ಮೌಳಿ ನಿರ್ದೇಶನದಲ್ಲಿ ಡೇವಿಡ್ ವಾರ್ನರ್ ನಟನೆ: ಮಹೇಶ್ ಬಾಬು ಸಿನಿಮಾ ಕಥೆ ಏನಾಯ್ತು?
'RRR' ಬಳಿಕ ರಾಜಮೌಳಿ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಹೇಶ್ ಬಾಬು ಹೀರೊ ಆಗಿ ಜಕ್ಕಣ್ಣ ಮುಂದಿನ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಫೈನಲ್ ಆಗಿದೆ. ಶೀಘ್ರದಲ್ಲೇ ಪ್ರೀ ಪ್ರೊಡಕ್ಷನ್ ಶುರುವಾಗಲಿದೆ. ಆದರೆ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿಲ್ಲ.
ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಚಿತ್ರದ ಕಥೆ ಸಾಗಲಿದ್ದು ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ಕೂಡ ಸಿನಿಮಾ ಬಗ್ಗೆ ಜಕ್ಕಣ್ಣ ಮಾತನಾಡಿದ್ದರು. ಮಹೇಶ್ ಬಾಬು ಅಭಿಮಾನಿಗಳಂತೂ SSMB29 ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಸದ್ಯ ರಾಜಮೌಳಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಒಂದು ಜಾಹೀರಾತಿನಲ್ಲಿ ದರ್ಶನ ಕೊಟ್ಟಿದ್ದಾರೆ. ಕ್ರೆಡ್ ಪೇಮೆಂಡ್ ಆಪ್ ಜಾಹೀರಾತಿನಲ್ಲಿ ರಾಜಮೌಳಿ- ವಾರ್ನರ್ ಕಾಣಿಸಿಕೊಂಡಿದ್ದಾರೆ. ಅದಲ್ಲೂ ಜಕ್ಕಣ್ಣ ನಿರ್ದೇಶಕನಾಗಿಯೇ ಮಿಂಚಿದ್ದು ವಾರ್ನರ್ ಮಾತ್ರ ಸಿನಿಮಾ ಹೀರೊ ಆಗಿ ಗಮನ ಸೆಳೆದಿದ್ದಾರೆ. ಸಖಲ್ ಫನ್ನಿ ಆಗಿರುವ ಜಾಹೀರಾತು ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ, ಮೊದಲು ನಿರ್ದೇಶಕ ಕ್ರಿಕೆಟ್ ಪಂದ್ಯದ ಟಿಕೆಟ್ ಕೌಂಟರ್ ಹೊರಗೆ ನಿಂತು ವಾರ್ನರ್‌ಗೆ ಕರೆ ಮಾಡುತ್ತಾರೆ. "ಡೇವಿಡ್, ನಿಮ್ಮ ಪಂದ್ಯದ ಟಿಕೆಟ್‌ಗಳಲ್ಲಿ ನನಗೆ ಏನಾದರೂ ರಿಯಾಯಿತಿ ನೀಡಬಹುದೇ?" ಎಂದು ಕೇಳ್ತಾರೆ. ಅದಕ್ಕೆ "ರಾಜಾ ಸರ್.. ನೀವು ಕ್ರೆಡಿಟ್ UPI ಹೊಂದಿದ್ದರೆ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ" ಎಂದು ವಾರ್ನರ್ ಹೇಳ್ತಾರೆ. ಸಾಮಾನ್ಯ ಯುಪಿಐ ಆಗಿದ್ದರೆ? ಎಂದು ಮೌಳಿ ಕೇಳ್ತಾರೆ. ಹಾಗಿದ್ದರೆ ರಿಯಾಯಿತಿ ಬೇಕು ಅಂದರೆ ನೀವು ನನಗೊಂದು ಸಹಾಯ ಮಾಡಬೇಕು, ನಿಮ್ಮ ನಿರ್ದೇಶನದಲ್ಲಿ ನನಗೆ ಅವಕಾಶ ಕೊಡಿ ಎಂದು ವಾರ್ನರ್ ಕೇಳಿತ್ತಾರೆ.
ಈ ಮಾತು ಕೇಳಿ ರಾಜಮೌಳಿ ತಮ್ಮ ನಿರ್ದೇಶನದಲ್ಲಿ ವಾರ್ನರ್ ನಟಿಸಿದರೆ ಏನಾಗುತ್ತದೆ ಎಂದು ಊಹಿಸಿಕೊಳ್ಳುತ್ತಾರೆ. ಸೆಟ್‌ನಲ್ಲಿ ವಾರ್ನರ್ ಓವರಾಕ್ಷನ್, ಆಕ್ಟಿಂಗ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಎಲ್ಲಾ ಊಹಿಸಿಕೊಂಡು ಮೌಳಿ ಶಾಕ್ ಆಗ್ತಾರೆ. ಕೊನೆಗೆ ನಿಮಗೆ ಅವಕಾಶ ನೀಡುವುದಕ್ಕಿಂತ ಕ್ರೆಡಿಟ್ ಯುಪಿಐಗೆ ಅಪ್‌ಗ್ರೇಡ್ ಆಗುವುದು ಉತ್ತಮ ಎಂದು ಫೋನ್ ಕಟ್ ಮಾಡುತ್ತಾರೆ. ಸದ್ಯ ಈ ಫನ್ನಿ ಜಾಹೀರಾತು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಮಹೇಶ್ ಬಾಬು ಅಭಿಮಾನಿಗಳಂತೂ ಮೌಳಿ ನಿಮ್ಮ ಜಾಹೀರಾತು ಪಕ್ಕಕ್ಕಿಟ್ಟು ಸಿನಿಮಾ ಬಗ್ಗೆ ಯೋಚಿಸಿ. ಬೇಗ SSMB29 ಅಪ್‌ಡೇಟ್ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಜಕ್ಕಣ್ಣನಿಗೆ ಡೇವಿಡ್ ವಾರ್ನರ್ ರೀತಿ ಟಾರ್ಚಕ್ ಕೊಡುವ ಹೀರೊ ಸಿಕ್ಕಿರಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಟಿ20 ವರ್ಲ್ಡ್‌ಕಪ್ ಬಳಿಕ ಸಂಪೂರ್ಣವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಈ ಹಿಂದೆ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿಯೂ ವಾರ್ನರ್ ಆಡಿದ್ದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುವ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ವೀಟ್ ಆಗಿದ್ದಾರೆ. ಪತ್ನಿ, ಮಕ್ಕಳ ಜೊತೆ ಫನ್ನಿ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ. ಇದೀಗ ರಾಜಮೌಳಿ ಸಿನಿಮಾ ಹೀರೋ ಆಗಿ ಸಖತ್ ಮಜಾ ಕೊಡುತ್ತಿದ್ದಾರೆ.


Click it and Unblock the Notifications











