For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತೆಯೊಂದಿಗೆ ಅಸಭ್ಯ ವರ್ತನೆ, ಪ್ರಶ್ನಿಸಿದ್ದಕ್ಕೆ 'ಬಿಗ್ ಬಾಸ್' ವಿನ್ನರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ

  |

  ಗಾಯಕ ಹಾಗೂ ತೆಲುಗು ಬಿಗ್ ಬಾಸ್-3 ವಿನ್ನರ್ ರಾಹುಲ್ ಸಿಪ್ಲಿಗುಂಜ್ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದೆ. ಗಾಯಕ ರಾಹುಲ್ ಸ್ನೇಹಿತರೊಂದಿಗೆ ಹೈದರಾಬಾದ್ ನ ಗಚ್ಚಿಬೋಲಿ ಪಬ್ ಗೆ ತೆರಳಿದ್ದಾಗ ಈ ಘಟನೆ ನಡೆಸಿದೆ. ಪಬ್ ನಲ್ಲಿ ರಾಹುಲ್ ಗೆಳೆತಿಯ ಜೊತೆ ಯುವಕರ ಗುಂಪು ಅಸಭ್ಯವಾಗಿ ವರ್ತಿಸಿದೆ. ಗೆಳತಿಯನ್ನು ಚುಡಾಯಿಸುತ್ತಿದ್ದ ಗುಂಪನ್ನು ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

  ರಾಹುಲ್ ಮತ್ತು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು, ಜಗಳ ತಾರಕ್ಕೇರಿದೆ. ನಂತರ ಯುವಕರ ಗುಂಪು ಬಿಯರ್ ಬಾಟಲ್ ನಿಂದ ರಾಹುಲ್ ತೆಲೆಗೆ ಬಲವಾಗಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ತೀವ್ರ ಗಾಯಾಗೊಂಡಿರುವ ರಾಹುಲ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಕೊರೊನಾ ಭೀತಿಯ ನಡುವೆಯೂ ಯೂರೋಪ್ ಗೆ ಹಾರಿದ ನಟ ಪ್ರಭಾಸ್ಕೊರೊನಾ ಭೀತಿಯ ನಡುವೆಯೂ ಯೂರೋಪ್ ಗೆ ಹಾರಿದ ನಟ ಪ್ರಭಾಸ್

  ನಿನ್ನೆ ರಾತ್ರಿ 11.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೈದರಾಬಾದ್ ನ ಮಾದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಬ್ ನಲ್ಲಿ ಇರುವ ಸಿಸಿ ಟಿವಿ ಫೂಟೇಜ್ ಲಭ್ಯವಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳಲ್ಲಿ ಒಬ್ಬ ಶಾಸಕರ ಸಂಬಂಧಿ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ.

  ಬಿಗ್ ಬಾಸ್ ಸೀಸನ್ 3 ನಲ್ಲಿದ್ದ ರಾಹುಲ್ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದರು. ಎಲ್ಲ ಮನಗೆದ್ದಿದ್ದ ರಾಹುಲ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಗಾಯಕನಾಗಿ ಗುರುತಿಸಿಕೊಂಡಿದ್ದ ರಾಹುಲ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೇಲೆ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ರಾಹುಲ್ ಗೆ ಸ್ನೇಹಿತರ ಬಳಗ ಜಾಸ್ತಿ ಇದ್ದು ಆಗಾಗ ಪಾರ್ಟಿ ಪಬ್ ಅಂತ ಮಸ್ತಿ ಮಾಡುತ್ತಿರುತ್ತಾರಂತೆ.

  English summary
  Atack on Telugu Bigg Boss 3 Winner Rahul Sipligunj in Hydarabad Gachibowli pub.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X