆ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು ಟಾಪ್ ನಟಿಯಾಗಿ ಮಿಂಚಿದಳು. ತೆಲುಗಿನ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆಯಲ್ಲಿ ಅಭಿನಯಿಸಿದ ರಕುಲ್ ತಮಿಳು ಮತ್ತು ಹಿಂದಿಯಲ್ಲಿ ಕೂಡ ಅಭಿನಯಿಸಿದ್ದಾಳೆ. ಅಲ್ಲದೆ ಕೆಲವು ದಿನಗಳ ಹಿಂದೆ ಟಾಲಿವುಡ್ ಡ್ರಗ್ಸ್ ಕೇಸಿನ ವಿಚಾರದಲ್ಲಿ ಹೈದರಾಬಾದಿನಲ್ಲಿ NCB ಅಧಿಕಾರಿಗಳಿಂದ ವಿಚಾರಣೆಯನ್ನು ಕೂಡ ಎದುರಿಸಿದ್ದರು. ವಯಸ್ಸು 31 ಆಯಿತು, ಕೈಯಲ್ಲಿ ಹೆಚ್ಚಿನ ಸಿನಿಮಾಗಳಿಲ್ಲ. ಹೀಗಾಗಿಯೇ ಮದುವೆಯಾಗಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿದ ರಕುಲ್ ತಮ್ಮ 31ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮದುವೆ ವಿಚಾರವನ್ನು ಸೋಶಿಯಲ್ ಮೀಡಿಯಾದ ಮೂಲಕ ಬಹಿರಂಗಪಡಿಸಿದ್ದಾಳೆ.

ವಾಸು ಭಗ್ನಾನಿ ಬಾಲಿವುಡ್‌ನ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. 'ಕೂಲಿ ನಂಬರ್ ಒನ್', 'ಹೀರೋ ನಂಬರ್ ಒನ್,'ಬಡೇ ಮಿಯಾ ಚೋಟೆ ಮಿಯಾ', 'ರೆಹನಾ ಹೈ ತೇರೆ ದಿಲ್ಮೆ' ಅಂತಹ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕರು ಹೌದು. ಇವರ ಮಗ ಜಾಕಿ ಭಗ್ನಾನಿ, 2009ರಲ್ಲಿ ಬಿಡುಗಡೆಯಾದ 'ಕಲ್ ಕಿಸ್ನೆ ದೇಖ' ಚಿತ್ರದ ಮೂಲಕ ನಾಯಕನಟನಾಗಿ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು...ಮುಂದೆ ಓದಿ

 ನಿರ್ಮಾಪಕನ ಮಗನ ಪಾಲಿಗೆ ಸಿಕ್ಕಿಲ್ಲ

ನಿರ್ಮಾಪಕನ ಮಗನ ಪಾಲಿಗೆ ಸಿಕ್ಕಿಲ್ಲ

ಆದರೆ ಇದುವರೆಗೂ ಯಾವುದೇ ದೊಡ್ಡ ಯಶಸ್ಸು ಬಾಲಿವುಡ್‌ನ ಹಿರಿಯ ನಿರ್ಮಾಪಕನ ಮಗನ ಪಾಲಿಗೆ ಸಿಕ್ಕಿಲ್ಲ. ಅನ್ ಸಕ್ಸಸ್ ಫುಲ್ ಹೀರೋ ಆಗಿ ಮುಂದುವರೆದಿರುವ ಜಾಕಿ ಭಗ್ನಾನಿ ಜೀವನದಲ್ಲಿ ಮಾತ್ರ ಅದರಲ್ಲೂ ಲವ್ ವಿಷಯದಲ್ಲಿ ಸಕ್ಸಸ್ ಕಂಡಿದ್ದಾರೆ. ನಟಿ ರಕುಲ್ ಪ್ರೀತ್ ಸಿಂಗ್ ಅವರನ್ನು ಲವ್ ಮಾಡಿರುವ ಜಾಕಿ ಭಗ್ನಾನಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಖುದ್ದಾಗಿ ರಕುಲ್ ಪ್ರೀತ್ ಸಿಂಗ್ ಅವರೇ ಈ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಮತ್ತು ಜಾಕಿ ಭಗ್ನಾನಿ ಮದುವೆಯ ವಿಚಾರವನ್ನು ಬಹಿರಂಗಪಡಿಸಿದ್ದಾಳೆ.

