ವೇಣು ಸ್ವಾಮಿ ಭವಿಷ್ಯ ನಿಜವಾಯ್ತಾ? 'ಲೈಗರ್' ಸೋಲಿಗೆ ಅದೇ ಕಾರಣನಾ?

ಟಾಲಿವುಡ್ ನಟ ವಿಜಯ್ ದೇವರಕೊಂಡ ಸಿನಿಮಾಗಳು ಸಾಲು ಸಾಲಾಗಿ ಸೋಲುಂಡಿದೆ. ಇದರ ಬೆನ್ನಲ್ಲೇ ಪ್ರಮುಖ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗ್ತಿದೆ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. ವಿಜಯ್ ಜಾತಕದಲ್ಲಿರುವ ದೋಷದಿಂದಲೇ ಹೀಗೆಲ್ಲಾ ಆಗುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ವಿಜಯ್ ದೇವರಕೊಂಡ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. 'ಅರ್ಜುನ್ ರೆಡ್ಡಿ' ಹಾಗೂ 'ಗೀತಾಗೋವಿಂದಂ' ಸಿನಿಮಾಗಳಿಂದ ಸಿಕ್ಕ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. 'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿರಬಹುದು. ಆದರೆ ಆ ಸಿನಿಮಾ ಪ್ರಮೋಷನ್ ಸಮಯದಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಆತನ ಕ್ರೇಜ್ ಹೇಗಿತ್ತು ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು. ಬಾಲಿವುಡ್ ಮಂದಿ ಕೂಡ ಈ ತೆಲಂಗಾಣ ಯಂಗ್‌ ಹೀರೊ ಸಿನಿಮಾಗಳಿಗೆ ಕಾಯುತ್ತಿರುವುದು ಸುಳ್ಳಲ್ಲ. 'ಗೀತಾ ಗೋವಿಂದಂ' ನಂತರ ವಿಜಯ್ ನಟಿಸಿದ ಯಾವುದೇ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ.

ಆಗಸ್ಟ್ 25ಕ್ಕೆ ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ 'ಲೈಗರ್' ಸಿನಿಮಾ ಆಗಿತ್ತು. ಆ ಸಿನಿಮಾ ಡಿಸಾಸ್ಟರ್ ಆಗಿತ್ತು. ಪುರಿ ನಿರ್ದೇಶನದ ಈ ಸಿನಿಮಾ ವಿಜಯ್ ಕೆರಿಯರ್ ನಲ್ಲೇ ದೊಡ್ಡ ಫ್ಲಾಪ್ ಆಗಿದ್ದು ಗೊತ್ತೇ ಇದೆ. 'ಲೈಗರ್'ಗೂ ಹಿಂದೆ ಬಂದ ನಾಲ್ಕು ಚಿತ್ರಗಳೂ ಸೋತವು.

ವಿಜಯ್ ಕರಿಯರ್‌ ಹಿನ್ನಡೆಗೆ ಕಾರಣ ಏನು?

ವಿಜಯ್ ಕರಿಯರ್‌ ಹಿನ್ನಡೆಗೆ ಕಾರಣ ಏನು?

ವಿಜಯ್ ದೇವರಕೊಂಡ ಕೆರಿಯರ್ ಹಿನ್ನಡೆಗೆ ಕಾರಣವೇನು ಎಂದು ಕೆಲ ದಿನಗಳ ಹಿಂದೆ ವೇಣು ಸ್ವಾಮಿ ಹೇಳಿದ್ದರು. ವಿಜಯ್ ಅವರ ಜಾತಕದಿಂದಾಗಿ ಸತತವಾಗಿ ಸಿನಿಮಾಗಳಯ ಸೋಲುತ್ತಿವೆ ಎಂದು ಅವರು ವಿವರಿಸಿದ್ದರು. 'ಲೈಗರ್' ಸಿನಿಮಾಗಿಂದ ಮುಂಚೆ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಸೋತಾಗಲೇ ವೇಣು ಸ್ವಾಮಿ ಈ ರೀತಿ ಹೇಳಿದ್ದರು. ಆದರೆ ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಮುಂದೆ ವಿಜಯ್‌ಗೆ ಸಕ್ಸಸ್ ಸಿಗಲ್ಲ!

ಮುಂದೆ ವಿಜಯ್‌ಗೆ ಸಕ್ಸಸ್ ಸಿಗಲ್ಲ!

