Baby Movie 10th Day Collection: ಹತ್ತನೇ ದಿನದ ಕಲೆಕ್ಷನ್ ಅಬ್ಬಬ್ಬಾ; ತೆಲುಗಿನ ಯಾವ ಚಿತ್ರವೂ ಈ ದಾಖಲೆ ಮಾಡಿಲ್ಲ!

ಕಳೆದ ವರ್ಷದ ಹಾಗೆ ಈ ವರ್ಷವೂ ಸಹ ಸಣ್ಣ ಬಜೆಟ್‌ನ ಚಿತ್ರಗಳ ಬಾಕ್ಸ್ ಆಫೀಸ್ ಪರಾಕ್ರಮವನ್ನು ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ರೋಮಾಚಂ ಹಾಗೂ 2018 ಚಿತ್ರಗಳು, ಕಾಲಿವುಡ್‌ನಲ್ಲಿ ಗುಡ್ ನೈಟ್ ಹಾಗೂ ಪೋರ್ ತೊಳಿಲ್ ಸಿನಿಮಾಗಳು ಹಾಗೂ ಸದ್ಯ ಕನ್ನಡದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಟ್ರೆಂಡಿಂಗ್‌ನಲ್ಲಿರುವ ಸ್ಟಾರ್‌ಗಳು ನಟಿಸದೇ ಇದ್ದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿವೆ.

ಈ ಚಿತ್ರಗಳ ಹಾಗೆ ತೆಲುಗು ಬಾಕ್ಸ್ ಆಫೀಸ್‌ನಲ್ಲಿ ಯುವ ಕಲಾವಿದರ ಹಲವು ಚಿತ್ರಗಳು ಅಬ್ಬರಿಸಿವೆ. ಮೊದಲಿಗೆ ಬಳಗಂ ಚಿತ್ರದ ಮೂಲಕ ಶುರುವಾದ ಯುವ ಕಲಾವಿದರ ಬಾಕ್ಸ್ ಆಫೀಸ್ ಆರ್ಭಟ ಸದ್ಯ ಸಾಮವರಗಮನ ಹಾಗೂ ಬೇಬಿ ಚಿತ್ರಗಳ ಮೂಲಕ ಮುಂದುವರಿದಿದೆ. ಹೌದು, ಜುಲೈ 14ರಂದು ಬಿಡುಗಡೆಗೊಂಡ ಬೇಬಿ ಚಿತ್ರ ಸದ್ಯ ಹತ್ತು ದಿನಗಳ ಪ್ರದರ್ಶನವನ್ನು ಪೂರೈಸಿದ್ದು ಈಗಾಗಲೇ 50 ಕೋಟಿ ಕ್ಲಬ್ ಸೇರಿದೆ.

Baby Movie Box Office Collection

ದೊಡ್ಡ ತಾರಾಗಣವಿಲ್ಲದೇ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ ಬರೋಬ್ಬರಿ 7.1 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಬೇಬಿ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದರು. ಹೀಗೆ ಸ್ಟಾರ್‌ಗಳೇ ಇಲ್ಲದ ಈ ಚಿತ್ರ ಇಷ್ಟು ದೊಡ್ಡ ಓಪನಿಂಗ್ ಪಡೆದುಕೊಳ್ಳುವುದು ಮಾತ್ರವಲ್ಲದೇ ನಂತರದ ದಿನಗಳಲ್ಲಿಯೂ ಸಹ ಅದೇ ರೀತಿಯ ಕಲೆಕ್ಷನ್ ಮಾಡಿದೆ.

ಇನ್ನು ಈ ಬೇಬಿ ಚಿತ್ರ ಹತ್ತನೇ ದಿನ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮಿಡ್ ರೇಂಜ್ ( ಮಧ್ಯಮ ವೆಚ್ಚದ ಬಜೆಟ್‌ನ ಸಿನಿಮಾ ) ಚಿತ್ರ ಎನಿಸಿಕೊಂಡಿದೆ. ಹಾಗಾದರೆ ಹತ್ತನೇ ದಿನ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಮಿಡ್ ರೇಂಜ್ ತೆಲುಗು ಸಿನಿಮಾಗಳು ಯಾವುವು ಹಾಗೂ ಬೇಬಿ ಚಿತ್ರದ ಹತ್ತು ದಿನಗಳ ಕಲೆಕ್ಷನ್ ಎಷ್ಟು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಬೇಬಿ ಚಿತ್ರದ ಹತ್ತು ದಿನಗಳ ಕಲೆಕ್ಷನ್:

1ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 6.55 CR ಗ್ರಾಸ್ ಕಲೆಕ್ಷನ್

2ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 6.75 CR ಗ್ರಾಸ್ ಕಲೆಕ್ಷನ್

3ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 7.90 CR ಗ್ರಾಸ್ ಕಲೆಕ್ಷನ್

4ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 7.40 CR ಗ್ರಾಸ್ ಕಲೆಕ್ಷನ್

5ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 6.30 CR ಗ್ರಾಸ್ ಕಲೆಕ್ಷನ್

6ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 5 CR ಗ್ರಾಸ್ ಕಲೆಕ್ಷನ್

7ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 4.20 CR ಗ್ರಾಸ್ ಕಲೆಕ್ಷನ್

8ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 4.05 CR ಗ್ರಾಸ್ ಕಲೆಕ್ಷನ್

9ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 4.90 CR ಗ್ರಾಸ್ ಕಲೆಕ್ಷನ್

10ನೇ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್- 6.85 CR ಗ್ರಾಸ್ ಕಲೆಕ್ಷನ್


ಹತ್ತನೇ ದಿನ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ತೆಲುಗು ಚಿತ್ರಗಳು ( ಮೀಡಿಯಮ್ ಬಜೆಟ್‌ನ ಚಿತ್ರಗಳು )

ಬೇಬಿ - 3.40 ಕೋಟಿ

ಉಪ್ಪೆನಾ - 2.61 ಕೋಟಿ

ವಿರೂಪಾಕ್ಷ - 2.38 ಕೋಟಿ

ಫಿದಾ - 1.89 ಕೋಟಿ

ಪ್ರತಿರೋಜು ಪಂಡಗೆ - 1.88 ಕೋಟಿ

ಈ ಮೂಲಕ ಬೇಬಿ ಚಿತ್ರ ಮುರಿಯಲು ಕಷ್ಟವಾಗಿದ್ದ ಉಪ್ಪೆನಾ ಚಿತ್ರದ ಹತ್ತನೇ ದಿನದ ಕಲೆಕ್ಷನ್ ಅನ್ನು ಬೇಬಿ ಚಿತ್ರ ಕೊನೆಗೂ ಮುರಿದು ಹಾಕಿದೆ.

More from Filmibeat

English summary
Baby movie collection: Baby becomes the highest 10th day grosser among mid range movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X