ಮಹೇಶ್ ಬಾಬು ಸಿನಿಮಾ ಬಿಟ್ಟು ಮತ್ತೆ 'ಬಾಹುಬಲಿ' ಚಿತ್ರದಲ್ಲಿ ರಾಜಮೌಳಿ ಬ್ಯುಸಿ; ಪಾರ್ಟ್ -3 ಫಿಕ್ಸ್!

ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿ ಸಿನಿಮಾ 'ಬಾಹುಬಲಿ'. ರಾಜಮೌಳಿ ನಿರ್ದೇಶನದಲ್ಲಿ ಎರಡು ಭಾಗಗಳಾಗಿ ತೆರೆಗೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ತೆರೆಮೇಲೆ ದೃಶ್ಯವೈಭವ ಕಂಡು ಸಿನಿರಸಿಕರು ಫಿದಾ ಆಗಿದ್ದರು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣ, ಸತ್ಯರಾಜ್ ನಟನೆ ಮರೆಯೋಕೆ ಸಾಧ್ಯವಿಲ್ಲ.

'ಬಾಹುಬಲಿ' ಸಿನಿಮಾಗಳ ಬಳಿಕ ರಾಜಮೌಳಿ ಹಾಗೂ ಕಲಾವಿದರು ಎಲ್ಲರೂ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಮತ್ತೆ 'ಬಾಹುಬಲಿ' ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ. ಮಹೇಶ್ ಬಾಬು ಸಿನಿಮಾ ಕೆಲಸಗಳನ್ನು ಬಿಟ್ಟು ಸದ್ಯ ಜಕ್ಕಣ್ಣ 'ಬಾಹುಬಲಿ' ಗುಂಗಿನಲ್ಲಿದ್ದಾರೆ. ಅದಕ್ಕೆ ಕಾರಣವೂ ಇದೆ. ಇದೆಲ್ಲದರ ನಡುವೆ ಸರಣಿಯ 3ನೇ ಸಿನಿಮಾ ಬಗ್ಗೆಯೂ ಚರ್ಚೆ ಶುರುವಾಗಿದೆ.

Baahubali The Epic Set for Big Re-Release Fans Expect Baahubali 3 Tease

ಎರಡು ಭಾಗಗಳಾಗಿ ಬಂದಿದ್ದ 'ಬಾಹುಬಲಿ' ಚಿತ್ರದ ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಎರಡೂ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ರೀ-ರಿಲೀಸ್ ಮಾಡಲಾಗುತ್ತಿದೆ. ಅಕ್ಟೋಬರ್ 31ಕ್ಕೆ ಸಿನಿಮಾ ಮತ್ತೆ ತೆರೆಮೇಲೆ ಬರಲಿದೆ. ಜಕ್ಕಣ್ಣ ಮುಂದೆ ನಿಂತು ಚಿತ್ರವನ್ನು ಎಡಿಟ್ ಮಾಡಿಸಿ ಮರುಬಿಡುಗಡೆ ತಯಾರಿ ನಡೆಸಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ.

ಇನ್ನು 'ಬಾಹುಬಲಿ ದಿ ಎಪಿಕ್' ಚಿತ್ರದ ಕೊನೆಯಲ್ಲಿ 'ಬಾಹುಬಲಿ- 3' ಬಗ್ಗೆ ಸುಳಿವು ಸಿಗಬಹುದು ಎನ್ನಲಾಗ್ತಿದೆ. ಸದ್ಯ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಇದಕ್ಕೆ ನಾಂದಿ ಹಾಡಿದು ಇದೇ 'ಬಾಹುಬಲಿ'. ಬಳಿಕ 'ಕೆಜಿಎಫ್' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದು ಸಕ್ಸಸ್ ಕಂಡಿತ್ತು. ಪಾರ್ಟ್- 3 ಮಾಡುವುದಾಗಿ ಚಿತ್ರತಂಡ ಹೇಳಿದೆ. ಚಾಪ್ಟರ್- 2 ಕೊನೆಯಲ್ಲಿ ಚಾಪ್ಟರ್- 3 ಬಗ್ಗೆ ಸುಳಿಸು ಸಿಕ್ಕಿತ್ತು.

