ಅಯ್ಯೋ..! 'ಶ್ರೀಮನ್ನಾರಾಯಣ' ಸಿನಿಮಾ ಕೂಡ ಪೈರಸಿ ಆಗೋಯ್ತು
Recommended Video
ಚಿತ್ರರಂಗದ ಶತ್ರು ಪೈರಸಿ. ಚಿತ್ರತಂಡ ಎಷ್ಟೇ ಬಲಿಷ್ಟವಾಗಿದ್ದರೂ ಪೈರಸಿಯನ್ನು ಮಾತ್ರ ತಡೆಯಲು ಆಗುತ್ತಿಲ್ಲ. ಇದೀಗ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗೆ ಪೈರಸಿ ಸಮಸ್ಯೆ ಎದುರಾಗಿದೆ.
ಮೂರು ವರ್ಷದ ಶ್ರಮದ ನಂತರ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಬಿಡುಗಡೆ ಆಗಿದ್ದು, ಜನ ಕೂಡ ಮೆಚ್ಚಿಕೊಂಡಿದ್ದಾರೆ. ಬಿಗ್ ಬಜೆಟ್ ನ ಈ ಸಿನಿಮಾ ನೋಡಿ ಹೆಮ್ಮೆ ಪಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಸಿನಿಮಾ ರಿಲೀಸ್ ಆಗಿದೆ. ಭಾರತದಾದ್ಯಂತ ಅನೇಕ ಭಾಗಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಹೀಗಿರುವಾಗಲೇ, ಸಿನಿಮಾ ಪೈರಸಿ ಆಗಿದೆ. ಆನ್ ಲೈನ್ ನಲ್ಲಿ ಇಡೀ ಸಿನಿಮಾ ಲೀಕ್ ಆಗಿದೆ. ಒಂದು ಕಡೆ ಸಿನಿಮಾದ ಪ್ರಚಾರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ತಂಡ ನಿರತವಾಗಿದ್ದರೆ, ಇತ್ತ ಕಿಡೀಗೇಡಿಗಳು ಇಂತಹ ಕೆಲಸ ಮಾಡಿದ್ದಾರೆ.

ತೆಲುಗು ವರ್ಷನ್ ಲೀಕ್
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕಳೆದ ಶುಕ್ರವಾರ ಕನ್ನಡದಲ್ಲಿ ಬಿಡುಗಡೆಯಾಗಿದೆ. ನಿನ್ನೆ (ಜನವರಿ 1) ತೆಲುಗಿನಲ್ಲಿ 'ಅತಡೇ ಶ್ರೀಮನ್ನಾರಾಯಣ' ಹೆಸರಿನಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲಿ ಬಿಡುಗಡೆಯಾದ ದಿನವೇ ಸಿನಿಮಾ ಪೈರಸಿ ಆಗಿದೆ. ಆನ್ ಲೈನ್ ನಲ್ಲಿ ಇಡೀ ಸಿನಿಮಾ ಲೀಕ್ ಆಗಿದೆ.

MovieRulz ಎಂಬ ವೆಬ್ ಸೈಟ್
MovieRulz ಎಂಬ ವೆಬ್ ಸೈಟ್ ನಲ್ಲಿ 'ಅತಡೇ ಶ್ರೀಮನ್ನಾರಾಯಣ' ಸಿನಿಮಾ ಪೈರಸಿ ಆಗಿದೆ. ಥಿಯೇಟರ್ ಪ್ರಿಂಟ್ ಇದಾಗಿದೆ. ಸೌತ್ ಇಂಡಿಯಾ ಹಾಗೂ ಹಿಂದಿ ಸಿನಿಮಾಗಳನ್ನು ಈ ವೆಬ್ ಸೈಟ್ ಟಾರ್ಗೆಟ್ ಮಾಡುತ್ತದೆ. ಪ್ರಮುಖವಾಗಿ ತೆಲುಗು ಸಿನಿಮಾಗಳು ಇಲ್ಲಿ ಲೀಕ್ ಆಗುತ್ತದೆ. ಇದೇ ವೆಬ್ ಸೈಟ್ ನಲ್ಲಿ 'ಅತಡೇ ಶ್ರೀಮನ್ನಾರಾಯಣ' ಚಿತ್ರ ಪೈರಸಿ ಆಗಿದೆ.

ತೆಲುಗಿನಲ್ಲೂ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ
'ಅತಡೇ ಶ್ರೀಮನ್ನಾರಾಯಣ' ಸಿನಿಮಾಗೆ ತೆಲುಗಿನಲ್ಲಿಯೂ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಹಾಲಿವುಡ್ ಸಿನಿಮಾದ ರೀತಿ ಈ ಚಿತ್ರ ಇದೆ. ಬೇರೆ ಜಾನರ್ ಹೊಂದಿದೆ. ಹಿನ್ನಲೆ ಸಂಗೀತ, ಸಿನಿಮಾಟೋಗ್ರಾಫಿ ಸೂಪರ್. ರಕ್ಷಿತ್ ಶೆಟ್ಟಿ ಅಂದದ ಕಾಮಿಡಿ ಮಾಡಿದ್ದಾರೆ. ಟೆಕ್ನಿಷಿಯನ್ ಕೆಲಸ ಚೆನ್ನಾಗಿದೆ. ಹೀಗೆ 'ಅತಡೇ ಶ್ರೀಮನ್ನಾರಾಯಣ' ಸಿನಿಮಾವನ್ನು ನೋಡಿದ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಕ್ರಮ ಕೈಗೊಳ್ಳುತ್ತದೆಯೇ ಚಿತ್ರತಂಡ
ಸಿನಿಮಾ ಪೈರಸಿ ಆಗಿರುವುದು, ಚಿತ್ರತಂಡದ ಗಮನಕ್ಕೆ ಬಂದಿದೆಯೇ ಎನ್ನುವುದು ತಿಳಿದಿಲ್ಲ. ಈ ಸುದ್ದಿ ತಿಳಿದ ನಂತರ ಚಿತ್ರತಂಡ ಹೇಗೆ ಪೈರಸಿ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ತೆಲುಗಿನ ನಂತರ ಸಿನಿಮಾ ಮಲೆಯಾಳಂನಲ್ಲಿ ಜನವರಿ 3 ರಂದು ಹಾಗೂ ಹಿಂದಿ ಭಾಷೆಗಳಲ್ಲಿ ಜನವರಿ 17 ಬಿಡುಗಡೆ ಆಗಲಿದೆ.


Click it and Unblock the Notifications











