Baby Movie: 21 ದಿನ ಕಳೆದ್ರೂ ಕರ್ನಾಟಕದಲ್ಲಿ 125+ ಸ್ಕ್ರೀನ್‌ಗಳಲ್ಲಿ ಬೇಬಿ ಪ್ರದರ್ಶನ; ಮಾಡಿದ ಕಲೆಕ್ಷನ್ ಎಷ್ಟು?

ಈ ವರ್ಷದ ಮೊದಲಾರ್ಧವನ್ನು ಮುಗಿಸಿ ದ್ವಿತೀಯಾರ್ಧಕ್ಕೆ ಕಾಲಿಟ್ಟಿರುವ ವಿವಿಧ ಚಿತ್ರರಂಗಗಳು ಜುಲೈ ತಿಂಗಳಿನಲ್ಲಿಯೇ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುವುದರ ಮೂಲಕ ಶುಭಾರಂಭ ಮಾಡಿವೆ. ಹೌದು, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಈ ಎಲ್ಲಾ ಚಿತ್ರರಂಗಗಳೂ ಸಹ ಜುಲೈ ತಿಂಗಳಿನಲ್ಲಿ ಹಿಟ್ ಚಿತ್ರಗಳನ್ನು ನೀಡಿವೆ.

ಇನ್ನು ತೆಲುಗು ಚಿತ್ರರಂಗದ ಪರ ಬೇಬಿ ಚಿತ್ರ ಜುಲೈ ತಿಂಗಳಿನಲ್ಲಿ ದೊಡ್ಡ ಮಟ್ಟದ ಹಿಟ್ ಬಾರಿಸಿದ ಸಿನಿಮಾ ಎನಿಸಿಕೊಂಡಿದೆ. ಹೌದು, ಜುಲೈ 14ರಂದು ಬಿಡುಗಡೆಗೊಂಡ ಬೇಬಿ ಚಿತ್ರ ಸದ್ಯ ಹತ್ತು ದಿನಗಳ ಪ್ರದರ್ಶನವನ್ನು ಪೂರೈಸಿದ್ದು ಈಗಾಗಲೇ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ಹೀಗೆ ದೊಡ್ಡಮಟ್ಟದಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡಿರುವ ಬೇಬಿ ಚಿತ್ರ ಕರ್ನಾಟಕದಲ್ಲಿಯೂ ಸಹ ಸ್ಟಾರ್ ನಟರ ಚಿತ್ರಗಳು ಸದ್ದು ಮಾಡುವ ಹಾಗೆ ಶೋಗಳನ್ನು ಪಡೆದುಕೊಂಡು ಗಳಿಕೆ ಮಾಡುತ್ತಿದೆ.

Baby movie: Baby grossed 5 crore in 21 days at Karnataka Box Office

ಸದ್ಯ ಬೇಬಿ ಚಿತ್ರ ತನ್ನ 21 ದಿನಗಳ ಪ್ರದರ್ಶನವನ್ನು ಪೂರೈಸಿದ್ದು, ಕರ್ನಾಟಕವೊಂದರಲ್ಲಿಯೇ ಬರೋಬ್ಬರಿ 4.8 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇಷ್ಟು ದಿನಗಳು ಕಳೆದ ನಂತರ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳಿಂದಲೂ ತೆಗೆಯಲ್ಪಟ್ಟಿದ್ದೇ ಹೆಚ್ಚು. ಆದರೆ ಬೇಬಿ ವಿಷಯದಲ್ಲಿ ಹಾಗಾಗಲಿಲ್ಲ. ಬೇಬಿ ಚಿತ್ರ 21 ದಿನಗಳನ್ನು ಪೂರೈಸಿದ ನಂತರವೂ ಸಹ ರಾಜ್ಯದ 125ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಈ ರೀತಿ ಇಷ್ಟು ದಿನಗಳ ಬಳಿಕವೂ ಪರಭಾಷಾ ಸಿನಿಮಾವೊಂದು ಇಷ್ಟರ ಮಟ್ಟಿಗಿನ ಚಿತ್ರಮಂದಿರಗಳನ್ನು ಉಳಿಸಿಕೊಂಡ ಉದಾಹರಣೆ ಇಷ್ಟು ದಿನಗಳಲ್ಲಿ ಇರಲೇ ಇಲ್ಲ. ಸ್ಟಾರ್ ನಟರ ಹಾಗೂ ಬಿಗ್ ಬಜೆಟ್ ಚಿತ್ರಗಳಿಂದಲೂ ಸಾಧ್ಯವಾಗದೆ ಇದ್ದದ್ದನ್ನು ಯುವ ತಂಡದ ಬೇಬಿ ಚಿತ್ರ ಮಾಡಿ ಸದ್ದು ಮಾಡ್ತಿದೆ.

