For Quick Alerts
  ALLOW NOTIFICATIONS  
  For Daily Alerts

  ದಯನೀಯ ಸ್ಥಿತಿಯಲ್ಲಿ ನಾರಾಯಣ ಮೂರ್ತಿ: ಸತ್ಯಾಂಶ ಬಿಚ್ಚಿಟ್ಟ ನಟ

  |

  ತೆಲುಗು ಸಿನಿಮಾರಂಗದಲ್ಲಿ 'ಕ್ರಾಂತಿಕಾರಿ ಸಿನಿಮಾಗಳು' ಎಂಬ ಪ್ರತ್ಯೇಕ ವಿಭಾಗವನ್ನೇ ಪ್ರಾರಂಭಿಸಿದ ಶ್ರೇಯ ಆರ್.ನಾರಾಯಣ್ ಅವರಿಗೆ ಸಲ್ಲಬೇಕು. ಆದರೆ ಇತ್ತೀಚೆಗೆ ಸಿನಿಮಾರಂಗದಲ್ಲಿ ಆದ ಬದಲಾವಣೆಯಿಂದ ಕ್ರಾಂತಿಕಾರಿ ಸಿನಿಮಾಗಳ ಸ್ಟಾರ್ ನಟ ಆರ್.ನಾರಾಯಣ ಮೂರ್ತಿ ಆರ್ಥಿಕವಾಗಿ ಬಹಳ ಕುಸಿದಿದ್ದಾರೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

  ಕ್ರಾಂತಿಕಾರಿ ಕವಿ, ನಟ ಗದ್ದರ್ ಸಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ''ಆರ್‌.ನಾರಾಯಣ ಮೂರ್ತಿಗೆ ನಾನು ಕರೆ ಮಾಡಿ ಸಹಾಯ ಮಾಡುತ್ತೇನೆ ಎಂದೆ ಆದರೆ ಆತ ನಿರಾಕರಿಸಿದ'' ಎಂದಿದ್ದರು. ಇದರಿಂದ ನಾರಾಯಣ ಮೂರ್ತಿ ಅವರ ಆರ್ಥಿಕ ಅಧೋಗತಿ ಸುದ್ದಿಗಳಿಗೆ ಇನ್ನಷ್ಟು ಪುಷ್ಠಿ ದೊರೆಯಿತು.

  ನಾರಾಯಣ ಮೂರ್ತಿ ತಮ್ಮ ಮನೆ ಬಾಡಿಗೆ ಕಟ್ಟಲಾಗದೆ ಹಳ್ಳಿಯಲ್ಲಿ ಹೋಗಿ ತೋಟದ ಗುಡಿಸಿನಲ್ಲಿ ನೆಲೆಸಿದ್ದಾರೆ ಅಲ್ಲೇ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಇದಕ್ಕೆಲ್ಲ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ ಆರ್.ನಾರಾಯಣ್.

  ''ನಾನು ದಿವಾಳಿ ಆಗಿದ್ದೇನೆ ಎಂಬುದು ಸುಳ್ಳು. ಹೌದು ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಮನೆಯೊಂದನ್ನು ಕಟ್ಟಿಕೊಳ್ಳಬಹುದಾದಷ್ಟು ಸಂಪಾದನೆ ಮಾಡಿದ್ದೆ. ಆದರೆ ನಾನು ಬೇಕೆಂದೇ ಮನೆ ಕಟ್ಟಿಕೊಳ್ಳಲಿಲ್ಲ. ಏಕೆಂದರೆ ಅದು ನನಗೆ ಇಷ್ಟವಿರಲಿಲ್ಲ'' ಎಂದಿದ್ದಾರೆ ನಾರಾಯಣ ಮೂರ್ತಿ.

  ''ಹಲವರು ಮನೆ, ಆಸ್ತಿ ಕೊಡಲು ಬಂದರು, ನಾನು ಸ್ವೀಕರಿಸಲಿಲ್ಲ''

  ''ಹಲವರು ಮನೆ, ಆಸ್ತಿ ಕೊಡಲು ಬಂದರು, ನಾನು ಸ್ವೀಕರಿಸಲಿಲ್ಲ''

  ''ದಾಸರಿ ನಾರಾಯಣ್ ಅವರು ನನಗೆ ಮೂರು ಬೆಡ್‌ರೂಮ್‌ನ ಮನೆ ನೀಡಲು ಮುಂದೆ ಬಂದಿದ್ದರು ಆದರೆ ನಾನು ಬೇಡವೆಂದೆ. ಮಾಜಿ ಸಿಎಂ, ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿಯವರು, ''ನೀನು ಪ್ರಜೆಗಳಿಗಾಗಿ ಸಿನಿಮಾಗಳನ್ನು ಮಾಡುತ್ತೀಯ. ವಿಶಾಖಪಟ್ಟಣಂನಲ್ಲಿ ಫಿಲಂ ಸಿಟಿ ಕಟ್ಟು ನಾನು ನಿನಗೆ ಜಮೀನು ಕೊಡುತ್ತೇನೆ ಎಂದರು. ನಾನು ಬೇಡವೆಂದೆ. ಚಂದ್ರಬಾಬು ನಾಯ್ಡು ಸಹ ಸಹಾಯದ ಹಸ್ತ ಚಾಚಿದರು ನಾನು ಬೇಡವೆಂದೆ. ತೆಲಂಗಾಣ ಸಿಎಂ ಕೆಸಿಆರ್ ಅವರೂ ಸಹ ದೊಡ್ಡ ಮನೆ, ಆಸ್ತಿ ಕೊಡಲು ಮುಂದಾದರು ನಾನು ಬೇಡವೆಂದೆ ಏಕೆಂದರೆ ಅದು ನನ್ನ ಜೀವನ ಶೈಲಿ ಅಲ್ಲ'' ಎಂದಿದ್ದಾರೆ ನಾರಾಯಣ ಮೂರ್ತಿ.

