Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"2023ರಲ್ಲಿ ಪ್ರಭಾಸ್‌ಗೆ ಸಂಕಷ್ಟ ಕಾದಿದೆ.. ಆತ ಜಾತಕ ನಂಬಲ್ಲ ಅದೇ ದೊಡ್ಡ ಸಮಸ್ಯೆ": ವೇಣುಸ್ವಾಮಿ
ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಸಂಚನಲ ಸೃಷ್ಟಿಸಿರುವ ಪ್ರಭಾಸ್‌ಗೆ ಇತ್ತೀಚೆಗೆ ಸಕ್ಸಸ್ ಅಷ್ಟಾಗಿ ಸಿಗುತ್ತಿಲ್ಲ. ಆರೋಗ್ಯ ಸಮಸ್ಯೆ ಕೂಡ ಎದುರಾಗಿದೆ ಎನ್ನಲಾಗ್ತಿದೆ. ಹೊಸ ವರ್ಷದಲ್ಲಿ ಯಂಗ್ ರೆಬಲ್ ಸ್ಟಾರ್‌ಗೆ ಮತ್ತಷ್ಟು ಸಂಕಷ್ಟ ಕಾದಿದೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದಾರೆ.
ಬಹಳ ವರ್ಷಗಳಿಂದ ವೇಣುಸ್ವಾಮಿ ಟಾಲಿವುಡ್ ಸೆಲೆಬ್ರೆಟಿಗಳ ಬಗ್ಗೆ ಈ ರೀತಿ ಏನೇನೇ ಭವಿಷ್ಯ ಹೇಳುತ್ತಿದ್ದಾರೆ. ಆದರೆ ಆರಂಭದಲ್ಲಿ ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆತ ಹೇಳಿದಂತೆ ನಾಗಚೈತನ್ಯಾ- ಸಮಂತಾ ದಂಪತಿ ವಿಚ್ಛೇದನ ಪಡೆದು ದೂರಾದ ಮೇಲೆ ಕೆಲವರು ನಂಬುವಂತಾಗಿದೆ. ಸದ್ಯ ಪ್ರಭಾಸ್ ಭವಿಷ್ಯದ ಬಗ್ಗೆ ವೇಣುಸ್ವಾಮಿ ಹೇಳಿರುವ ಮಾತುಗಳು ಅಭಿಮಾನಿಗಳಿಗೆ ಆತಂಕ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವೈರಲ್ ಆಗುತ್ತಿದೆ.
ಪ್ರಭಾಸ್
ಅಭಿಮಾನಿಗಳ
ದೆಸೆಯಿಂದ
ಕ್ರ್ಯಾಶ್
ಆದ
ಆಹಾ
ಒಟಿಟಿ!
ಸಾಮಾನ್ಯವಾಗಿ ನಾನು ಸೆಲೆಬ್ರೆಟಿಗಳ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಿಲ್ಲ. ಆದರೆ ಜಾತಕ ಪ್ರಚಾರ ಅವರ ವೈಯಕ್ತಿಕ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎನ್ನುವುದನ್ನು ಹೇಳುವುದಾಗಿ ವೇಣುಸ್ವಾಮಿ ತಿಳಿಸಿದ್ದಾರೆ.

ನಾನು ಅಂದು ಹೇಳಿದಾಗ ನಂಬಲಿಲ್ಲ
"ಪ್ರಭಾಸ್ ಸಿನಿಕರಿಯರ್, ವಿಜಯ್ ದೇವರಕೊಂಡ ಸಕ್ಸಸ್, ರಶ್ಮಿಕಾ ಮಂದಣ್ಣ ಸಿನಿಕರಿಯರ್, ಸಮಂತಾ ನಾಗಚೈತನ್ಯ ದಾಂಪತ್ಯ ಜೀವನ ಹಾಗೂ ರಾಮ್‌ಚರಣ್- ಉಪಾಸನಾ ಸಂತಾನ ತಡವಾಗುತ್ತದೆ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ನಾನು ಹೇಳಿದಾಗ ಕೆಲವರು ನಕ್ಕಿದ್ದರು, ಟ್ರೋಲ್ ಮಾಡಿದ್ದರು, ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಾನು ಯಾಕೆ ಹೇಳಿದ್ದೆ ಎನ್ನುವುದನ್ನು ಅರ್ಥ ಮಾಡಿಕೊಂಡಿರಲಿಲ್ಲ" ಎಂದು ವೇಣುಸ್ವಾಮಿ ಹೇಳಿದ್ದಾರೆ.

