'ಪುಷ್ಪ-2', 'ಬಾಹುಬಲಿ- 2', 'KGF-2'; ಸಿನಿರಸಿಕರ ಮನಗೆದ್ದ ಸೀಕ್ವೆಲ್ ಯಾವ್ದು?

ಬಾಕ್ಸಾಫೀಸ್‌ನಲ್ಲಿ 'ಪುಷ್ಪ-2' ಗೆಲುವಿನ ನಾಗಾಲೋಟ ಮುಂದುವರೆದಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿಮಾ ಮುನ್ನುಗ್ಗುತ್ತಿದೆ. ಚಿತ್ರ ನಿರ್ಮಾಣ ಸಂಸ್ಥೆಯೇ ಚಿತ್ರದ ಬಾಕ್ಸಾಫೀಸ್ ಗಳಿಕೆ ಮಾಹಿತಿ ನೀಡುತ್ತಿದೆ. ಈಗಾಗಲೇ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಘೋಷಿಸಿದೆ.

ಬಹಳ ಬೇಗ 500 ಕೋಟಿ ರೂ. ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ 'ಪುಷ್ಪ-2' ಸಿನಿಮಾ ಪಾತ್ರವಾಗಿದೆ. ಭಾರತೀಯ ಸಿನಿಚರಿತ್ರೆಯಲ್ಲಿ ಹಿಂದಿನ ಎಲ್ಲಾ ಬಾಕ್ಸಾಫೀಸ್ ದಾಖಲೆಗಳನ್ನು ಸಿನಿಮಾ ಮುರಿದಿದೆ. ಮೊದಲ 3 ದಿನಕ್ಕೆ ಸಿನಿಮಾ 500 ಕೋಟಿ ರೂ. ಕ್ಲಬ್ ಸೇರಿದೆ. ಹಿಂದಿ ವರ್ಷನ್ ಕೂಡ ದಾಖಲೆಯ ಕಲೆಕ್ಷನ್ ಮಾಡಿ ಬಾಲಿವುಡ್ ಸ್ಟಾರ್‌ಗಳಿಗೆ ಶಾಕ್ ಕೊಟ್ಟಿದೆ.

Baahubali-2 KGF-2 and Pushpa-2 Which is Best Sequel Movie Of all Time

ಸೀಕ್ವೆಲ್ ಸಿನಿಮಾಗಳು ಸಹಜವಾಗಿಯೇ ಬಹಳ ನಿರೀಕ್ಷೆ ಮೂಡಿಸುತ್ತದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಿ ದೊಡ್ಡದಾಗಿ ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡಿದರೆ ಬಾಕ್ಸಾಫೀಸ್ ಕೊಳ್ಲೆ ಹೊಡೆಯಬಹುದು. ಈ ಹಿಂದೆ ರಾಜಮೌಳಿ ನಿರ್ದೇಶನದ 'ಬಾಹುಬಲಿ'-2 ಹಾಗೂ ಕನ್ನಡದ 'KGF-2' ಚಿತ್ರಗಳ ವಿಚಾರದಲ್ಲಿ ಇದೇ ನಡೀತು. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು.

9 ವರ್ಷಗಳ ಹಿಂದೆ ಬಂದಿದ್ದ 'ಬಾಹುಬಲಿ'-1 ಚಿತ್ರ 600 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಬಳಿಕ ಬಂದ ಸೀಕ್ವೆಲ್ 1800 ಕೋಟಿ ರೂ. ಕೊಳ್ಳೆ ಹೊಡೆದಿತ್ತು. 'ಬಾಹುಬಲಿ' ಸರಣಿ ರೀತಿಯಲ್ಲೇ ಕನ್ನಡದಲ್ಲಿ 'KGF' ಸರಣಿ ದಾಖಲೆ ಬರೀತು. ಮೊದಲ ಭಾಗ 250 ಕೋಟಿ ರೂ. ಗಳಿಕೆ ಕಂಡರೆ 2ನೇ ಭಾಗ 1200 ಕೋಟಿ ರೂ. ಬಾಚಿ ಎಲ್ಲರ ಹುಬ್ಬೇರಿಸಿತ್ತು. ಸದ್ಯ ಈಗ ಪುಷ್ಪರಾಜ್ ಆರ್ಭಟ ಜೋರಾಗಿದೆ.

ಟಿಕೆಟ್ ದರ ಬಹಳ ಹೆಚ್ಚು ಮಾಡಿದ್ದು 'ಪುಷ್ಪ-2' ಗಳಿಕೆಗೆ ಪ್ಲಸ್ ಆಗಿದೆ. 500 ರೂ., 1000 ರೂ., 1500 ರೂ. ವರೆಗೆ ಟಿಕೆಟ್ ದರ ಹೆಚ್ಚಳವಾಗಿತ್ತು. ಸಿನಿಮಾ ನೋಡಬೇಕು ಎನ್ನುವ ಪ್ರೇಕ್ಷಕರ ಉತ್ಸಾಹವನ್ನು ಎನ್‌ಕ್ಯಾಶ್ ಮಾಡಿಕೊಂಡು ಟಿಕೆಟ್ ದರ ಹೆಚ್ಚಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ 3 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ಲೆಕ್ಕ ಪಕ್ಕಕ್ಕಿಟ್ಟರೆ ಪ್ರೇಕ್ಷಕರನ್ನು ರಂಜಿಸುವಲ್ಲಿ 'ಪುಷ್ಪ'-2 ಸಿನಿಮಾ ಸೋತಿದೆ.

