ಬಿಕಿನಿಯಲ್ಲಿ ಬಿಸಿ ಏರಿಸಿದ 'ಪುಟ್ಟ ಗೌರಿ': ಕಕ್ಕಾಬಿಕ್ಕಿಯಾದ ಅಭಿಮಾನಿಗಳು!

ಬಾಲ ನಟಿಯಾಗಿ ಬಣ್ಣ ಹಚ್ಚಿ ಮುಂದೆ ಹೀರೊಯಿನ್ ಆಗಿ ಮೋಡಿ ಮಾಡಿದ ಸಾಕಷ್ಟು ನಟಿಯರು ನಮ್ಮ ಕಣ್ಣ ಮುಂದಿದ್ದಾರೆ. ಮುಂಬೈ ಬ್ಯೂಟಿ ಅವಿಕಾ ಗೌರ್ ಕೂಡ ಹಿಂದಿ ಕಿರುತೆರೆಯಲ್ಲಿ ನಟಿಸಿ, ಮುಂದೆ ನಾಯಕ ನಟಿಯಾಗಿ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅವಿಕಾ ಕೇಲವ ಕನ್ನಡ ಸಿನಿಮಾಗಳಲ್ಲೂ ಇಣುಕಿದ್ದರು. ಈ ಮುಂಬೈ ಬೆಡಗಿಯ ಬಿಕಿನಿ ಫೋಟೊಗಳು ಈಗ ಸಖತ್ ವೈರಲ್ ಆಗಿದೆ.

'ಬಾಲಿಕಾ ವಧು' ಹಿಂದಿ ಧಾರಾವಾಹಿಯಲ್ಲಿ ನಾಯಕಿ ಆನಂದಿ ಸಿಂಗ್ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಅವಿಕಾ ಗೌರ್ ಮಿಂಚಿದ್ದರು. ಅದಕ್ಕೂ ಮುಂದೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ಈ ಪಾತ್ರ ಆಕೆಗೆ ಬಹಳ ಹೆಸರು ತಂದುಕೊಟ್ಟಿತ್ತು. ಮುಂದೆ ಈ ಧಾರಾವಾಹಿ ತೆಲುಗಿಗೂ ಡಬ್ ಆಗಿ ಪ್ರಸಾರವಾಗಿತ್ತು. 2013ರಲ್ಲಿ ತೆಲುಗಿನ 'ಉಯ್ಯಾಲ ಜಂಪಾಲ' ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ ಅವಿಕಾ ತೆಲುಗು ಸಿನಿರಸಿಕರ ಗಮನ ಸೆಳೆದರು. ಅವಿಕಾ ಗೌರ್‌ ಮುದ್ದಾದ ನಗುವಿಗೆ ದೊಡ್ಡ ಅಭಿಮಾನಿ ಬಳಗವಿದೆ. ಬಹುತೇಕ ತೆಲುಗು ಸಿನಿಮಾಗಳಲ್ಲೇ ನಟಿಸಿರುವ ಅವಿಕಾ ಗೌರ್ ಇತ್ತೀಚೆಗೆ ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದರು. ಮಾಲ್ಡೀವ್ಸ್‌ಗೆ ಹೋಗಿ ಬಿಕಿನಿ ಹಾಕಿಕೊಳ್ಳದಿದ್ದರೇ ಏನು ಪ್ರಯೋಜನ ಅಂತ ಆಕೆ ಭಾವಿಸಿದಂತಿದೆ.

ಸ್ನೇಹಿತೆಯರ ಜೊತೆ ಅವಿಕಾ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದು, ದ್ವೀಪ ರಾಷ್ಟ್ರದ ಬೀಚ್ ಸೈಡ್ ರೆಸಾರ್ಟ್‌ನಲ್ಲಿ ಬಿಕಿನಿ ತೊಟ್ಟು ಮಿಂಚಿದ್ದಾರೆ. ಆ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, 'ಬಾಲಿಕಾ ವಧು' ಪುಟಾಣಿ ಆನಂದಿ ಇವಳೇನಾ ? ಅಂತ ಕೆಲವರು ಅಚ್ಚರಿಗೊಂಡಿದ್ದಾರೆ. ತುಂಡು ಉಡುಗೆಯ ವೆರೈಟಿ ವೆರೈಟಿ ಫೋಟೊಶೂಟ್‌ಗಳಲ್ಲಿ ಅವಿಕಾ ಎದುರಾಗುತ್ತಲೇ ಇರುತ್ತಾರೆ. 'ಲಕ್ಷ್ಮಿ ರಾವೆ ಮಾಇಂಟಿಕಿ', 'ಸಿನಿಮಾ ಚೂಪಿಸ್ತಾ ಮಾವ' 'ರಾಜುಗಾರಿ ಗದಿ- 2' ಸೇರಿದಂತೆ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸಿದ್ದ ಅವಿಕಾ ಕಳೆದ ವಾರ ರಿಲೀಸ್ ಆದ 'ಥ್ಯಾಂಕೂ' ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದಾರೆ.

ಅವಿಕಾ ಹೊಸ ಅವತಾರಕ್ಕೆ ಶಾಕ್ ಆದ ತೆಲುಗು ಪ್ರೇಕ್ಷಕರು!

