ಅಕ್ಕಿನೇನಿ ಮನೆಗೆ ಹೊಸ ಅತಿಥಿ, ಮದುವೆ ಆದ ಐದೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ಶೋಭಿತಾ ?

ನಮ್ಮಲ್ಲಿ ಕೆಲವರು ಹೇಗೆ ಅಂದರೆ ಮದ್ವೆ ವಯಸ್ಸಾದರೆ ಇನ್ನೂ ಮದ್ವೆಯಾಗಿಲ್ವಾ ಎಂದು ಹೋದಲ್ಲಿ, ಬಂದಲ್ಲಿ ಕೇಳಲು ಶುರು ಮಾಡುತ್ತಾರೆ. ಇನ್ನೂ ಮದ್ವೆಯಾದರೆ, ಆರು ತಿಂಗಳು ಕೂಡ ಕಳೆದಿರುವುದಿಲ್ಲ. ಅಷ್ಟರಲ್ಲಿಯೇ ಬಂದು ಏನು ಗುಡ್ ನ್ಯೂಸ್ ಇಲ್ವಾ ಎಂಬ ಪ್ರಶ್ನೆ ಕೇಳಲು ಶುರುಮಾಡುತ್ತಾರೆ. ಆಗ ಇಲ್ಲ ಎಂದು ಹೇಳಿದರೆ ಮುಗಿಯಿತು. ಅರೇ.. ಇನ್ನೂ ಮಗುನೇ ಆಗಿಲ್ವಂತೆ ಎನ್ನುವ

ವಿಚಾರಕ್ಕೆ ಬಗೆ ಬಗೆಯ ಬಣ್ಣ ಬಳಿದು ಸಂಬಂಧಕ್ಕೆ ಕೊಳ್ಳಿ ಇಡುತ್ತಾರೆ . ನಾನಾ ತರಹದ ಮಾತುಗಳನ್ನಾಡುತ್ತಾರೆ. ಇನ್ನು ಅಪ್ಪಿ ತಪ್ಪಿ ಗುಡ್ ನ್ಯೂಸ್ ಇದೆ ಎಂದು ಹೇಳಿದರೆ, ಎಲ್ಲಿ ಬೇಬಿ ಬಂಪ್ ಕಾಣ್ತಾನೇ ಇಲ್ಲವಲ್ಲಾ ಎನ್ನುತ್ತಾರೆ. ಕಾಣದಿದ್ದರೂ ಕೂಡ ಬೇಬಿ ಬಂಪ್ ಕಾಣುತ್ತಿದೆ ಎಂದು ಪುಕಾರು ಹಬ್ಬಿಸುತ್ತಾರೆ. ಇದಕ್ಕೆ ಶೋಭಿತಾ ಧುಲಿಪಾಲ ಸದ್ಯದ ಉದಾಹರಣೆ.

baby-on-the-way-for-sobhita-naga-chaitanya-the-truth-behind-the-buzz

ಹೌದು, ಅಸಲಿಗೆ ನಾಗಚೈತನ್ಯ ಮತ್ತು ಶೋಭಿತಾ ಧುಲಿಪಾಲ ಮುಂಬೈನಲ್ಲಿ ನಡೆದ WAVES 2025 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಶೋಭಿತಾ ಅವರ ಮಾವ ನಾಗಾರ್ಜುನ ಕೂಡ ಇದ್ದರು. ಈ ಕಾರ್ಯಕ್ರಮಕ್ಕೆ ಶೋಭಿತಾ ಸೀರೆಯನ್ನು ಧರಿಸಿದ್ದರು.

ಹೀಗಾಗಿ ಶೋಭಿತಾ ಅವರ ಸೀರೆಯ ವಿಶೇಷತೆಯನ್ನು ಚರ್ಚೆ ಮಾಡುತ್ತಿದ್ದ ಅನೇಕರಿಗೆ ಶೋಭಿತಾ ತಮ್ಮ ಸೀರೆಯ ಅಂಚನ್ನು ಕೈಯಲ್ಲಿ ಹಿಡಿದುಕೊಂಡು ಹೊಟ್ಟೆ ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಭಾಸವಾಯಿತು. ನೋಡ ನೋಡುತ್ತಾ ಶೋಭಿತಾ ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆದವು.

