ಸಮಂತಾ-ನಾಗ ಚೈತನ್ಯ ವಿಚ್ಛೇಧನಕ್ಕೆ ಐದು ವರ್ಷದ ಹಿಂದೆಯೇ ಕಾರಣ ಹೇಳಿದ್ದ ಜ್ಯೋತಿಷಿ

ಸ್ಟಾರ್ ದಂಪತಿಗಳಾದ ಸಮಂತಾ ಹಾಗೂ ನಾಗ ಚೈತನ್ಯ ವಿವಾಹ ವಿಚ್ಛೇಧನದ ಹಂತಕ್ಕೆ ಬಂದಿರುವ ಬಗ್ಗೆ ಎಲ್ಲೆಡೆ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಸಮಂತಾ ಆಗಲಿ ನಾಗ ಚೈತನ್ಯ ಆಗಲಿ ವಿಚ್ಛೇಧನದ ಸುದ್ದಿಗಳನ್ನು ಈವರೆಗೆ ಅಲ್ಲಗಳೆದಿಲ್ಲ.

ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇಧನದ ಸುದ್ದಿಗಳು ಪುಂಖಾನುಪುಂಖವಾಗಿ ಹರಿದಾಡುತ್ತಿವೆ. ಸ್ಟಾರ್ ಜೋಡಿಯ ವಿಚ್ಛೇಧನದ ಬಗ್ಗೆ ಹಲವರು ಹಲವು ವಿಧಗಳಲ್ಲಿ ಮಾತನಾಡುತ್ತಿದ್ದಾರೆ.

ಇದೀಗ ಆಂಧ್ರ-ತೆಲಂಗಾಣಗಳಲ್ಲಿ ಜನಪ್ರಿಯವಾಗಿರುವ ಜೋತಿಷಿಯೊಬ್ಬರು ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯದ ಬಗ್ಗೆ ಕೆಲವು ವರ್ಷಗಳ ಹಿಂದೆಯೇ ಭವಿಷ್ಯ ನುಡಿದ್ದರು, ಆ ವಿಡಿಯೋ ಈಗ ವೈರಲ್ ಆಗಿದೆ. ಇಬ್ಬರ ವಿಚ್ಛೇಧನಕ್ಕೆ ಕಾರಣವೇನು ಎಂಬುದನ್ನು ಆ ವಿಡಿಯೋದಲ್ಲಿ ತಿಳಿಸಿದ್ದಾರೆ.

ಜ್ಯೋತಿಷಿ ವೇಣು ಸ್ವಾಮಿ, ಐದು ವರ್ಷಗಳ ಹಿಂದೆಯೇ ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯದ ಬಗ್ಗೆ ಭವಿಷ್ಯ ನುಡಿದಿದ್ದರು. ವೇಣು ಸ್ವಾಮಿ 2016 ರಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರ ದಾಂಪತ್ಯದ ಬಗ್ಗೆ ನುಡಿದಿದ್ದ ಭವಿಷ್ಯದ ವಿಡಿಯೋ ಸಹ ವೈರಲ್ ಆಗಿದ್ದು, ವಿಡಿಯೋದಲ್ಲಿ ''ಸಮಂತಾ ಹಾಗೂ ನಾಗ ಚೈತನ್ಯ ಖಚಿತವಾಗಿ ದೂರಾಗುತ್ತಾರೆ'' ಎಂದು ಅವರು ಹೇಳಿದ್ದರು.

2016ರಲ್ಲಿಯೇ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ

2016ರಲ್ಲಿಯೇ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ

ಸೆಪ್ಟೆಂಬರ್ 23, 2016 ರಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿರುವ ವಿಡಿಯೊದಲ್ಲಿ ಮಾತನಾಡಿರುವ ವೇಣು ಸ್ವಾಮಿ, ''ನಾಗ ಚೈತನ್ಯ ಹಾಗೂ ಸಮಂತಾ ಜಾತಕದಲ್ಲಿ ಕೆಲವು ದೋಷಗಳಿವೆ. ಇಬ್ಬರೂ ಮದುವೆಯಾದರೂ ದೂರ-ದೂರ ಇರಬೇಕಾಗುತ್ತದೆ. ಅಲ್ಲದೆ ನಾಗ ಚೈತನ್ಯಗೆ ತಂದೆಯಾಗುವ ಯೋಗ ಇಲ್ಲ. ಒಂದೊಮ್ಮೆ ತಂದೆಯಾದರೂ ಮಕ್ಕಳೊಂದಿಗೆ ಅಥವಾ ಸ್ವತಃ ತನ್ನ ತಂದೆಯೊಂದಿಗೆ ವೈಮನಸ್ಯ ಉಂಟಾಗುತ್ತದೆ ಎಂದು 2016 ರ ವಿಡಿಯೋದಲ್ಲಿ ಹೇಳಿದ್ದಾರೆ.

