For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾದಲ್ಲಿ ಆರ್‌ಆರ್‌ಆರ್ ವಿಶೇಷ ಪ್ರದರ್ಶನ; ಸ್ಕ್ರೀನ್ ಮುಂದೆ ಕುಣಿದ ವೀಕ್ಷಕರು!

  |

  ಆರ್ ಆರ್ ಆರ್ ಗ್ಲೋಬಲ್ ರೀಚ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಹಲವಾರು ಹಾಲಿವುಡ್ ಸಿನಿಮಾ ಮಂದಿ ಆರ್ ಆರ್ ಆರ್ ಚಿತ್ರವನ್ನು ವೀಕ್ಷಿಸಿದ್ದು ಚಿತ್ರವನ್ನು ಕೊಂಡಾಡಿದ್ದಾರೆ. ಇನ್ನು ಬಿಯಾಂಡ್ ಫೆಸ್ಟ್ ಆರ್ ಆರ್ ಆರ್ ಚಿತ್ರದ ವಿಶೇಷ ಪ್ರದರ್ಶನವನ್ನು ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಿತ್ತು.ವಿಶ್ವದ ಅತಿದೊಡ್ಡ ಐಮ್ಯಾಕ್ಸ್ ಚಿತ್ರಮಂದಿರವಾದ ಟಿ ಸಿ ಎಲ್ ಚೈನೀಸ್ ಥಿಯೇಟರ್‌ನಲ್ಲಿ ಆರ್ ಆರ್ ಆರ್ ಚಿತ್ರದ ವಿಶೇಷ ಪ್ರದರ್ಶನ ನಡೆದಿದೆ. ಈ ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಚಿತ್ರದ ನಿರ್ದೇಶಕ ರಾಜಮೌಳಿ ಕೂಡ ತೆರಳಿದ್ದರು.

  ಚಿತ್ರದ ಪ್ರದರ್ಶನಕ್ಕಾಗಿ ಮುಂಗಡ ಬುಕಿಂಗ್ ಮೂಲಕ ಟಿಕೆಟ್ ಗಳನ್ನು ಕಾಯ್ದಿರಿಸಿ ಕೊಂಡಿದ್ದ ಅಭಿಮಾನಿಗಳು ಚಿತ್ರಮಂದಿರ ಪ್ರವೇಶಿಸಲು ಕೆಲಗಂಟೆಗಳ ಮುಂಚೆ ಚಿತ್ರಮಂದಿರದ ಮುಂದೆ ಜಮಾಯಿಸಿದ್ದರು. ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತು ಚಿತ್ರ ಮಂದಿರ ಪ್ರವೇಶಿಸಿದ ಅಮೇರಿಕಾ ಪ್ರೇಕ್ಷಕರು ಆರ್ ಆರ್ ಆರ್ ಚಿತ್ರವನ್ನು ಆರಂಭದಿಂದ ಅಂತ್ಯದವರೆಗೂ ಎಂಜಾಯ್ ಮಾಡಿದ್ದಾರೆ.

  ಆರ್ ಆರ್ ಆರ್ ಚಿತ್ರದ ದೃಶ್ಯಗಳಿಗೆ ಕಿರುಚುತ್ತಾ, ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹ ನೀಡಿದ ಪ್ರೇಕ್ಷಕರು ನಾಟ್ಟು ನಾಟು ಹಾಡಿಗೆ ಚಿತ್ರಮಂದಿರದ ಪರದೆಯ ಮುಂದೆ ಬಂದು ಕುಣಿದು ಕುಪ್ಪಳಿಸಿದ್ದಾರೆ. ಈ ದೃಶ್ಯವನ್ನು ಲಾಸ್ ಏಂಜಲೀಸ್ ಮಾಧ್ಯಮಗಳು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು ರೀಟ್ವೀಟ್ ಮಾಡಿರುವ ಆರ್ ಆರ್ ಆರ್ ಚಿತ್ರದ ಅಧಿಕೃತ ಟ್ವಿಟ್ಟರ್ ಖಾತೆ ಇದು ಹೈದರಾಬಾದಿನ ಆರ್ ಟಿ ಎಕ್ಸ್ ರಸ್ತೆಯ ಚಿತ್ರಮಂದಿರವಲ್ಲ, ಅಮೇರಿಕಾದ ಚಿತ್ರಮಂದಿರ, ಅಲ್ಲಿಯೂ ಸಹ ಆರ್ ಆರ್ ಆರ್ ಹವಾ ಜೋರಾಗಿದೆ ಎಂದು ಬರೆದುಕೊಂಡಿದೆ.

  ಇನ್ನು ಚಿತ್ರ ಮುಗಿಯುವುದಕ್ಕೂ ಮುನ್ನ ರಾಜಮೌಳಿ ಅವರ ಭಾಷಣವನ್ನು ಕೇಳಿದ ವೀಕ್ಷಕರು ಮೌಳಿ ಮಾತುಗಳಿಗೆ ಮನಸೋತಿದ್ದಾರೆ. ಹಾಗೂ ಚಿತ್ರ ಮುಕ್ತಾಯವಾದ ನಂತರ ಎದ್ದು ನಿಂತು ಚಪ್ಪಾಳೆ ತಟ್ಟುವುದರ ಮೂಲಕ ಚಿತ್ರವನ್ನು ಮನಸ್ಪೂರ್ವಕವಾಗಿ ಇಷ್ಟಪಟ್ಟದ್ದನ್ನು ವ್ಯಕ್ತಪಡಿಸಿದ್ದಾರೆ.

  English summary
  Audience danced in front of screen for Naatu Naatu during RRR special show at TCL Chinese theatre Los Angeles. Read on
  Saturday, October 1, 2022, 22:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X