ಬೇಬಿ ಸದ್ಯ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಕೆಜಿ ರಸ್ತೆಯ ಸಪ್ನ ಚಿತ್ರಮಂದಿರ ಸೇರಿದಂತೆ ನಗರದ ಹಲವಾರು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.

ಬೇಬಿ ಒನ್‌ಲೈನ್ ಸ್ಟೋರಿ, ಕಥೆ ಏನು?

ಬೇಬಿ ಚಿತ್ರದ ಒನ್‌ಲೈನ್ ಸ್ಟೋರಿ ಹೇಳುವ ಪ್ರಯತ್ನ ಮಾಡಿದರೂ ಇಡೀ ಚಿತ್ರದ ಕಥೆಯನ್ನು ಹೇಳಿಬಿಟ್ಟಂತಾಗಲಿದೆ. ಚಿತ್ರದ ಟ್ರೈಲರ್ ನೋಡಿದರೂ ಸಹ ಸಿನಿಮಾ ನೋಡುವ ಹವ್ಯಾಸವಿರುವ ಸಿನಿ ರಸಿಕರು ಕಥೆಯನ್ನು ಸುಲಭವಾಗಿ ಊಹಿಸಿಬಿಡ್ತಾರೆ. ಅಷ್ಟೇ ಅಲ್ಲದೇ ಚಿತ್ರದ ಪೋಸ್ಟರ್ ಸಹ ತನ್ನ ಕಥೆಯನ್ನು ಬಿಟ್ಟುಕೊಟ್ಟಿದೆ ಎಂದೇ ಹೇಳಬಹುದು. ಸ್ಲಂನಲ್ಲಿ ಬೆಳೆದ ನಾಯಕಿ ಶಾಲಾ ದಿನಗಳಿಂದಲೂ ಅದೇ ಸ್ಲಂನಲ್ಲಿ ಇದ್ದ ನಾಯಕನನ್ನು ಪ್ರೀತಿಸಿ ಬಳಿಕ ಕಾಲೇಜು ಸೇರಿದ ಬಳಿಕ ಏನೆಲ್ಲಾ ಬದಲಾವಣೆಯಾಗ್ತಾಳೆ ಹಾಗೂ ಇದು ಆಕೆಯ ಜೀವನದಲ್ಲಿ ಏನೆಲ್ಲಾ ಅವಾಂತರ ಸೃಷ್ಟಿಸುತ್ತೆ ಎನ್ನುವುದೇ ಬೇಬಿ ಚಿತ್ರದ ಒನ್‌ಲೈನ್ ಕಥೆ.

ಈ ರೀತಿಯ ಕಥೆಯನ್ನು ಆಧರಿಸಿ ಈಗಾಗಲೇ ತುಂಬಾ ಸಿನಿಮಾಗಳು ಬಂದಿವೆಯಾದರೂ ಅವೆಲ್ಲವನ್ನೂ ಹಿಂದಿಕ್ಕಿ ಬೇಬಿ ಸ್ಪೆಷಲ್ ಎನಿಸುವುದಕ್ಕೆ ಕಾರಣ ಚಿತ್ರದಲ್ಲಿರುವ ಮಾಡರ್ನ್ ಯುಗದ ಸ್ಕ್ರೀನ್‌ಪ್ಲೇ. ಹೌದು, ಈಗಿನ ಐ ಫೋನ್ ಯುಗದಲ್ಲಿ ಹುಡುಗಿಯರ ಚಂಚಲ ಮನಸ್ಸು ಯಾರ ಮಾತಿನಿಂದ ಏನೆಲ್ಲಾ ಸ್ಪೂರ್ತಿಗೊಳ್ಳುತ್ತೆ, ಮೂರ್ಖತನವನ್ನು ಹೇಗೆ ಅಳವಡಿಸಿಕೊಳ್ಳುತ್ತೆ ಹಾಗೂ ಇದರಿಂದ ಏನೆಲ್ಲಾ ಕಷ್ಟಗಳನ್ನು ಅನುಭವಿಸ್ತಾರೆ ಎಂಬುದನ್ನು ನಿರ್ದೇಶಕ ಶ್ರೀ ರಾಜೇಶ್ ನೀಲಮ್ ತುಂಬಾ ಅರ್ಥಗರ್ಭಿತವಾಗಿ ಬರೆದು ನಿರ್ದೇಶಿಸಿದ್ದಾರೆ. ನಾಯಕನಾಗಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ನಾಯಕಿಯಾಗಿ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ.

More from Filmibeat

English summary
Baby movie: Baby grossed 5 crore in 21 days at Karnataka Box Office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X