ಬಳಿಕ ಸುಕುಮಾರ್ ಎರಡು ಭಾಗಗಳಾಗಿ 'ಪುಷ್ಪ' ಸಿನಿಮಾ ತೆರೆಗೆ ತಂದಿದ್ದರು. 2ನೇ ಭಾಗದಲ್ಲಿ ಕಥೆ ಮುಗೀತು ಎಂದುಕೊಂಡಿದ್ದವರಿಗೆ ಪಾರ್ಟ್- 3 ಮಾಡುವುದಾಗಿ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಕೊಟ್ಟಿದ್ದರು. ಸದ್ಯ 'ಕಾಂತಾರ- 1' ಚಿತ್ರದ ಕೊನೆಗೆ ಚಾಪ್ಟರ್-2 ಮಾಡುವುದಾಗಿ ಚಿತ್ರತಂಡ ಹೇಳಿದೆ. ಯಾವಾಗ ಎನ್ನುವುದು ಪಕ್ಕಾ ಆಗದೇ ಇದ್ದರೂ ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ಇದೀಗ 'ಬಾಹುಬಲಿ ದಿ ಎಪಿಕ್' ಕೊನೆಯಲ್ಲಿ ಕೂಡ ಇಂಥದ್ದೇ ಟ್ವಿಸ್ಟ್ ಸಿಗಬಹುದು ಎನ್ನುವ ಚರ್ಚೆ ಶುರುವಾಗಿದೆ.

ಬಲ್ಲಾಳದೇವ ಅಂತ್ಯ ಹಾಗೂ ಮಹೇಂದ್ರ ಬಾಹುಬಲಿ ಪಟ್ಟಭಿಷೇಕದೊಂದಿಗೆ 'ಬಾಹುಬಲಿ- 2' ಕಥೆ ಮುಗಿದಿತ್ತು. ಮತ್ತೊಂದು ಸೀಕ್ವೆಲ್ ಮಾಡುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. 'ಬಾಹುಬಲಿ' ಕಥೆಯನ್ನು ಮುಂದಿನ ದಿನಗಳಲ್ಲಿ ಕಾರ್ಟೂನ್‌ ಸಿನಿಮಾಗಳಾಗಿ ಬೇರೆ ಬೇರೆ ರೀತಿಯಲ್ಲಿ ಕಟ್ಟಿಕೊಡುವುದಾಗಿ ಜಕ್ಕಣ್ಣ ಹೇಳಿದ್ದರು. ಇತ್ತೀಚೆಗೆ 'ಬಾಹುಬಲಿ: ದಿ ಕ್ಲೌನ್ ಆಫ್ ಬ್ಲೆಡ್' ಆನಿಮೇಟೆಡ್ ಪ್ರೀಕ್ವೆಲ್ ವೆಬ್ ಸೀರಿಸ್ ಬಂದಿತ್ತು.

2015ರಲ್ಲಿ ಸ್ವತಃ ರಾಜಮೌಳಿ ಟ್ವೀಟ್ ಮಾಡಿ 'ಬಾಹುಬಲಿ- 3' ಸಿನಿಮಾ ಖಂಡಿ ಬರುತ್ತದೆ. ಆದರೆ ಈಗ ಎರಡು ಭಾಗಕ್ಕೆ ಬೇಕಾದ ಕಥೆ ಮಾಡಿದ್ದೇವೆ ಅದು ಮುಗಿದಿದೆ. ಮುಂದಿನ ದಿನಗಳಲ್ಲಿ ಭಾಗ-3 ಬರುತ್ತದೆ ಎಂದಿದ್ದರು. ಹಾಗಾಗಿ ಈಗ 'ಬಾಹುಬಲಿ: ದಿ ಎಪಿಕ್' ಕ್ಲೈಮ್ಯಾಕ್ಸ್‌ನಲ್ಲಿ ಅನೌನ್ಸ್ ಮಾಡಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ರಾಜಮೌಳಿ ಸದ್ಯ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ತೆರೆಗೆ ಬರಲು ಇನ್ನು 2 ವರ್ಷ ಬೇಕಾಗಬಹುದು.

ಪ್ರಭಾಸ್ ಕೂಡ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಕೂಡ 'ಬಾಹುಬಲಿ' -3 ಚಿತ್ರದಲ್ಲಿ ಸದ್ಯಕ್ಕೆ ನಟಿಸುವುದು ಅನುಮಾನ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. ಕಟ್ಟಪ್ಪ ಪಾತ್ರದ ಹಿನ್ನೆಲೆ ಬಗ್ಗೆ ಸಿನಿಮಾ ಮಾಡಲು ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಶೀಘ್ರದಲ್ಲೇ ಜಕ್ಕಣ್ಣ ಗುಡ್ ನ್ಯೂಸ್ ಕೊಡ್ತಾರಾ ಕಾದು ನೋಡಬೇಕಿದೆ.

More from Filmibeat

English summary
Is Baahubali 3 Coming? Re-Release of The Epic Sparks Discussion
Read more about: baahubali rajamouli prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X