ಹೌದು 'ಪುಷ್ಪ-2' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೂ ಗಳಿಕೆ ಚೆನ್ನಾಗಿದೆ. ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಚೆನ್ನಾಗಿಲ್ಲ ಎಂದು ಸಿನಿಮಾ ನೋಡಿದ ಬಹುತೇಕರು ಹೇಳುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ 'ಬಾಹುಬಲಿ- 2', 'KGF-2', 'ಪುಷ್ಪ-2' ಈ ಮೂರು ಸೀಕ್ವೆಲ್ ಚಿತ್ರಗಳಲ್ಲಿ ಯಾವುದು ಬೆಸ್ಟ್? ಎನ್ನುವ ಚರ್ಚೆ ಶುರುವಾಗಿದೆ.

ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ? ಎನ್ನುವ ದೊಡ್ಡ ಪ್ರಶ್ನೆಯೊಂದಿಗೆ 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ಮುಕ್ತಾಯವಾಗಿತ್ತು. ಈ ಪ್ರಶ್ನೆಗೆ ಉತ್ತರ ಏನು? ಎಂದು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಎರಡು ವರ್ಷಗಳ ಬಳಿಕ ಸೀಕ್ವೆಲ್‌ನಲ್ಲಿ ಉತ್ತರ ಸಿಕ್ಕಿತ್ತು. ಪ್ರೇಕ್ಷಕರು ಮುಗಿಬಿದ್ದು ಈ ಕಾಸ್ಟ್ಯೂಮ್ ಡ್ರಾಮಾ ನೋಡಿದ್ದರು. ಪ್ರಭಾಸ್- ರಾಣಾ ಏಟು ಎದುರೇಟು ನೋಡಿ ಫಿದಾ ಆಗಿದ್ದಾರೆ.

ಯಶ್ ನಟನೆಯ 'KGF' ಸರಣಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಿನಿಮಾ. ಪ್ರಶಾಂತ್ ನಿರ್ದೇಶನದ ಸಿನಿಮಾ ಬರೆದ ದಾಖಲೆ ಒಂದೆರಡಲ್ಲ. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿ ಕೂಡ ಸಿನಿಮಾ ಸಖತ್ ಸದ್ದು ಮಾಡಿತ್ತು. ಮೊದಲ ಭಾಗದಲ್ಲಿ ಗರುಡನ ತಲೆ ಕಡಿದ ರಾಕಿಭಾಯ್ ಮುಂದೆ ಏನು ಮಾಡ್ತಾನೆ? ಎಂದು ನೋಡಲು ಪ್ರೇಕ್ಷಕರು ಕಾಯುವಂತಾಯಿತು. ಸೀಕ್ವೆಲ್‌ನಲ್ಲಿ ಆತನ ದರ್ಬಾರ್ ನೋಡಿ ಫಿದಾ ಆಗಿದ್ದರು.

'ಪುಷ್ಪ' ಸಿನಿಮಾ ನೋಡಿದಾಗಲೇ ಕಥೆ ಮುಗಿದಂತೆ ಭಾಸವಾಗಿತ್ತು. ಆದರೂ ಸೀಕ್ವೆಲ್ ಮಾಡುವ ಪ್ರಯತ್ನ ನಡೀತು. ಇದೀಗ ಸಿನಿಮಾ ತೆರೆಗೆ ಬಂದಿದೆ. ಆದರೆ ಸರಿಯಾದ ಕಥೆ ಇಲ್ಲದೇ ಡ್ರಾಮಾ ವರ್ಕ್ ಆಗದೇ 'ಪುಷ್ಪ'-2 ನಿರಾಸೆ ಮೂಡಿಸಿದೆ. ಈ ಮೂರು ಸೀಕ್ವೆಲ್‌ಗಳಲ್ಲಿ ಯಾವುದು ಬೆಸ್ಟ್ ಎಂದರೆ ಬಹುತೇಕ ಉತ್ತರ ಬಾಹುಬಲಿ-2. ಎರಡನೇ ಸ್ಥಾನದಲ್ಲಿ 'KGF'-2 ಸಿನಿಮಾ ಇದೆ. 'ಪುಷ್ಪ'-2 ಚಿತ್ರಕ್ಕೆ 3ನೇ ಸ್ಥಾನ ಸಿಕ್ಕಿದೆ. ಇದೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.

'KGF' ವರ್ಷಸ್ 'ಪುಷ್ಪ' ಎನ್ನುವ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಆದರೆ ರಾಕಿಭಾಯ್ ಆರ್ಭಟದ ಮುಂದೆ ಪುಷ್ಪರಾಜ್ ಬಹಳ ಹಿಂದೆ ಉಳಿದುಬಿಟ್ಟಿದ್ದಾನೆ. ಸೀಕ್ವೆಲ್‌ನಲ್ಲಿ ಕೇವಲ ರಾಕಿ ಎಂಟ್ರಿ ಸೀನ್‌ಗೆ ಇಡೀ 'ಪುಷ್ಪ'-2 ಸಮವಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ದೊಡ್ಡಮ್ಮ ಗನ್ ಸನ್ನಿವೇಶಕ್ಕೆ ಹತ್ತಿರ ಎನ್ನುವಂತಹ ಒಂದೇ ಒಂದು ಸನ್ನಿವೇಶ ಕೂಡ 'ಪುಷ್ಪ'-2 ಚಿತ್ರದಲ್ಲಿ ಇಲ್ಲ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳಿವೆ.

More from Filmibeat

English summary
Amid Pushpa-2 box office success, sparks Best Sequel debate;
Read more about: kgf baahubali pushpa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X