ಪ್ರಭಾಸ್‌ಗೆ ಆರೋಗ್ಯ ಸಮಸ್ಯೆ!
ನಟ ಪ್ರಭಾಸ್ ಕುಂಟುತ್ತಾ ಓಡಾಡಿದ್ದನ್ನು ನಾವು ಇತ್ತೀಚೆಗೆ ವಿಡಿಯೋಗಳಲ್ಲಿ ನೋಡಿದ್ದೆವು. ಅವರ ಆರೋಗ್ಯ ಸಮಸ್ಯೆ ಏನಾದರೂ ಇದ್ಯಾ? ಎಂದು ನಿರೂಪಕ ಕೇಳಿದ್ದಕ್ಕೆ "ಪ್ರಭಾಸ್‌ಗೆ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಸದ್ಯಕ್ಕೆ ಶನಿ, ಗುರು ಸ್ಥಾನ ಬದಲಾಗುತ್ತಿರುವುದರಿಂದ ಪ್ರಭಾಸ್ ಜಾತಕದಲ್ಲಿ ಸಮಸ್ಯೆ ಕಾಣಿಸುತ್ತದೆ. ಪ್ರಭಾಸ್‌ದು ವೃಶ್ಚಿಕ ರಾಶಿ, ಅಷ್ಟಾರ್ಥಕ ಶನಿ ಒಂದು ಕಡೆ, ಅಷ್ಟಮ ಗುರು ಮತ್ತೊಂದು ಕಡೆ, ಷಷ್ಠಮ ಗುರು ಮತ್ತೊಂದು ಕಡೆ ಇರುವುದರಿಂದ ಪ್ರಭಾಸ್ ಸಮಸ್ಯೆ ಎದುರಿಸುವ ಸಾಧ್ಯೆತೆ ಇದೆ ಎಂದಿದ್ದಾರೆ.

ಪ್ರಭಾಸ್ ಸಮಸ್ಯೆ ಏನಂದ್ರೆ?
"ಪ್ರಭಾಸ್ ದೊಡ್ಡ ಸಮಸ್ಯೆ ಏನು ಎಂದರೆ ಆತ ಜಾತಕ ನಂಬುವುದಿಲ್ಲ. ಆತ ಜಾತಕವನ್ನೇ ನಂಬದೇ ಮಾಡಿದ ಜಾತಕದ ಸಿನಿಮಾ(ರಾಧೆಶ್ಯಾಮ್) ಫ್ಲಾಪ್ ಆಯಿತು. ದೇವರ ಮೇಲೆ, ಜಾತಕದ ಮೇಲೆ ನಂಬಿಕೆ ಇರಬೇಕು. ಇಲ್ಲದೇ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ರಾಜ ಮನೆತನದವರಿಗೆ ದೇವರು, ಜಾತಕದ ಬಗ್ಗೆ ಬಹಳ ನಂಬಿಕೆ ಇರುತ್ತದೆ. ಆದರೆ ಪ್ರಭಾಸ್ ನಂಬುವುದಿಲ್ಲ. ಇದರಿಂದ ಮತ್ಯಾರಿಗೂ ಸಮಸ್ಯೆ ಇಲ್ಲ. ಅದು ಅವರಿಗೆ ಹಾಗೂ ಅವರನ್ನು ನಂಬಿಕೊಂಡಿರುವವರಿಗೂ ಸಮಸ್ಯೆ. 2023ರಲ್ಲೂ ಸಂಕಷ್ಟ ತಪ್ಪಿದ್ದಲ್ಲ" ಎಂದು ವಿವರಿಸಿದ್ದಾರೆ.

ಬಾಲಯ್ಯ ಶೋನಲ್ಲಿ ಪ್ರಭಾಸ್
ಅಹಾ ಓಟಿಟಿಗಾಗಿ ನಟ ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್- 2' ಶೋನಲ್ಲಿ ಈ ವಾರ ಪ್ರಭಾಸ್ ಎಪಿಸೋಡ್ ಸ್ಟ್ರೀಮಿಂಗ್ ಆಗುತ್ತಿದೆ. ಬಹಳ ಹಿಂದೆಯೇ ಶೋ ಶೂಟ್ ಆಗಿತ್ತು. ಅದಕ್ಕೆ ಸಂಬಂಧಿಸಿದ ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಇನ್ನು ಅಭಿಮಾನಿಗಳು ಒಮ್ಮೆಲೆ ಶೋ ನೋಡಲು ಮುಗಿಬಿದ್ದಿದರಿಂದ ಸರ್ವರ್ ಕ್ರ್ಯಾಶ್ ಆಗಿತ್ತು. ನಂತರ ಅದನ್ನು ಸರಿಪಡಿಸಿ ಮತ್ತೆ ಶೋ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಸದ್ಯ ಪ್ರಭಾಸ್ 'ಸಲಾರ್', 'ಪ್ರಾಜೆಕ್ಟ್-K' ಹಾಗೂ 'ರಾಜಾ ಡೀಲಕ್ಸ್' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.