'ಬಾಹುಬಲಿ' ಕಥೆಗೆ ದಿಢೀರ್ ಕತ್ತರಿ ಹಾಕಿದ ಜಕ್ಕಣ್ಣ; ಹೊಸ ಸಾಹಸಕ್ಕೆ ಮುಂದಾದ ಮೌಳಿ

ಎಸ್‌. ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಬರೆದ ದಾಖಲೆ ಗೊತ್ತೇಯಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿಮಾ ಸದ್ದು ಮಾಡಿತ್ತು. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ನಟನೆಯನ್ನು ಸಿನಿರಸಿಕರು ಮರೆಯೋಕೆ ಸಾಧ್ಯವಿಲ್ಲ.

2015ರಲ್ಲಿ 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ತೆರೆಗೆ ಬಂದಿತ್ತು. ಬಳಿಕ ಅದರ ಮುಂದುವರೆದ ಭಾಗ 2017ರಲ್ಲಿ 'ಬಾಹುಬಲಿ 2: ದಿ ಕನ್‌ಕ್ಲೂಷನ್' ಸಿನಿಮಾ ಪ್ರೇಕ್ಷಕರನ್ನ ರಂಜಿಸಿತ್ತು. ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ? ಎನ್ನುವ ಪ್ರಶ್ನೆ ಹುಟ್ಟು ಹಾಕಿ ಸೀಕ್ವೆಲ್ ಬಗ್ಗೆ ಕುತೂಹಲ ಮೂಡುವರಂತೆ ಮಾಡಲಾಗಿತ್ತು. ಅದರಲ್ಲಿ ಯಶಸ್ಸು ಕೂಡ ಸಿಕ್ಕಿತ್ತು.

Baahubali Returns SS Rajamouli Unites Both Parts Into One Grand Film

ಮತ್ತೆ ತೆರೆಮೇಲೆ 'ಬಾಹುಬಲಿ' ದರ್ಬಾರ್ ಶುರುವಾಗುತ್ತಿದೆ. ಈ ಬಾರಿ ಜಕ್ಕಣ್ಣ ಹೊಸ ಪ್ಲ್ಯಾನ್ ಮಾಡಿದ್ದಾರೆ. 180 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಬಾಹುಬಲಿ' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. 2ನೇ ಭಾಗದ ಗಳಿಕೆ 1000 ಕೋಟಿ ರೂ. ಗಡಿ ದಾಟಿತ್ತು. ಸದ್ಯ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. 'ಬಾಹುಬಲಿ' ಸರಣಿ ಚಿತ್ರಗಳು ಅದೇ ಸಾಲಿಗೆ ಸೇರುತ್ತಿದೆ.

ಈಗಾಗಲೇ 'ಬಾಹುಬಲಿ' ಸರಣಿ ಚಿತ್ರಗಳು ರೀ-ರಿಲೀಸ್ ಆಗಿವೆ. ಆದರೆ ಈ ಬಾರಿ ಹೊಸ ಪ್ರಯತ್ನ ಮಾಡಲಾಗುತ್ತಿದೆ. ಎರಡೂ ಸಿನಿಮಾಗಳನ್ನು ಸೇರಿಸಿ ಒಂದೇ ಚಿತ್ರವಾಗಿ ಎಡಿಟ್ ಮಾಡಿ ರಿಲೀಸ್ ಮಾಡಲು ಜಕ್ಕಣ್ಣ ಮುಂದಾಗಿದ್ದಾರೆ. ಈಗಾಗಲೇ ಎಡಿಟಿಂಗ್ ಮಾಡಿ 3 ಗಂಟೆಗೆ ಎರಡೂ ಚಿತ್ರಗಳನ್ನು ಇಳಿಸಲಾಗಿದೆ. ಶೀಘ್ರದಲ್ಲೇ ವಿತರಕರು ಹಾಗೂ ಆಪ್ತರಿಗೆ ಮೌಳಿ ಸ್ಪೆಷಲ್ ಶೋ ಅರೇಂಜ್‌ ಮಾಡುತ್ತಿದ್ದಾರೆ.

ಹಳೇ ಸಿನಿಮಾಗಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಹೊಸ ರೂಪ ಕೊಟ್ಟು ಬಿಡುಗಡೆ ಮಾಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಬಂದಿರುವ ಸಿನಿಮಾಗಳನ್ನು ಯಥಾವತ್ ಬಿಡುಗಡೆ ಮಾಡುತ್ತಾರೆ. ಆದರೆ 'ಬಾಹುಬಲಿ' ಸರಣಿ ವಿಚಾರದಲ್ಲಿ ಮೌಳಿಯದ್ದು ಹೊಸ ಪ್ರಯೋಗವೇ ಸರಿ. ಎರಡೂ ಸಿನಿಮಾಗಳನ್ನು ಮರು ಬಿಡುಗಡೆ ಮಾಡಿದರೆ ಪ್ರೇಕ್ಷಕರಿಗೆ ನೋಡುಬ ತಾಳ್ಮೆ ಇರಲ್ಲ. ಹೀಗಾಗಿ ಜಕ್ಕಣ್ಣನ ಲೆಕ್ಕಾಚಾರ ಹೊಸದಾಗಿದೆ.