 ರಕುಲ್ ಪ್ರೀತ್ ಸಿಂಗ್- ಜಾಕಿ ಭಗ್ನಾನಿ ವಿವಾಹ

ರಕುಲ್ ಪ್ರೀತ್ ಸಿಂಗ್- ಜಾಕಿ ಭಗ್ನಾನಿ ವಿವಾಹ

ಇನ್ನು ರಕುಲ್ ಪ್ರೀತ್ ಸಿಂಗ್- ಜಾಕಿ ಭಗ್ನಾನಿ ವಿವಾಹದ ಸುದ್ದಿ ಎಲ್ಲೆಡೆ ಹರಿದಾಡುತ್ತದೆ. ಅತ್ತ ಬಾಲಿವುಡ್ ನ ಅಂಗಳದಿಂದ ಇತ್ತ ಟಾಲಿವುಡ್ ನ ಅಂಗಳದವರೆಗೂ ಈ ಮದುವೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈಗ ಇದೇ ಕ್ರಮದಲ್ಲಿ, ಮಾಂತ್ರಿಕ ವಿದ್ಯೆಗಳ ಪರಿಣಿತ ಜ್ಯೋತಿಷ್ಯಗಳಾದ ವೇಣು ಸ್ವಾಮಿಯ ಆಸಕ್ತಿದಾಯಕ ಸಂಗತಿಯನ್ನು ಈ ವಿವಾಹದ ಬಗ್ಗೆ ಹೊರಹಾಕಿದ್ದಾರೆ ಅವರ ಪ್ರಕಾರ "ರಕುಲ್ ಪ್ರೀತ್ ಸಿಂಗ್ ವಿವಾಹ ಜಾಕಿ ಭಗ್ನಾನಿ ಜೊತೆ ನಡೆಯುವ ಸಾಧ್ಯತೆಗಳಿಲ್ಲ. ಹೆಚ್ಚೆಂದರೆ ಅವರಿಬ್ಬರು ಎಂಗೇಜ್ಮೆಂಟ್ ಮಾಡ್ಕೋಬಹುದು ಆದರೆ ಅದು ಮದುವೆ ಹತ್ತಿರಕ್ಕೆ ಬಂದು ನಿಂತು ಬಿಡುತ್ತದೆ. ಒಂದು ವೇಳೆ ಅವರಿಬ್ಬರ ವಿವಾಹವಾದರೆ, ರಕುಲ್ ಪ್ರೀತ್ ''ಸಿಂಗ್ ಅವರು ಜೈಲಿಗೆ ಹೋಗುವುದು ಖಚಿತ".

 ವೇಣು ಸ್ವಾಮಿ ಭವಿಷ್ಯ

ವೇಣು ಸ್ವಾಮಿ ಭವಿಷ್ಯ

ಇದೇ ವೇಣು ಸ್ವಾಮಿ ಸಮಂತಾ ನಾಗಚೈತನ್ಯಅವರು ವಿಚ್ಛೇದನ ಪಡೆಯುವ ಬಗ್ಗೆ ವಿಚಾರವನ್ನು ಬಹಳ ಹಿಂದೆಯೇ ಹೇಳಿದ್ದರು. ಈಗ ಇದೇ ವೇಣು ಸ್ವಾಮಿಯವರು ರಕುಲ್ ಪ್ರೀತ್ ಸಿಂಗ್ ಅವರ ವಿವಾಹವಾದರೆ ದೂರಗಾಮಿ ಪರಿಣಾಮಗಳು ಬಗ್ಗೆ ವಿವರಿಸುವುದು ಹೇಗೆ " ಅವರಿಬ್ಬರ ಜಾತಕಗಳನ್ನು ಪರಿಶೀಲಿಸಿದಾಗ, ಜಾಕಿ ಅವರದು ಮಕರ ರಾಶಿಯಾಗಿದ್ದು, ಶನಿಯ ಗಮನವು ಚಂದ್ರ ಮತ್ತು ಶುಕ್ರನ ಮೇಲೆ ಇರುವುದರಿಂದ ಮದುವೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗುತ್ತದೆ. ರಕುಲ್ ಅವರದ್ದು ಮಿಥುನರಾಶಿಯಾಗಿದ್ದು, ರಾಹು ಮತ್ತು ಕೇತು ಜೊತೆಗಿರುವುದರಿಂದ ಕೌಟುಂಬಿಕವಾದ ಸಂತೋಷಗಳು ಈ ವಿವಾಹದಿಂದ ದೊರೆಯುವುದಿಲ್ಲ.

 ವೇಣು ಸ್ವಾಮಿ ಹೇಳಿದ ಸಂಗತಿ ನಿಜವಾಗಿದೆ

ವೇಣು ಸ್ವಾಮಿ ಹೇಳಿದ ಸಂಗತಿ ನಿಜವಾಗಿದೆ

ಹೆಚ್ಚೆಂದರೆ ಇದು ವಿವಾಹದ ಹತ್ತಿರ ಬಂದು ನಿಂತು ಹೋಗುತ್ತದೆ ಒಂದು ವೇಳೆ ಇವರಿಬ್ಬರು ವಿವಾಹವಾದರು ಆಕೆಗೆ ಬಂಜೆತನದ ಸಮಸ್ಯೆ ಕಾಡಬಹುದು, ಕಾನೂನಿನ ಸಮಸ್ಯೆಗಳು ಕೂಡ ಎದುರಾಗಬಹುದು ಅದಕ್ಕಿಂತ ಹೆಚ್ಚಿಗೆ ಪ್ರಕರಣವೊಂದರಲ್ಲಿ ಆಕೆ ಜೈಲಿಗೆ ಹೋಗುವ ಸಂಭವವೂ ಇದೆ." ಎಂದು ಆಘಾತಕಾರಿ ವಿಷಯಗಳನ್ನು ತಿಳಿಸಿದ್ದಾರೆ. ಸ್ಯಾಮ್ ಚೇತು ವಿಷಯದಲ್ಲಿ ವೇಣು ಸ್ವಾಮಿ ಹೇಳಿದ ಸಂಗತಿ ನಿಜವಾಗಿದೆ. ಇನ್ನು ರಕುಲ್ ವಿಷಯದಲ್ಲಿ ಅವರು ಹೇಳಿದ ಭವಿಷ್ಯ ನಿಜವಾಗುತ್ತದೆಯೇ ಅಂತ ಕಾದುನೋಡಬೇಕಿದೆ.

More from Filmibeat

English summary
Astrologer Venu Swamy About Actress Rakul Preet Singh Marriage Life, rumoured boyfriend Jackky Bhagnani will fear jail term.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X