  ''ನೆಮ್ಮದಿಯ ಜೀವನವನ್ನು ಬಡತನ ಎಂದು ಏಕೆ ಕರೆಯುತ್ತೀರಿ''

  ''ನೆಮ್ಮದಿಯ ಜೀವನವನ್ನು ಬಡತನ ಎಂದು ಏಕೆ ಕರೆಯುತ್ತೀರಿ''

  ''ಕೊರೊನಾ ಪ್ರಾರಂಭವಾದ ಮೇಲೆ ಹಳ್ಳಿಗೆ ವಾಸ್ತವ್ಯ ಬದಲಾಯಿಸಿದ್ದೇನೆ. ಇಲ್ಲಿಯೇ ತೋಟ, ನನ್ನ ಜನಗಳ ಜೊತೆಗೆ ಆರಾಮವಾಗಿದ್ದೇನೆ. ಈ ನೆಮ್ಮದಿಯನ್ನು ಬಡತನ ಎಂದು ಏಕೆ ಕರೆಯುತ್ತೀರಿ. ನನ್ನ ನೆಮ್ಮದಿಯನ್ನು ಕಸಿಯುವ ಕೆಲಸ ಏಕೆ ಮಾಡುತ್ತೀರಿ'' ಎಂದು ನಾರಾಯಣ ಮೂರ್ತಿ ಪ್ರಶ್ನೆ ಮಾಡಿದ್ದಾರೆ.

  ''ಗದ್ದರ್ ಅಣ್ಣ ಪ್ರೀತಿಯಿಂದ ಕರೆ ಮಾಡಿ ವಿಚಾರಿಸಿದರು ಅಷ್ಟೆ''

  ''ಗದ್ದರ್ ಅಣ್ಣ ಪ್ರೀತಿಯಿಂದ ಕರೆ ಮಾಡಿ ವಿಚಾರಿಸಿದರು ಅಷ್ಟೆ''

  ''ನಾನು ಹಳ್ಳಿಯಲ್ಲಿ ವಾಸಿಸುತ್ತಿರುವ ವಿಷಯ ತಿಳಿದು ಗದ್ದರ್ ಅಣ್ಣ ನನ್ನ ಮೇಲಿನ ಪ್ರೀತಿಯಿಂದ ಕರೆ ಮಾಡಿ ನನ್ನ ಮನೆಯಲ್ಲಿ ಇರು ಬಾ ಎಂದರು. ಹಣದ ಅವಶ್ಯಕತೆ ಇದ್ದರೆ ಕೊಡುತ್ತೇನೆ ಎಂದರು. ಅದನ್ನೇ ಅವರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ಅಷ್ಟೆ. ಅದಕ್ಕೆ ಬೇರೆ ಬಣ್ಣ ತುಂಬಬೇಡಿ. ನನ್ನನ್ನು ಪ್ರೀತಿಸುವ ಅಭಿಮಾನಿಗಳ ಮನಸ್ಸಿಗೆ ಬೇಸರವಾಗುವಂತೆ ಮಾಡಬೇಡಿ'' ಎಂದಿದ್ದಾರೆ ನಾರಾಯಣ ಮೂರ್ತಿ.

  Sandesh Prince ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Filmibeat Kannada
  ಸಂಪಾದಿಸಿದ ಹಣದಲ್ಲಿ ಮನೆ, ಕಾರು ಕೊಂಡಳ್ಳಿಲ್ಲ: ನಾರಾಯಣ ಮೂರ್ತಿ

  ಸಂಪಾದಿಸಿದ ಹಣದಲ್ಲಿ ಮನೆ, ಕಾರು ಕೊಂಡಳ್ಳಿಲ್ಲ: ನಾರಾಯಣ ಮೂರ್ತಿ

  ''ನನ್ನ ಹಲವು ಸಿನಿಮಾಗಳು ನೂರು ದಿನ ಓಡಿವೆ, ಸಿವ್ಲರ್ ಜ್ಯೂಬಿಲಿ ಆಚರಿಸಿಕೊಂಡಿವೆ. ಸಾಕಷ್ಟು ಹಣವನ್ನು ನಾನು ಸಂಪಾದಿಸಿದ್ದೇನೆ. ಆದರೆ ಆ ಹಣವನ್ನು ಮನೆ, ಕಾರು ಕೊಂಡುಕೊಳ್ಳಲು ಬಳಸುವುದು ನನಗೆ ಇಷ್ಟವಿರಲಿಲ್ಲ ಹಾಗಾಗಿ ನನಗೆ ಇಷ್ಟವಾಗುವ ಜಾಗದಲ್ಲಿ ಅದನ್ನು ಬಳಸಿದ್ದೇನೆ'' ಎಂದಿದ್ದಾರೆ ನಾರಾಯಣ ಮೂರ್ತಿ.

  English summary
  News spreading that actor, activist R Narayana Murthy is in bad financial situation. But actor said he is not in bad situation. he is leaving peacefull life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X