ನಿಜ ಹೇಳಬೇಕು ಅಂದ್ರೆ ಒಂದೇ ಚಿತ್ರದಲ್ಲಿ 'ಬಾಹುಬಲಿ' ಕಥೆ ಹೇಳಲು ಚಿತ್ರತಂಡ ಬಯಸಿತ್ತು. ಆದರೆ ಕಥೆಯನ್ನು ವಿಸ್ತರಿಸುತ್ತಾ ಹೋದಂತೆ ಎರಡು ಚಿತ್ರಗಳಿಗಾಗುವಷ್ಟು ಕಥೆ ಇದೆ, ಎಲ್ಲವೂ ಚೆನ್ನಾಗಿದೆ ಅಂದಾಗ ಎರಡು ಭಾಗಗಳಾಗಿ ಕಥೆ ಹೇಳುವ ಪ್ರಯತ್ನ ನಡೀತು. ಅದರಲ್ಲಿ ಚಿತ್ರತಂಡ ಗೆದ್ದಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಬಳಿಕ ಸೀಕ್ವೆಲ್ ಸಿನಿಮಾಗಳ ದರ್ಬಾರ್ ಶುರುವಾಯಿತು.

'ಬಾಹುಬಲಿ' ಸರಣಿ ಬಳಿಕ 'ಕೆಜಿಎಫ್' ಸರಣಿ, 'ಪುಷ್ಪ' ಸಿನಿಮಾಗಳು ಬಂದು ಗೆದ್ದಿದ್ದು ಗೊತ್ತೇಯಿದೆ. ಇದೇ ರೀತಿ ಸಾಕಷ್ಟು ಪ್ರಯತ್ನಗಳು ನಡೀತಿದೆ. ಆದರೆ ಈ 3 ಸರಣಿಗೆ ಸಿಕ್ಕ ರೆಸ್ಪಾನ್ಸ್ ಬೇರೆ ಚಿತ್ರಗಳಿಗೆ ಸಿಗಲಿಲ್ಲ. ಇನ್ನು 'ಬಾಹುಬಲಿ' ಭಾಗ-1 ಹಾಗೂ ಭಾಗ-2 ಚಿತ್ರಗಳಲ್ಲಿನ ಪ್ರತಿ ಸನ್ನಿವೇಶ, ಹಾಡು, ಯುದ್ಧದ ಎಪಿಸೋಡ್‌ಗಳು ಅದ್ಭುತ ಎನ್ನುವಂತಿತ್ತು. ಇದರಲ್ಲಿ ಯಾವುದನ್ನು ಕತ್ತರಿಗೆ ಎಡಿಟ್ ಮಾಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಒಟ್ಟು 5 ಮುಕ್ಕಾಲು ಗಂಟೆಯ ಫುಟೇಜ್ ಅನ್ನು 3 ಗಂಟೆಗೆ ಹೇಗೆ ಇಳಿಸಿ ಜಕ್ಕಣ್ಣ ಎಡಿಟ್ ಮಾಡಿದ್ದಾರೆ ಎಂದು ಕೆಲವರು ಹುಬ್ಬೇರಿಸಿದ್ದಾರೆ. ಇನ್ನು ಏಳೆಂಟು ವರ್ಷಗಳ ಹಿಂದೆ ಯಾರಿಗೆಲ್ಲಾ ಚಿತ್ರದ ವಿತರಣೆ ಹಕ್ಕು ಕೊಟ್ಟಿದ್ದರೋ ಅವರನ್ನೇ ಕರೆದು ಮತ್ತೆ ರೀ-ರಿಲೀಸ್ ರೈಟ್ಸ್ ಕೊಡುವ ಪ್ರಯತ್ನ ನಡೀತಿದೆಯಂತೆ. ಇದೇ ಶನಿವಾರ ಸ್ಪೆಷಲ್ ಶೋ ಹಾಕಿ ರೆಸ್ಪಾನ್ಸ್ ನೋಡಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲು ತೀರ್ಮಾನಿಸಲಾಗಿದೆ. ಹೀಗೆ ಸರಣಿ ಸಿನಿಮಾಗಳನ್ನು ಒಂದು ಚಿತ್ರವಾಗಿ ಎಟಿಟ್ ಮಾಡಿ ತೋರಿಸುವ ಪ್ರಯತ್ನ ಯಶಸ್ಸಾದರೆ 'ಕೆಜಿಎಫ್' ಕಥೆಯನ್ನು ಕೂಡ ಹೀಗೆ ನೋಡಬಹುದು.

More from Filmibeat

English summary
Baahubali Returns in a New Format—Rajamouli Merges Both Parts for Fans
Read more about: prabhas rajamouli baahubali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X