ವಿಜಯ್ ದೇವರಕೊಂಡ ಅವರ ಜಾತಕ ಮತ್ತೊಬ್ಬ ಉದಯ್ ಕಿರಣ್ ಇದ್ದಂತೆ, ಆತನ ಜಾತಕದಲ್ಲಿ ದೊಡ್ಡದೇನೂ ಇಲ್ಲ ಎಂದು ವೇಣು ಸ್ವಾಮಿ ಹೇಳಿದ್ದರು. ಕೆಲವು ಅನಿರೀಕ್ಷಿತ ಹಿಟ್‌ಗಳು ಬಂದಿದ್ದು, ಇನ್ನು ಮುಂದೆ ಸರಣಿ ಫ್ಲಾಪ್ ಸಿನಿಮಾಗಳು ಬರಲಿವೆ ಎಂದು ತಿಳಿಸಿದ್ದರು. ಕಳೆದ ವರ್ಷ ಜನವರಿಯಿಂದ ವಿಜಯ್ ದೇವರಕೊಂಡಗೆ ಅಷ್ಟಮ ಶನಿ ಶುರುವಾಗಿರುವುದರಿಂದ ದೊಡ್ಡ ಹೀರೋಗಳ ಜೊತೆ ಹೋಲಿಕೆ ಮಾಡುವ ಜಾತಕ ಆತನದ್ದಲ್ಲ ಎಂದು ವೇಣು ಸ್ವಾಮಿ ಹೇಳಿದ್ದರು.

ವಿಜಯ್‌ನ ಯಾರು ತುಳಿಯುತ್ತಿಲ್ಲ

ವಿಜಯ್‌ನ ಯಾರು ತುಳಿಯುತ್ತಿಲ್ಲ

ದೇವರಕೊಂಡನ ತುಳಿಯುತ್ತಿದ್ದಾರೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಈ ಮಾತಿಗೆ ವೇಣು ಸ್ವಾಮಿ "ಅಷ್ಟಕ್ಕೂ ಆತನನ್ನು ತುಳಿಯುವ ಅವಶ್ಯಕತೆ ಯಾರಿಗಿದೆ. ಯಾಕೆ ತುಳಿಯುತ್ತಾರೆ? 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಬಂದಾಗ ಯಾರಾದರೂ ನಿಲ್ಲಿಸಿದ್ದರಾ? ಥಿಯೇಟರ್‌ ಕೊಡದೇ ಸಮಸ್ಯೆ ಮಾಡಿದ್ರಾ? ಇಲ್ಲವಲ್ಲ. ಆತನನ್ನು ತುಳಿಯುವಂತಹ ಸಿನಿಮಾ ಬಂದಿಲ್ಲವಲ್ಲ ಎಂದು ಸೆಲೆಬ್ರೆಟಿ ಜ್ಯೋತಿಷಿ ಹೇಳಿದ್ದರು. ಅಂದು ಹೇಳಿದ್ದ ಮಾತುಗಳನ್ನು 'ಲೈಗರ್' ಸೋಲಿನ ಜೊತೆ ಹೋಲಿಸಿ ಈಗ ವೈರಲ್ ಮಾಡಿದ್ದಾರೆ.

 ವೇಣುಸ್ವಾಮಿ ಭವಿಷ್ಯ ನಿಜವಾಗಿತ್ತು

ವೇಣುಸ್ವಾಮಿ ಭವಿಷ್ಯ ನಿಜವಾಗಿತ್ತು

ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯವನ್ನು ಕೆಲವರು ನಂಬಲು ಕಾರಣ, ಆತ ಈ ಹಿಂದೆ ಹೇಳಿದ್ದಂತಹ ಕೆಲವರ ಭವಿಷ್ಯ ನಿಜವಾಗಿತ್ತು. ಅದರಲ್ಲೂ ಸಮಂತಾ- ನಾಗಚೈತನ್ಯ ಡೈವೋರ್ಸ್‌ ತಗೋತ್ತಾರೆ ಎಂದು ವೇಣುಸ್ವಾಮಿ ಮೊದಲೇ ಹೇಳಿದ್ದರು. ಇವರಿಬ್ಬರು ದೂರಾಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಕಳೆದ ವರ್ಷ ಇಬ್ಬರು ಡೈವೋರ್ಸ್ ಘೋಷಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಇನ್ನು ರಶ್ಮಿಕಾ ಸಕ್ಸಸ್ ಬಗ್ಗೆಯೂ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು.

More from Filmibeat

English summary
Astrologer Venu Swamy sensational comments viral on Liger Actor Vijay Devarakonda. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X