ತೆಲುಗು ಸಿನಿಮಾಗಳಲ್ಲಿ ಬಹುತೇಕ ಹಳ್ಳಿ ಹುಡುಗಿಯಾಗಿ ಲಂಗಾ ದಾವಣಿಯಲ್ಲೇ ಕಂಗೊಳಿಸಿರೋ ಅವಿಕಾಳನ್ನು ಬಿಕಿನಿಯಲ್ಲಿ ನೋಡಿದ ತೆಲುಗು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಕೆ ತನ್ನ ಬಿಕಿನಿ ಫೋಟೊಗಳನ್ನು ಕೊಲಾಜ್ ಮಾಡಿ ಒಂದು ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಅದರ ಸ್ಕ್ರೀನ್ ಶಾಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

 ಕನ್ನಡ ಚಿತ್ರಗಳಲ್ಲಿ ಅವಿಕಾ ಗೌರ್ ನಟನೆ

ಕನ್ನಡ ಚಿತ್ರಗಳಲ್ಲಿ ಅವಿಕಾ ಗೌರ್ ನಟನೆ

ಬರೀ ಹಿಂದಿ ಮತ್ತು ತೆಲುಗು ಮಂದಿಗೆ ಮಾತ್ರ ಅವಿಕಾ ಪರಿಚಿತಳಲ್ಲ. ಕನ್ನಡದ 'ಕೇರ್‌ ಆಫ್‌ ಫುತ್‌ಪಾತ್- 2' ಚಿತ್ರದ ಲೀಡ್‌ ರೋಲ್‌ನಲ್ಲಿ ನಟಿಸಿದ್ದ ಅವಿಕಾ, ಪುನೀತ್‌ ರಾಜ್‌ಕುಮಾರ್‌ ನಟನೆಯ 'ನಟಸಾರ್ವಭೌಮ' ಚಿತ್ರದಲ್ಲಿ ಇಣುಕಿದ್ದರು. ಆ ಚಿತ್ರದ ಸೂಪರ್ ಹಿಟ್ 'ತಾಜಾ ಸಮಾಚಾರ' ಹಾಡಿನಲ್ಲಿ ಮಧುಮಗಳಾಗಿ ಅವಿಕಾ ಗೌರ್‌ ಕಂಗೊಳಿಸಿದ್ದರು. ಇನ್ನು ಅವಿಕಾ ನಟನೆಯ 'ಬಾಲಿಕಾ ವಧು' ಧಾರಾವಾಹಿ 'ಪುಟ್ಟ ಗೌರಿ ಮದುವೆ' ಆಗಿ ಕನ್ನಡಕ್ಕೆ ರೀಮೇಕ್ ಆಗಿತ್ತು.

 ಶೀಘ್ರದಲ್ಲೇ ಬಿಟೌನ್ ಸಿನಿಮಾದಲ್ಲಿ ಅವಿಕಾ

ಶೀಘ್ರದಲ್ಲೇ ಬಿಟೌನ್ ಸಿನಿಮಾದಲ್ಲಿ ಅವಿಕಾ

ಹಿಂದಿ ಕಿರುತೆರೆಯಲ್ಲಿ ನಟಿಸಿದ್ರು. ಈವರೆಗೆ ಯಾವುದೇ ಬಾಲಿವುಡ್ ಸಿನಿಮಾದಲ್ಲಿ ಅವಿಕಾ ಗೌರ್ ಕಾಣಿಸಿಕೊಂಡಿರಲಿಲ್ಲ. '1920' ಹೆಸರಿನ ಹೊಸ ಸಿನಿಮಾದಲ್ಲಿ ನಟಿಸುವ ಮೂಲಕ ಕೊನೆಗೂ ಮುಂಬೈ ಚೆಲುವೆ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವಿಕಾ ಗೌರ್ ಪಾತ್ರ ಏನು ಅನ್ನುವುದು ಕುತೂಹಲ ಕೆರಳಿಸಿದೆ.

 ಆಲ್ಬಮ್‌ ಸಾಂಗ್‌ಗಳಲ್ಲಿ ಅವಿಕಾ ಗೌರ್

ಆಲ್ಬಮ್‌ ಸಾಂಗ್‌ಗಳಲ್ಲಿ ಅವಿಕಾ ಗೌರ್

ಹಿಂದಿ ಕಿರುತೆರೆ ಹಾಗೂ ತೆಲುಗು, ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ಆಲ್ಬಮ್‌ ಸಾಂಗ್‌ಗಳಲ್ಲೂ ಅವಿಕಾ ಗೌರ್ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. 'ಡಾಗ್ಗಿ', 'ದಿಲ್ ಕೊ ಮೆರೆ' ಹಾಗೂ 'ಕುರ್ಬಾನ್' ಅನ್ನುವ ವಿಡಿಯೋ ಆಲ್ಬಮ್‌ ಸಾಂಗ್‌ನಲ್ಲಿ ಮುಂಬೈ ಪೋರಿ ಮಿಂಚಿದ್ದಾರೆ.

More from Filmibeat

English summary
Avika Gor's Photos In Swimsuit From Maldives Vacation Break The Internet. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X