For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ಚಿತ್ರಕ್ಕೆ ಹೆಸರು ಅಂತಿಮ

  |

  ವಕೀಲ್ ಸಾಬ್ ಚಿತ್ರದ ಸೂಪರ್ ಸಕ್ಸಸ್ ಬಳಿಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತೊಂದು ರಿಮೇಕ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಮಲಯಾಳಂ ಭಾಷೆಯಲ್ಲಿ ತೆರೆಕಂಡು ಹಿಟ್ ಆಗಿದ್ದ ಅಯ್ಯಪ್ಪನಂ ಕೊಶಿಯಮ್ ತೆಲುಗಿನಲ್ಲಿ ತಯಾರಾಗುತ್ತಿದೆ.

  ತೆಲುಗಿನಲ್ಲಿ ಪವನ್ ಕಲ್ಯಾಣ್ ಹಾಗು ರಾಣಾ ದಗ್ಗುಬಾಟಿ ಪ್ರಮುಖ ಕಲಾವಿದರಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ.

  ಟೀಕೆ, ಆರೋಪಕ್ಕೆ ಬಗ್ಗದ ಬಾಲಿವುಡ್: 10ಕ್ಕೂ ಹೆಚ್ಚು ಸಿನಿಮಾಗಳು ರಿಮೇಕ್ಟೀಕೆ, ಆರೋಪಕ್ಕೆ ಬಗ್ಗದ ಬಾಲಿವುಡ್: 10ಕ್ಕೂ ಹೆಚ್ಚು ಸಿನಿಮಾಗಳು ರಿಮೇಕ್

  ಅಂದ್ಹಾಗೆ, ಅಯ್ಯಪ್ಪನಂ ಕೊಶಿಯಮ್ ಸಿನಿಮಾದ ತೆಲುಗು ರಿಮೇಕ್‌ನಲ್ಲಿ ಟೈಟಲ್ ಏನಿರಬಹುದು ಎಂಬ ಕುತೂಹಲ ಕಾಡ್ತಿತ್ತು. ಇದೀಗ, ಈ ಕುತೂಹಲಕ್ಕೆ ತೆರೆಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ಅಯ್ಯಪ್ಪನಂ ಕೊಶಿಯಮ್ ತೆಲುಗು ವರ್ಷನ್‌ಗೆ 'ಪರಶುರಾಮ ಕೃಷ್ಣಮೂರ್ತಿ' ಎಂದು ನಾಮಕರಣ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

  ಸಾಗರ್ ಕೆ ಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡುತ್ತಿದ್ದಾರೆ. ತ್ರಿವಿಕ್ರಮ್ ಡೈಲಾಗ್ ಹಾಗೂ ಗೀತೆರಚನೆ ಮಾಡಲಿದ್ದು, ಎಸ್ ತಮನ್ ಸಂಗೀತ ಸಂಯೋಜಿಸಲಿದ್ದಾರೆ.

  ಜುಲೈ 10ನೇ ತಾರೀಖಿನ ನಂತರ ಈ ಸಿನಿಮಾದ ಶೂಟಿಂಗ್‌ಗೆ ಯೋಜಿಸಿದ್ದು, ಆಗಸ್ಟ್ ಅಂತ್ಯದೊಳಗೆ ಚಿತ್ರೀಕರಣ ಮುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದರು. ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು. ಈ ಸಿನಿಮಾ 2020ರ ಫೆಬ್ರವರಿ 7 ರಂದು ತೆರೆಕಂಡಿತ್ತು.

  ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಶಿವ ರಾಜ್ ಕುಮಾರ್ ಕೊಟ್ಟ ಗಿಫ್ಟ್ ನೋಡಿ | Filmibeat Kannada

  ಬಿಜು ಮೆನನ್ ಪಾತ್ರದಲ್ಲಿ ಪವನ್ ಕಲ್ಯಾಣ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಲಿದ್ದಾರೆ.

  English summary
  Pawan Kalyan and Rana daggubati Starrer Ayyappanum Koshiyum telugu remake title is Parashurama Krishnamurthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X