ಇದೆಲ್ಲದರ ಫಲಶ್ರುತಿ ಎನ್ನುವಂತೆ ಇದೀಗ ಶೋಭಿತಾ ಮದ್ವೆಯಾದ ಐದೇ ತಿಂಗಳಿಗೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಪಕ್ಕದ ಆಂಧ್ರದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ಕೂಡ ನಡೆಯುತ್ತಿದೆ.

ಇನ್ನು ಸಾಮಾನ್ಯವಾಗಿ ನಟಿಯರು ಗರ್ಭಿಣಿಯಾದಾಗ ಸಡಿಲವಾದ, ಅಗಲವಾದ ಬಟ್ಟೆ ಧರಿಸಿಕೊಳ್ಳುವುದು ವಾಡಿಕೆ. ಹೀಗಾಗಿಯೇ ಶೋಭಿತಾ ಅವರ ಲುಕ್ ನೋಡಿದ ಅನೇಕರು ಶೋಭಿತಾ ಗರ್ಭಿಣಿಯಾಗಿರುವುದು ನಿಜಾ ಎಂದುಕೊಂಡಿದ್ದರು. ತಮ್ಮ ಪ್ರೆಗ್ನೆಸಿ ವಿಚಾರ ಗೊತ್ತಾಗಬಾರದು ಎಂದು ಶೋಭಿತಾ ಸಡಿಲ ಬಟ್ಟೆ ಹಾಕಿಕೊಂಡಿದ್ದಾರೆ ಎಂದು ಅಂದುಕೊಂಡಿದ್ದರು.

ಆದರೆ ವಾಸ್ತವದಲ್ಲಿ ಇದು ಸುಳ್ಳು. ಈ ವಿಚಾರದ ಕುರಿತು ಶೋಭಿತಾ ಅವರ ಅತ್ಯಾಪ್ತರೇ ಟೈಮ್ಸ್ ಆಫ್ ಇಂಡಿಯಾಗೆ ಹೇಳಿಕೆಯನ್ನು ನೀಡಿದ್ದಾರೆ. ಶೋಭಿತಾ ಹಾಕಿಕೊಂಡಿದ್ದು ಮ್ಯಾಟರ್ನಿಟಿ ಡ್ರೆಸ್ ಅಲ್ಲ ಬದಲಾಗಿ ಆಂಟಿ-ಫಿಟ್ ಡ್ರೆಸ್ ಎಂದು ಹೇಳಿರುವ ಶೋಭಿತಾ ಆಪ್ತರು, ಈಗೀಗ ಹೇಗಾಗಿದೆ ಎಂದರೆ ಮದುವೆಯ ನಂತರ ಹಾಕಿಕೊಳ್ಳುವ ಬಟ್ಟೆಯ ಶೈಲಿ ಬದಲಾದರೆ ಸಾಕು ಹೊಸ ಕಥೆ ಹುಟ್ಟುತ್ತೆ ಎಂದು ಹೇಳಿದ್ದಾರೆ. ಗರ್ಭಿಣಿ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಸದ್ಯ ಶೋಭಿತಾ ತಮ್ಮ ವೃತ್ತಿ ಜೀವನದ ಕಡೆ ಗಮನ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಅಂತೆ ಕಂತೆಗಳಿಗೆಲ್ಲ ತೆರೆ ಎಳೆದಿದ್ದಾರೆ.

More from Filmibeat

English summary
Is there a baby on the way for Sobhita Dhulipala and Naga Chaitanya? Just five months after their dreamy Telugu wedding, fans spotted something curious—a “hidden bump” moment at WAVES 2025 in Mumbai! Sobhita’s saree has everyone talking. Scroll down for the truth behind the whispers!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X