Anand Deverakonda: ಬೇಬಿ ಖ್ಯಾತಿಯ ನಟ ಆನಂದ್ ದೇವರಕೊಂಡ ಮುಂದಿನ ಸಿನಿಮಾ 'ಗಂ ಗಂ ಗಣೇಶಾ'
ಈ ವರ್ಷ ತೆಲುಗು ಸಿನಿಮಾ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರ ಬೇಬಿ. ಬೇಬಿ ಖ್ಯಾತಿಯ ನಟ ಆನಂದ್ ದೇವರಕೊಂಡ ಅವರ ಮುಂದಿನ ಚಿತ್ರ ಗಂ ಗಂ ಗಣೇಶಾ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟ ಆನಂದ್ ಅಭಿನಯದ ಸಿನಿಮಾಗೆ ಉದಯ್ ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ.
ಗಂ ಗಂ ಗಣೇಶಾ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಉದಯ್ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೈಲೈಫ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೇದಾರ್ ಸೆಲಗಮಶೆಟ್ಟಿ ಮತ್ತು ವಂಶಿ ಕರುಮಂಚಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಫಸ್ಟ್ ಲುಕ್‌ನಲ್ಲಿ ಆನಂದ್ ದೇವರಕೊಂಡ ಎರಡು ರೈಫಲ್‌ಗಳನ್ನು ಹಿಡಿದುಕೊಂಡು ನಗುತ್ತಿದ್ದಾರೆ. ಅವರ ಹಿನ್ನಲೆಯಲ್ಲಿ ಹಾರುವ ಕಾರು, ವ್ಯಾನ್ ಮತ್ತು ವಿಂಡ್‌ಮಿಲ್‌ನ ಚಿತ್ರಗಳಿವೆ. ಗಂ ಗಂ ಗಣೇಶಾ ಚಿತ್ರಕ್ಕೆ ಚೈತನ್ ಭಾರದ್ವಾಜ್ ಸಂಗೀತ ಸಂಯೋಜಕರಾಗಿದ್ದು, ಕಾರ್ತಿಕ್ ಶ್ರೀನಿವಾಸ್ ಆರ್ ಚಿತ್ರದ ಸಂಕಲನಕಾರರಾಗಿದ್ದಾರೆ.
ಫಸ್ಟ್ ಲುಕ್ ಹಂಚಿಕೊಂಡಿರುವ ಆನಂದ್ ದೇವರಕೊಂಡ ಪೋಸ್ಟರ್‌ಗೆ ಶೀರ್ಷಿಕೆ ನೀಡಿದ್ದು, ಇದು ಆಕ್ಷನ್ ಚಿತ್ರವೋ ಅಥವಾ ಹಾಸ್ಯ ಸಿನಿಮಾವೂ, ಇನ್ನಷ್ಟು ತಿಳಿಯಲು ನಿರೀಕ್ಷಿಸಿ.... ಎಂದಿದ್ದಾರೆ. ಹೈದರಾಬಾದ್‌ನ ಖಾಸಗಿ ಸ್ಟುಡಿಯೋದಲ್ಲಿ ಈಗಾಗಲೇ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಈಗಾಗಲೇ ಗಂ ಗಂ ಗಣೇಶಾ ಚಿತ್ರದ ಪ್ರಚಾರವನ್ನು ಚಿತ್ರತಂಡ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಿದ್ದಾರೆ. ಆನಂದ್ ದೇವರಕೊಂಡ ಕೊನೆಯದಾಗಿ ಬೇಬಿ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಯಿ ರಾಜೇಶ್ ನಿರ್ದೇಶನದ ಲವ್, ರೊಮ್ಯಾಂಟಿಕ್ ಡ್ರಾಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ವಿಯಾಯಿತು.
ಆನಂದ್ ದೇವರಕೊಂಡ ತಮ್ಮ ಇತ್ತೀಚಿನ ಚಿತ್ರ ಬೇಬಿ ಯಶಸ್ಸಿನ ಅಲೆಯಲ್ಲಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 90 ಕೋಟಿ ರೂಪಾಯಿ ಗಳಿಸಿದೆ. ಆನಂದ್ ಜೊತೆಗೆ ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಒಂದೇ ಸಮಯದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡುವ ಯುವತಿಯ ಕುರಿತು ಇದ್ದು, ಉತ್ತಮ ನಿರೂಪಣೆಯೊಂದಿಗೆ ಜನರ ಮನದಲ್ಲಿ ಸ್ಥಾನ ಗಳಿಸಿಕೊಂಡಿದೆ.

ಒಟಿಟಿಯಲ್ಲಿ ಬೇಬಿ
'ಆಹಾ' ಒಟಿಟಿ ವೇದಿಕೆಯಲ್ಲಿ ಬೇಬಿ ಈಗಾಗಲೇ ಬಿಡುಗಡೆಯಾಗಿದೆ. ಚಿತ್ರವು ಆಗಸ್ಟ್ 25, 2023 ರಂದು ಸ್ಟ್ರೀಮಿಂಗ್ ಮಾಡಲು ಪ್ರಾರಂಭಿಸಿದೆ. ಬಿಡುಗಡೆಯಾದ ಕೇವಲ 32 ಗಂಟೆಗಳಲ್ಲಿ, ಚಲನಚಿತ್ರವು 100 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದಿದೆ. ಈಗ ಚಿತ್ರವು ಒಟಿಟಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ನಟ ಗಂ ಗಂ ಗಣೇಶಾ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