ವಿಚ್ಛೇಧನ ಪಡೆಯುವುದು 100% ಖಚಿತ ಎಂದಿದ್ದ ವೇಣು ಸ್ವಾಮಿ

ವಿಚ್ಛೇಧನ ಪಡೆಯುವುದು 100% ಖಚಿತ ಎಂದಿದ್ದ ವೇಣು ಸ್ವಾಮಿ

ಸಮಂತಾ ಬಗ್ಗೆ ಮಾತನಾಡಿ, ''ಸಮಂತಾ ಅಮವಾಸ್ಯೆಯ ದಿನ ಹುಟ್ಟಿದ್ದು, ಆಕೆಯ ಶುಕ್ರ ನೀಚವಾಗಿದ್ದಾನೆ ಹಾಗಾಗಿ ಆಕೆಗೆ ದಾಂಪತ್ಯ ಸುಖದ ಯೋಗವಿಲ್ಲ. ಸಮಂತಾ ಹಾಗೂ ನಾಗ ಚೈತನ್ಯ ಮದುವೆಯಾದರೂ ಕೆಲವೇ ವರ್ಷಗಳಲ್ಲಿ ವಿಚ್ಛೇಧನ ಪಡೆದುಕೊಳ್ಳುತ್ತಾರೆ. ಇದು ನೂರಕ್ಕೆ ನೂರರಷ್ಟು ನಿಜ. ಇದಕ್ಕೆ ಸಮಂತಾ ಜಾತಕ ಕಾರಣ'' ಎಂದು ಖಚಿತವಾಗಿ ಅಂದಿನ ವಿಡಿಯೋದಲ್ಲಿ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ. ಸಮಂತಾ ಜನ್ಮ ದಿನ ಸಮಯದ ಬಗ್ಗೆ ಗೂಗಲ್‌ನಲ್ಲಿ ಇರುವ ಮಾಹಿತಿಯ ಮೇರೆಗೆ ಜಾತಕ ವಿಮರ್ಶೆ ಮಾಡುತ್ತಿರುವುದಾಗಿ ಅವರು ಮತ್ತೊಂದು ವಿಡಿಯೋದಲ್ಲಿ ಹೇಳಿದ್ದಾರೆ.

ಸಿನಿಮಾ ಅವಕಾಶ ಕಡಿಮೆ ಆಗುತ್ತವೆ ಎಂದಿದ್ದ ವೇಣು ಸ್ವಾಮಿ

ಸಿನಿಮಾ ಅವಕಾಶ ಕಡಿಮೆ ಆಗುತ್ತವೆ ಎಂದಿದ್ದ ವೇಣು ಸ್ವಾಮಿ

ಅದೇ ವಿಡಿಯೋದಲ್ಲಿ ಮಾತನಾಡುತ್ತಾ, ಮದುವೆಯಾದ ಬಳಿಕ ಸಮಂತಾಗೆ ಸಿನಿಮಾದಲ್ಲಿ ಅವಕಾಶಗಳು ಬಹಳವಾಗಿ ಕಡಿಮೆ ಆಗುತ್ತವೆ. ಚಿತ್ರರಂಗದಿಂದ ಅವರ ಹೆಸರೇ ಕಣ್ಮರೆ ಆಗುತ್ತದೆ ಎಂದು ಸಹ ವೇಣು ಸ್ವಾಮಿ ಹೇಳಿದ್ದರು. ಆದರೆ ಅದು ಆಗಿಲ್ಲ. ಬದಲಾಗಿ ಮದುವೆ ಆದ ಮೇಲೆ ಸಮಂತಾ ಹೆಚ್ಚು-ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸಿದರು ಮತ್ತು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ನಾಗ ಚೈತನ್ಯ ಸಹ ಮದುವೆಯಾದ ಬಳಿಕ ಹಲವು ಹಿಟ್ ಸಿನಿಮಾಗಳನ್ನು ನೀಡಿದರು.

ಕಳೆದ ತಿಂಗಳು ವಿಡಿಯೋ ಪ್ರಕಟಿಸಿರುವ ವೇಣು ಸ್ವಾಮಿ

ಕಳೆದ ತಿಂಗಳು ವಿಡಿಯೋ ಪ್ರಕಟಿಸಿರುವ ವೇಣು ಸ್ವಾಮಿ

ಇದೇ ವೇಣುಸ್ವಾಮಿ 2021, ಆಗಸ್ಟ್ 16 ರಂದು ಹೊಸದೊಂದು ವಿಡಿಯೋ ಪ್ರಕಟಿಸಿದ್ದು, ಆ ವಿಡಿಯೋದಲ್ಲಿ ನಾಗ ಚೈತನ್ಯಗೆ 2021 ರ ಸೆಪ್ಟೆಂಬರ್ 23ರಿಂದ ವೃತ್ತಿ ಜೀವನದಲ್ಲಿ ಬಹಳ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಇಷ್ಟು ದಿನ ಅವರಿಗೆ ಹೆಚ್ಚು ಹಿಟ್ ಸಿನಿಮಾಗಳು ಸಿಕ್ಕಿರಲಿಲ್ಲ. ಆದರೆ 2021 ರ ಸೆಪ್ಟೆಂಬರ್ ತಿಂಗಳಿನಿಂದ ಸತತ ನಾಲ್ಕು ವರ್ಷ ಅವರು ಮಾಡುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಲಿವೆ. ವೃತ್ತಿಯಲ್ಲಿ ಬಹಳ ದೊಡ್ಡ ಏಳಿಗೆಯನ್ನು ನಾಗ ಚೈತನ್ಯ ಕಾಣಲಿದ್ದಾರೆ ಎಂದಿದ್ದಾರೆ. ಅದಕ್ಕೆ ಪೂರಕವೆಂಬಂತೆ ಇಂದು (ಸೆಪ್ಟೆಂಬರ್ 24)ರಂದು ನಾಗ ಚೈತನ್ಯ ನಟಿಸಿರುವ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆ ಆಗಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿಯಲ್ಲಿ ಅಮಿರ್ ಖಾನ್ ಜೊತೆಗೂ ನಾಗ ಚೈತನ್ಯ ನಟಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ನಾಗ ಚೈತನ್ಯರ ವೈವಾಹಿಕ ಜೀವನದ ಬಗ್ಗೆ ವೇಣು ಸ್ವಾಮಿ ಏನೂ ಹೇಳಿಲ್ಲ.

More from Filmibeat

English summary
Astrologer Venu Swamy predicted about Samantha Naga Chaithanya's divorce five years ago. He also told about Naga Chaithanya's acting career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X